ETV Bharat / state

ಸಿಮ್​ ಇಲ್ಲದ ಮೊಬೈಲ್​, ರಾಂಕಾ, ಬ್ಯಾಂಕ್​ ಲಕೋಟೆ ನೀಡಿದ ಕ್ಲೂ... ಸಂಜನಾ ಬಂಧನದ ಹಿಂದಿನ ರೋಚಕ ಕಹಾನಿ! - ಡ್ರಗ್ಸ್ ಪ್ರಕರಣ

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಾಹುಲ್​ನನ್ನು ಪೊಲೀಸರು ಬಂಧಿಸುತ್ತಿದ್ದಂತೆ ನಟಿ ಸಂಜನಾ ಕೂಡಾ ಅರೆಸ್ಟ್ ಆಗ್ತಾರೆ ಅಂತಾನೇ ಎಲ್ಲರೂ ಊಹಿಸಿದ್ದರು. ಆದರೆ ಅಲ್ಲಿ ಆಗಿದ್ದೇ ಬೇರೆ. ಅಸಲಿಗೆ ಸಂಜನಾ ಬಂಧನವಾಗಿದ್ದೇ ಒಂದು ರೋಚಕತೆ.

Sanjana garlani
ಸಂಜನಾ‌
author img

By

Published : Sep 17, 2020, 7:10 PM IST

Updated : Sep 17, 2020, 7:23 PM IST

ಬೆಂಗಳೂರು: ಡ್ರಗ್ಸ್ ಪೆಡ್ಲರ್ ರವಿಶಂಕರ್ ಬಂಧನವಾಗುತ್ತಿದ್ದಂತೆ ಗೆಳತಿ ರಾಗಿಣಿಗೂ ಸಿಸಿಬಿ ಬಲೆ ಬೀಸಿತ್ತು. ಹಾಗೆಯೇ ಇದೇ ಪ್ರಕರಣದಲ್ಲಿ ರಾಹುಲ್ ಬಂಧಿಸುತ್ತಿದ್ದಂತೆ ನಟಿ ಸಂಜನಾ ಕೂಡಾ ಅರೆಸ್ಟ್ ಆಗ್ತಾರೆ ಅಂತಾನೇ ಎಲ್ಲರೂ ಊಹಿಸಿದ್ದರು. ಆದರೆ ಅಲ್ಲಿ ಆಗಿದ್ದೇ ಬೇರೆ. ಅಸಲಿಗೆ ಸಂಜನಾ ಅರೆಸ್ಟ್ ಆಗಿದ್ದೇ ಒಂದು ರೋಚಕ ವೃತ್ತಾಂತ. ಸಂಜನಾ ಗಲ್ರಾನಿ ಬಂಧನದ ಕಂಪ್ಲೀಟ್ ಡೀಟೇಲ್ಸ್​ ಇಲ್ಲಿದೆ.

ನಾಲ್ಕನೇ ಆರೋಪಿ ಜೊತೆಗಿತ್ತು ಸಂಜನಾಗೆ ಲಿಂಕ್!

