ETV Bharat / state

ಸೂರ್ಯನ ಕುರಿತ ಅಧ್ಯಯನಕ್ಕೆ 'ಆದಿತ್ಯ ಎಲ್-1'

ಆದಿತ್ಯ ಎಲ್1 ಬಗ್ಗೆ ಮಾತನಾಡಿದ ಇಸ್ರೋ ಹಿರಿಯ ವಿಜ್ಞಾನಿವೊಬ್ಬರು, ಸೂರ್ಯನ ಅಧ್ಯಯನ ಶಕ್ತಿ ಹೆಚ್ಚಿಸಲು ಮಾರ್ಚ್ 2020ರಲ್ಲಿ ಮೊದಲ ಮೀಟಿಂಗ್ ಆಗಿತ್ತು. ಈ ಮಿಷನ್ ಕುರಿತ ಚಿತ್ರಣವನ್ನು ಅಲ್ಲಿ ವಿಜ್ಞಾನಿಗಳಿಗೆ ನೀಡಿ ಅವರ ಸಲಹೆಗಳನ್ನು ಸಂಗ್ರಹಿಸಲಾಯಿತು..

"Aditya L-1" for the study of the sun
ಸೂರ್ಯನ ಕುರಿತ ಅಧ್ಯಯನಕ್ಕೆ "ಆದಿತ್ಯ ಎಲ್-1"
author img

By

Published : Mar 17, 2021, 5:45 PM IST

ಬೆಂಗಳೂರು : ಸೂರ್ಯನ ವಾತಾವರಣ, ಸೂರ್ಯನ ತೋಪಾಲಜಿ, ಆಯಸ್ಕಾಂತೀಯ ವಲಯದ ಅಳತೆ ಅಧ್ಯಯನ ಮಾಡಲು "ಆದಿತ್ಯ ಎಲ್-1" ಬಾಹ್ಯಾಕಾಶ ನೌಕೆಯನ್ನು 2022ಕ್ಕೆ ಉಡಾವಣೆ ಮಾಡಲು ಇಸ್ರೋ ನಿರ್ಧರಿಸಿದೆ.

ದೇಶದ ಮೊದಲ ಬಾಹ್ಯಾಕಾಶ ಆಧಾರಿತ ಸೌರ ವೀಕ್ಷಣಾಲಯ "ಆದಿತ್ಯ ಎಲ್-1" ಆಗಿದ್ದು, ಬಾಹ್ಯಾಕಾಶ ನೌಕೆಯನ್ನು ಭೂಮಿ-ಸೂರ್ಯ ಲಾಗ್ ರೇಂಜ್ ಪಾಯಿಂಟ್ ಎಲ್1ನಲ್ಲಿ ಇರಿಸಲು ಇಸ್ರೋ ತಯಾರಿ ನಡೆಸುತ್ತಿದೆ.

ಸೂರ್ಯನ ವಿದ್ಯಮಾನಗಳ ಅಧ್ಯಯನ ನಡೆಸುವ ಆದಿತ್ಯ ಮಿಷನ್​​ನ ಗುರಿಗಳೇನು?

  • 1. ಸೂರ್ಯ ನಕ್ಷತ್ರದ ವಾತಾವರಣದ ಡೈನಾಮಿಕ್ಸ್ ಅಧ್ಯಯನ
  • 2. ಸೂರ್ಯನ ಉಷ್ಣಾಂಶ, ಆಯಾನು ಪ್ಲಾಸ್ಮಾ ಹಾಗೂ ಅದರ ಹಿಂದೆ ಇರುವ ಭೌತಶಾಸ್ತ್ರದ ಬಗ್ಗೆ ಅಧ್ಯಯನ.
  • 3. ಆಯಸ್ಕಾಂತೀಯ ವಲಯದ ಅಳತೆಯ ಅಧ್ಯಯನ ಸೇರಿ ಸೂರ್ಯನ ಯುವಿ ಕಿರಣ ಹಾಗೂ ಇನ್ನಿತರೆ ಅಧ್ಯಯನಗಳನ್ನು ಆದಿತ್ಯ ಮಾಡಲಿದೆ.

ಈ ಎಲ್ಲಾ ಗುರಿಗಳನ್ನ ಸಾಧಿಸಲು 7ಪೇ ಲೋಡ್​ಗಳನ್ನ ಬಾಹ್ಯಾಕಾಶ ನೌಕೆಯಲ್ಲಿ ಇರಿಸಲಾಗುವುದು, ಇದರಲ್ಲಿ 4ಪೇ ಲೋಡ್​ಗಳು ಸೂರ್ಯನ ವೀಕ್ಷಣೆಗೆ ಹಾಗೂ ಇನ್ನುಳಿದ 3ಪೇ ಲೋಡ್​ಗಳು ಸೂರ್ಯನ ಆಯಸ್ಕಾಂತ ವಲಯ ಹಾಗೂ ಇತರೆ ಅಳತೆಗೆ ವಿನ್ಯಾಸಗೊಳಿಸಲಾಗುತ್ತಿದೆ.

ಇದನ್ನೂ ಓದಿ: ವಿಡಿಯೋ ಕಾಲ್ ಮೂಲಕ ಮಕ್ಕಳಿಗೆ ಧೈರ್ಯ ತುಂಬಿದ ಕಿಚ್ಚ ಸುದೀಪ್

ಆದಿತ್ಯ ಎಲ್1 ಬಗ್ಗೆ ಮಾತನಾಡಿದ ಇಸ್ರೋ ಹಿರಿಯ ವಿಜ್ಞಾನಿವೊಬ್ಬರು, ಸೂರ್ಯನ ಅಧ್ಯಯನ ಶಕ್ತಿ ಹೆಚ್ಚಿಸಲು ಮಾರ್ಚ್ 2020ರಲ್ಲಿ ಮೊದಲ ಮೀಟಿಂಗ್ ಆಗಿತ್ತು. ಈ ಮಿಷನ್ ಕುರಿತ ಚಿತ್ರಣವನ್ನು ಅಲ್ಲಿ ವಿಜ್ಞಾನಿಗಳಿಗೆ ನೀಡಿ ಅವರ ಸಲಹೆಗಳನ್ನು ಸಂಗ್ರಹಿಸಲಾಯಿತು.

2022ಕ್ಕೆ ಆದಿತ್ಯ ಎಲ್1 ಮಿಷನ್ ಉಡಾವಣೆಗೆ ನಿರ್ಧಾರ ಆಗಿದೆ. ಕೋವಿಡ್ ಮಹಾಮಾರಿ ಕೆಲ ಅಡೆತಡೆಗಳನ್ನು ಉಂಟುಮಾಡಿದ್ದು, ನಿಗದಿಪಡಿಸಿದ ವರ್ಷಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಲು ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.