ETV Bharat / state

ಆದಿತ್ಯ ಆಳ್ವಾ ಬಗ್ಗೆ ಸುಳಿವು ಕೊಟ್ಟ ಅಡುಗೆ ಭಟ್ಟನ ಫೋನ್ ಕಾಲ್ !! - Aditya Alva

ಬಹುತೇಕ ರೆಸಾರ್ಟ್​ನಲ್ಲಿಯೇ ಕಾಲ ಕಳೆದಿದ್ದಾನೆ ಎಂದು ಸಿಸಿಬಿ ಮೂಲಗಳಿಂದ‌ ತಿಳಿದು ಬಂದಿದೆ‌. ಬೇಲ್ ಪಡೆಯುವವರೆಗೂ ಸಿಸಿಬಿಗೆ ಸಿಗಬಾರದು ಎಂದು ಶತಪ್ರಯತ್ನ ಮಾಡಿದ್ದ ಆಳ್ವಾ. ಆದ್ರೆ, ಆತನಿಗೆ ನಿರೀಕ್ಷಣಾ ಜಾಮೀನು ಸಿಕ್ಕಿರಲಿಲ್ಲ. ಇತ್ತ ಪೊಲೀಸರು ಕೂಡ ಹುಡುಕಾಟ ನಡೆಸುತ್ತಿದ್ದರು..

ಆದಿತ್ಯ ಆಳ್ವಾ
ಆದಿತ್ಯ ಆಳ್ವಾ
author img

By

Published : Jan 13, 2021, 8:44 PM IST

ಬೆಂಗಳೂರು : ಸ್ಯಾಂಡಲ್​ವುಡ್​ ಡ್ರಗ್ಸ್ ಪ್ರಕರಣದಲ್ಲಿ ನಂಟು ಹೊಂದಿದ್ದ ಮಾಜಿ ಸಚಿವ ಜೀವರಾಜ್ ಆಳ್ವಾ ಪುತ್ರ ಆದಿತ್ಯ ಆಳ್ವಾ ನಾಲ್ಕು ತಿಂಗಳ ಬಳಿಕ ಸಿಸಿಬಿಗೆ ಬಲೆಗೆ ಬಿದ್ದಿದ್ದಾನೆ. ಆತನ ಜೊತೆಯಲ್ಲಿದ್ದ ಅಡುಗೆ ಭಟ್ಟ ಮಾಡಿದ ಮೊಬೈಲ್ ಕರೆ ಸುಳಿವಿನಿಂದ ಆತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ‌.

ಕೇಸ್ ದಾಖಲಾದ ನಂತರ ಆರೋಪಿ ಆದಿತ್ಯ ಆಳ್ವಾ ಬೆಂಗಳೂರು ಸಿಸಿಬಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗಿದ್ದ. ನಂತರ ಪೊಲೀಸರು ಆತನಿಗಾಗಿ ಹೆಬ್ಬಾಳದಲ್ಲಿರುವ ಗೆಸ್ಟ್ ಹೌಸ್ ಕಮ್ ಪಬ್ ಮೇಲೆ ದಾಳಿ ಮಾಡಿದ್ದರು. ಅಷ್ಟೇ ಅಲ್ಲ, ಮುಂಬೈನಲ್ಲಿರುವ ಆದಿತ್ಯ ಆಳ್ವಾ ಸಹೋದರಿ ಪ್ರಿಯಾಂಕ ಆಳ್ವಾ ಹಾಗೂ ಬಾಲಿವುಡ್ ನಟ ವಿವೇಕ್ ಓಬೆರಾಯ್​ಗೆ ಸೇರಿದ್ದ ಮನೆ ಮೇಲೆ ಸಹ ದಾಳಿ ಮಾಡಿದ್ದರು.

ಮತ್ತೊಂದು ಕಡೆ ದೇಶ ಬಿಟ್ಟು ಎಲ್ಲಿಯೂ ಹೋಗಬಾರದು ಎಂದು ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿತ್ತು. ಇಷ್ಟೆಲ್ಲಾ ನಡೆದಿದ್ದರೂ ಸಹ ಆದಿತ್ಯ ಆಳ್ವಾ ಮಾತ್ರ ಪತ್ತೆ ಆಗಿರಲಿಲ್ಲ. ಇದೀಗ ಮೊನ್ನೆ ರಾತ್ರಿ ಚೆನ್ನೈನ ಹೊರವಲಯದ ರೆಸಾರ್ಟ್​ನಲ್ಲಿ ವಾಸವಾಗಿದ್ದ ಆಳ್ವಾನನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ.‌ ಆದರೆ, ಚೆನ್ನೈಗೆ ಹೋಗಿದ್ದೇಕೆ? ಯಾರ ಜೊತೆಯಲ್ಲಿ ಇಷ್ಟು ದಿನ ಆಳ್ವಾ ತಲೆಮರೆಸಿಕೊಂಡಿದ್ದ ಎಂಬ ಸಿಸಿಬಿ ಪ್ರಶ್ನೆಗೆ ಉತ್ತರ ಅಂದ್ರೆ ಅದು ಅಡುಗೆ ಭಟ್ಟ ಮಾತ್ರ.