ಯಾವಾಗ ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟಿನ ಆರೋಪ ಕೇಳಿ ಬಂತೋ ಆಗಲೇ ಒಂದಷ್ಟು ತಾರೆಯರ ಎದೆಯೊಳಗೆ ಢವ ಢವ ಶುರುವಾಗಿತ್ತು. ಎನ್​ಸಿಬಿ ಯಿಂದ ಬಂಧನಕ್ಕೊಳಕಾದ ಆರೋಪಿ ಅನಿಕಾ ಜೊತೆ ಜೊತೆಗೆ ಪ್ರಮುಖ ಪೆಡ್ಲರ್​ಗಳೂ ಸಿಕ್ಕಿಹಾಕಿಕೊಂಡಿದ್ದಾರೆ. ಪ್ರಕರಣದಲ್ಲಿ ಆರೋಪಿಗಳಾದ ರವಿಶಂಕರ್, ರಾಹುಲ್ ಅರೆಸ್ಟ್ ಆಗುತ್ತಿದ್ದಂತೆ ನಟಿ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಹೆಸರು ಜೋರಾಗಿ ಕೇಳಿ ಬಂದಿತ್ತು. ರವಿಶಂಕರ್ ಹೇಳಿಕೆಯಾಧರಿಸಿ ರಾಗಿಣಿ ಮನೆಯಲ್ಲಿ ಕೆಲ ವಸ್ತುಗಳನ್ನು ಜಪ್ತಿ ಮಾಡಿದ ಸಿಸಿಬಿ, ಬಂಧಿಸಿದ್ದು ಆಯ್ತು. ಆದರೆ ರಾಹುಲ್ ಅರೆಸ್ಟ್ ಆದರೂ ಸಂಜನಾ ಮಾತ್ರ ನನ್ನ ಬ್ರದರ್ ಅಂತ ಹೇಳ್ಕೊಂಡು ಆರಾಮಾಗೇ ಇದ್ದರು. ಆದರೆ ಸಂಜನಾಗೆ ಪೆಟ್ಟು ಬಿದ್ದಿದ್ದೇ ಪ್ರಕರಣದ ನಾಲ್ಕನೇ ಆರೋಪಿ ಪ್ರಶಾಂತ್ ರಂಕಾ ಅರೆಸ್ಟ್ ಆದ ನಂತರ. ರಂಕಾ ಅರೆಸ್ಟ್ ಅಗುತ್ತಿದ್ದಂತೆ ಪ್ರಕರಣದಲ್ಲಿ ನಟಿ ಸಂಜನಾಗೂ ಕುತ್ತು ಬಂದಿತ್ತು.

ಸಂಜನಾ ಮನೆಯಲ್ಲಿ ಪೊಲೀಸರಿಗೆ ಸಿಕ್ಕಿದ್ದು ಅತ್ಯಮೂಲ್ಯ ಸಾಕ್ಷ್ಯ!

ಪ್ರಶಾಂತ್ ರಾಂಕಾ ಅರೆಸ್ಟ್ ಆಗುತ್ತಿದ್ದಂತೆ ಸಿಸಿಬಿ ಪೊಲೀಸರು ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಲು ಶುರು ಮಾಡುತ್ತಾರೆ. ಆರೋಪಿಯ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಲ್ಲದೆ, ರಾಂಕಾ ಹೇಳಿಕೆಯಾಧರಿಸಿ ನಟಿ ಸಂಜನಾರನ್ನು ಅರೆಸ್ಟ್ ಮಾಡುತ್ತಾರೆ. ಅಷ್ಟೇ ಅಲ್ಲ ಸಂಜನಾ ಮನೆಯನ್ನು ತೀವ್ರ ಶೋಧಿಸಿ ಹಲವು ಅಗತ್ಯ ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳುತ್ತಾರೆ. 3 ಮೊಬೈಲ್ ಸಹಿತ ಲ್ಯಾಪ್ ಟಾಪ್ ಹಾರ್ಡ್ ಡಿಸ್ಕ್ ವಶಕ್ಕೆ ಪಡೆದಿದ್ದಾರೆ.

