ಬೆಂಗಳೂರು : ಸಿಡಿ ಪ್ರಕರಣದ ಆರೋಪಿಗೆ ಲೀಗಲ್ ನಾಲೆಡ್ಜ್ ಇಲ್ಲದಿರಬಹುದು. ಅವರಿಗೆ ಈ ಪ್ರಕರಣದ ತೀವ್ರತೆ ಗೊತ್ತಿಲ್ಲ ಅನಿಸುತ್ತೆ. ಇಲ್ಲಿ ಗಂಭೀರ ತನಿಖೆ ನಡೆಯಬೇಕಾಗುತ್ತೆ ಎಂದು ಸಂತ್ರಸ್ತೆಯ ಪರ ವಕೀಲ ಜಗದೀಶ್ ಹೇಳಿದರು.
ತಮ್ಮ ನಿವಾಸದೆದುರು ಮಾತನಾಡಿದ ಅವರು, 164, 161ರಡಿ ದಾಖಲಾದ ಹೇಳಿಕೆಗಳನ್ನು ಇಟ್ಟುಕೊಂಡು ಐಒ ತನಿಖೆ ಮಾಡಬೇಕಾಗುತ್ತದೆ. ಅವರು ನಿಷ್ಪಕ್ಷಪಾತವಾಗಿ ಈ ತನಿಖೆ ಮಾಡಬೇಕಾಗುತ್ತದೆ. ಅವರು ಹಾಗೆಯೇ ತನಿಖೆ ಮಾಡ್ತಿದ್ದಾರೆಂದು ಭಾವಿಸುತ್ತೇನೆ ಎಂದರು.
ಜನ ಸಾಮಾನ್ಯರಿಗೆ ಕೂಡಲೇ ಬಂಧಿಸಿ ತಮ್ಮ ಶಕ್ತಿ ತೋರಿಸುವ ಕರ್ನಾಟಕದ ಪೊಲೀಸರು, ಒಬ್ಬ ವಿಐಪಿಯನ್ನ ಕೂಡ ಅರೆಸ್ಟ್ ಮಾಡಿ ತಮ್ಮ ಶಕ್ತಿ ಪ್ರದರ್ಶನ ಮಾಡಬೇಕಾಗುತ್ತದೆ. ಈ ಮೂಲಕ ಅವರು ಜನರಿಗೆ ನಂಬಿಕೆ ಕೊಡಬೇಕು.
ಜನಸಾಮಾನ್ಯರು ಒಂದು ಮಾಸ್ಕ್ ಹಾಕಿಲ್ಲ ಅಂತ ಕರೆತಂದು ಅಪರಾಧಿ ತೋರಿಸುವಾಗ, ಈ ಕೇಸ್ನಲ್ಲಿ ಆರೋಪಿ ನಾಲ್ಕು ದಿನ ಬಿಟ್ಟು ಬಂದು ಹೇಳಿಕೆ ಕೊಡುವೆ ಎಂದರೆ ಎಸ್ಐಟಿ ಲಿಬರ್ಟಿ ಕೊಡುತ್ತೆ. ಅದೇ ಜನಸಾಮಾನ್ಯನಿಗೆ ಕೊಡುತ್ತಿದ್ದರಾ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಸಿಡಿ ತನಿಖೆ ಮುಗಿದ ಬಳಿಕ ಟೀಕೆ ಮಾಡಲಿ, ಈಗ ಟೀಕೆ ಮಾಡುವ ಅಗತ್ಯವಿಲ್ಲ: ಪ್ರವೀಣ್ ಸೂದ್