ಓದಿ:ಸ್ಯಾಂಡಲ್​ವುಡ್​​ ಡ್ರಗ್ಸ್​​ ಕೇಸ್​​: ಸಿಸಿಬಿಯಿಂದ ಮಾಜಿ ಸಚಿವರ ಪುತ್ರ ಆದಿತ್ಯ ಆಳ್ವಾ ಅರೆಸ್ಟ್​

ಸದ್ಯ ಪ್ರಕರಣದಲ್ಲಿ ಸಾಕ್ಷಿಯಾಗಿ ಪರಿಗಣಿಸಿರುವ ಆದಿತ್ಯ ಆಳ್ವಾನ ಅಡುಗೆ ಭಟ್ಟ ಮೂಲತಃ ತಮಿಳುನಾಡು ಕಡೆಯವನಾಗಿದ್ದು, ಆಳ್ವಾ ಎಸ್ಕೇಪ್ ಆಗಿದ್ದ ಬಳಿಕ ಆತ ತನ್ನ ಮೊಬೈಲ್ ಫೋನ್ ಆಫ್ ಮಾಡಿಕೊಂಡಿದ್ದ. ಜೊತೆಗೆ ಕುಟುಂಬದ ಯಾರ ಜೊತೆಗೆ ಮಾತನಾಡಿದ್ರೂ ಸಿಸಿಬಿ ಅವರನ್ನು ಮಾನಿಟರ್ ಮಾಡುತ್ತಾ ಇರುತ್ತೆ ಎಂಬ ಅರಿವಿನಿಂದ ಆತ ಯಾರ ಜೊತೆಗೂ ಸಂಪರ್ಕ ಮಾಡಿರಲಿಲ್ಲ.

ಬದಲಾಗಿ ತನ್ನ ನೆಚ್ಚಿನ ಅಡುಗೆ ಭಟ್ಟನ ಜೊತೆಗೆ ಚೆನ್ನೈಗೆ ಎಸ್ಕೇಪ್ ಆಗಿದ್ದನಂತೆ. ಚೆನ್ನೈ ಅಲ್ಲಿಂದ ಹೈದ್ರಾಬಾದ್. ಹೀಗೆ ಎರಡು ಕಡೆ ಕೆಲದಿನಗಳ ಕಾಲ ಇದ್ದುಕೊಂಡು, ತಾನಿರುವ ಸ್ಥಳವನ್ನು ಪದೇಪದೆ ಬದಲಾಯಿಸುತ್ತಿದ್ದ. ಅಡುಗೆ ಭಟ್ಟನಿಗೆ ಸೇರಿದ್ದ ಒಂದು ಮೊಬೈಲ್​​ನಿಂದ ಬೆಂಗಳೂರಿನ ಗೆಳೆಯನೊಬ್ಬನನ್ನು ಸಂಪರ್ಕ ಮಾಡಿ ಅವಶ್ಯಕ ಮಾಹಿತಿ ಮತ್ತು ಸಹಾಯ ಪಡೆದಿದ್ದಾನೆ.

ಬಹುತೇಕ ರೆಸಾರ್ಟ್​ನಲ್ಲಿಯೇ ಕಾಲ ಕಳೆದಿದ್ದಾನೆ ಎಂದು ಸಿಸಿಬಿ ಮೂಲಗಳಿಂದ‌ ತಿಳಿದು ಬಂದಿದೆ‌. ಬೇಲ್ ಪಡೆಯುವವರೆಗೂ ಸಿಸಿಬಿಗೆ ಸಿಗಬಾರದು ಎಂದು ಶತಪ್ರಯತ್ನ ಮಾಡಿದ್ದ ಆಳ್ವಾ. ಆದ್ರೆ, ಆತನಿಗೆ ನಿರೀಕ್ಷಣಾ ಜಾಮೀನು ಸಿಕ್ಕಿರಲಿಲ್ಲ. ಇತ್ತ ಪೊಲೀಸರು ಕೂಡ ಹುಡುಕಾಟ ನಡೆಸುತ್ತಿದ್ದರು. ಸಿಸಿಬಿಗೆ ಸಿಕ್ಕ ಮಾಹಿತಿ ಮೇರೆಗೆ ಪೊಲೀಸರು ಮೊದಲು ಅಡುಗೆ ಭಟ್ಟನನ್ನು ಲಾಕ್ ಮಾಡಿದ್ದಾರೆ. ಬಳಿಕ ತಂಡದ ಸಹಿತ ಚೆನ್ನೈಗೆ ತೆರಳಿ ಅಲ್ಲಿ ರೆಸಾರ್ಟ್‌ವೊಂದರಲ್ಲಿ ಇದ್ದ ಆಳ್ವಾನನ್ನು ಬಂಧಿಸಿದ್ದಾರೆ‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.