ಸಹಜವಾಗಿಯೇ ಎಲ್ಲರೊಳಗೂ ಒಂದು ಪ್ರಶ್ನೆ ಕಾಡುತ್ತಿತ್ತು. ಸಂಜನಾರನ್ನು ಬಂಧಿಸೋಕೆ ಸಿಸಿಬಿ ಯಾಕೆ ಅಷ್ಟೊಂದು ಸಮಯ ತೆಗೆದುಕೊಂಡಿದ್ದು ಎಂಬುದು. ಅದಕ್ಕೆ ಉತ್ತರವೇ ಪ್ರಶಾಂತ್ ರಾಂಕಾ. ರಾಹುಲ್ ಶೆಟ್ಟಿ ಸಂಜನಾ ಪಾಲಿಗೆ ಸಮಸ್ಯೆಯಾಗಿರಲಿಲ್ಲ. ಆದರೆ, ಪ್ರಶಾಂತ್ ರಾಂಕಾ ಅರೆಸ್ಟ್ ಮಾತ್ರ ಸಂಜನಾ ಕುತ್ತಿಗೆಗೇ ಬಿಗಿದುಕೊಳ್ಳಲಾರಂಭಿಸಿತ್ತು. ರಾಂಕಾನನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದಾಗ ಅವನು ಸಂಜನಾ ಭಾಗಿಯಾಗಿರುವ ಕುರಿತು ಇಂಚಿಂಚಾಗಿ ಸಿಸಿಬಿ ಮುಂದೆ ಬಿಚ್ಚಿಟ್ಟಿದ್ದ. ಸಂಜನಾಳ ವಿದೇಶಿ ಪಾರ್ಟಿಗಳ ಬಗ್ಗೆ ಮಾಹಿತಿ ನೀಡಿದ್ದು ಕೂಡಾ ಇದೇ ರಾಂಕಾ.

ಸಂಜನಾ ಮನೆಯಲ್ಲಿ ಸಿಮ್ ಇಲ್ಲದ ಮೂರು ಮೊಬೈಲ್!

ಪ್ರಕರಣದ 4ನೇ ಆರೋಪಿ ಪ್ರಶಾಂತ್ ರಾಂಕಾ ಜೊತೆಗಿನ ಸ್ಯಾಂಡಲ್​ವುಡ್​ ನಟಿ ಸಂಜನಾ ಸಂಪರ್ಕ ಆಧರಿಸಿ ದಾಳಿಗಿಳಿದ ಸಿಸಿಬಿಗೆ ಸಂಜನಾ ಮನೆಯಲ್ಲಿ ಸಿಮ್ ಕಾರ್ಡ್ ಗಳಿಲ್ಲದ 3 ಪೋನ್‌ಗಳು ಪತ್ತೆಯಾಗಿದ್ದವು. ಐಫೋನ್ 11 ಪ್ರೋ, ಐಫೋನ್ ಎಕ್ಸ್ ಆರ್, ಒನ್ + ಮೊಬೈಲ್ ಫೋನ್‌ಗಳು ಪತ್ತೆಯಾಗಿದ್ದವು. ಆಗಲೇ ಸಿಸಿಬಿ ಅಧಿಕಾರಿಗಳಿಗೆ ಸಂಶಯ ಹೆಚ್ಚಾಗಿದ್ದು. ಸಿಮ್‌ಗಳಿಲ್ಲದ ಫೋನ್‌ನಿಂದ ಏನು ಉಪಯೋಗ? ಅದೇ ಸಂಜನಾ ಪಾಲಿಗೂ ಮುಳುವಾಗಿತ್ತು. ಅಷ್ಟು ಮಾತ್ರವಲ್ಲ ಸಿಕ್ಕ ಪವರ್ ಬ್ಯಾಂಕ್ ಒಂದರ ಲಕೋಟೆ ಮೇಲೆ ಬ್ಯಾಲೀಸ್ ಎಂಟರ್ ಟೈನ್ ಮೆಂಟ್ ಶ್ರೀಲಂಕಾ ಎಂದು ಬರೆದಿದ್ದುದನ್ನು ಕೂಡಾ ಪೊಲೀಸರು ಗಮನಿಸಿದ್ದರು. ಇಷ್ಟೆಲ್ಲಾ ಆದಾಗ ಸಂಜನಾಳನ್ನು ಬಿಡುವ ಪ್ರಶ್ನೆಯೇ ಇರಲಿಲ್ಲ.

ಸಂಜನಾಳನ್ನು ಬಂಧಿಸಿ ವಿಚಾರಣೆ ನಡೆಸಿದರೆ ಮೊದ ಮೊದಲು ಕ್ಯಾತೆ ತೆಗೆಯುತ್ತಾಳೆ ಎಂದು ಮೊದಲೇ ಅರಿತಿದ್ದ ಪೊಲೀಸರು ಪ್ರಶಾಂತ್ ರಾಂಕಾ ಬಂಧನವಾಗುತ್ತಿದ್ದಂತೆ ಸೈಲೆಂಟಾಗಿದ್ದಳು. ಮತ್ತಷ್ಟು ವಿಚಾರಣೆಗೊಳಪಡಿಸಿದ ಪೊಲೀಸರಿಗೆ ಸಂಜನಾ ಮತ್ತು ಪ್ರಶಾಂತ್ ರಾಂಕಾರ ವಿದೇಶಿ ಪಾರ್ಟಿಗಳ ಮಾಹಿತಿಯೂ ಲಭ್ಯವಾಗಿತ್ತು. ಆದರೆ ಅದಾಗಲೇ ಸಂಜನಾ ಸಿಸಿಬಿ ಕಸ್ಟಡಿ ಮುಗಿದಿದ್ರಿಂದ ಸಿಸಿಬಿ ಪೊಲೀಸರು ಕೋರ್ಟ್ ಮೊರೆ ಹೋಗುತ್ತಾರೆ. ರಿಮ್ಯಾಂಡ್ ಅರ್ಜಿ ಹಾಕಿ ಸಂಜನಾಳನ್ನು ಕಸ್ಟಡಿಗೆ ಕೊಡುವಂತೆ ಕೇಳಿಕೊಳ್ಳುತ್ತಾರೆ. ಸಿಸಿಬಿ ರಿಮ್ಯಾಂಡ್ ಅರ್ಜಿಯ ಪ್ರತಿಯಲ್ಲಿ ಪ್ರಶಾಂತ್ ರಾಂಕಾ ಮತ್ತು ಸಂಜನಾ ನಡುವಿನ ವ್ಯವಹಾರದ ಪ್ರತಿಯೊಂದು ಅಂಶಗಳನ್ನೂ ದಾಖಲಿಸುತ್ತಾರೆ. ಆಗಲೇ ಸಂಜನಾರನ್ನು ಕೋರ್ಟ್ ಸಿಸಿಬಿ ಕಸ್ಟಡಿಗೆ ನೀಡಿತ್ತು.

ಇಷ್ಟೆಲ್ಲದರ ನಡುವೆ ಸಿಸಿಬಿ ಪೊಲೀಸರು ಸಣ್ಣದೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಎನ್.ಡಿ.ಪಿ.ಎಸ್ ವಿಶೇಷ ಕೋರ್ಟ್ ನಲ್ಲಿ ಸಂಜನಾಳನ್ನು ಹಾಜರುಪಡಿಸಬೇಕಿದ್ದ ತನಿಖಾಧಿಕಾರಿಗಳು ಸಿಸಿಹೆಚ್ ನಲ್ಲಿ ಹಾಜರುಪಡಿಸಿ ಮುಖಭಂಗ ಅನುಭವಿಸಬೇಕಾಯಿತು. ಅದೇ ಕಾರಣಕ್ಕೆ ಸಂಜನಾಗೆ ಕೇವಲ ಎರಡು ದಿನಗಳ‌ ಮಾತ್ರ ನ್ಯಾಯಾಂಗ ಬಂಧನಕ್ಕೆ‌ ಒಳಪಟ್ಟಿದ್ದಾರೆ. ಸಂಜನಾ‌ ಜೈಲು ಸೇರಲು ಪ್ರಕರಣದ ನಾಲ್ಕನೇ ಆರೋಪಿ ಪ್ರಶಾಂತ್ ರಾಂಕಾ ಕಾರಣವಾಗಿದ್ದಾನೆ ಎಂದು ಹೇಳಬಹುದು. ನಾಳೆ ಮತ್ತೆ ಸಂಜನಾ ವಿಶೇಷ ಕೋರ್ಟ್ ನಲ್ಲಿ ವಿಚಾರಣೆ ಎದುರಿಸಲಿದ್ದಾರೆ. ಮುಂದೇನಾಗುತ್ತೋ ಎಂಬ ಕುತೂಹಲ ಎಲ್ಲರದ್ದು.

Last Updated : Sep 17, 2020, 7:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.