ETV Bharat / state

ಕಳೆದು ಹೋದುದಕ್ಕೆ ಕೊರಗ ಬಿಡು...ಕೊರೊನಾ ನಡುವೆ ಸಂಯುಕ್ತಾ ಗೀತೆ! - ಸುಧಾ ಬೆಳವಾಡಿ

ಕೊರೊನಾದಿಂದ ಜೀವನದಲ್ಲಿ ಏನು ಮಾಡಬೇಕು ಎಂಬ ಗೊಂದಲದಲ್ಲಿ ನಟಿ ಸಂಯುಕ್ತಾ ಹೊರನಾಡು ಇದ್ದಾರಂತೆ. ಈ ಸಮಯದಲ್ಲಿ ಈ ಹಾಡು ಹಾಡಿ ಕೊಂಚ ರಿಲ್ಯಾಕ್ಸ್​ ಮೂಡ್​ಗೆ ಜಾರಿದ್ದಾರೆ.

dsdd
ಕೊರೊನಾ ನಡುವೆ ಸಂಯುಕ್ತಾ ಗೀತೆ
author img

By

Published : Jul 8, 2020, 12:18 AM IST

ಬೆಂಗಳೂರು: ಕೊರೊನಾ ವೈರಸ್​ಗೆ ವಿಶ್ವ ನಲುಗಿ ಹೋಗಿದೆ‌. ಯಾರು ಊಹಿಸಲಾಗದ ಮಟ್ಟದಲ್ಲಿ ಈ ಕೊರೊನಾ ಜನರ ಪ್ರಾಣವನ್ನ ಬಲಿ ಪಡೆಯುತ್ತಿದೆ. ಮಹಾಮಾರಿ ಅಟ್ಟಹಾಸದಿಂದ ವಿಶ್ವ, ದೇಶ ಹಾಗೂ ರಾಜ್ಯದಲ್ಲಿ ಆಗುತ್ತಿರುವ ಬದಲಾಣೆಯ ಬಗ್ಗೆ ನಟಿ ಸಂಯುಕ್ತಾ ಹೊರನಾಡು ಮತ್ತು ಅವರ ತಾಯಿ ಅರ್ಥಗರ್ಭಿತ ಭಾವಗೀತೆ ಹಾಡಿದ್ದಾರೆ.

ಕೊರೊನಾ ನಡುವೆ ಸಂಯುಕ್ತಾ ಗೀತೆ

ಈ‌ ಕೊರೊನಾ ಅಟ್ಟಹಾಸಕ್ಕೆ ದೊಡ್ಡ ದೊಡ್ಡ ಕಂಪನಿಗಳು, ಬಿಜಿನೆಸ್ ಮ್ಯಾನ್​ಗಳು,ಸಿನಿಮಾ ರಂಗ ಸೇರಿದಂತೆ ಹಲವಾರು ಕ್ಷೇತ್ರಗಳಿಗೆ ದೊಡ್ಡ ಪೆಟ್ಟು ಬಿದ್ದಿದೆ. ಇದರ ಬಗ್ಗೆ ಸಿನಿಮಾ ಹಾಗು ಸಮಾಜಮುಖಿ ಕೆಲಸಗಳಲ್ಲಿ ಗುರುತಿಸಿಕೊಂಡಿರುವ ಸಂಯುಕ್ತಾ ಹೊರನಾಡು ಅರ್ಥಗರ್ಭಿತ ಹಾಡು ಹಾಡುವ ಮೂಲಕ ಗಮನ ಸೆಳೆದಿದ್ದಾರೆ. ಕಳೆದು ಹೋದುದಕ್ಕೆ ಕೊರಗು ಬಿಡು, ಉಳಿದಿದೆ ಎಷ್ಟೋ ಹರುಷ ಪಡೋಣ, ಕಳೆಯುವ ಕೂಡುವ ಲೆಕ್ಕ ಅಳಿಸಿ, ಮನಸಿನ ಸ್ಲೇಟನು ಖಾಲಿ ಇಡು ಎಂಬ ಭಾವಗೀತೆಯನ್ನು ಸಂಯುಕ್ತಾ ಹೊರನಾಡು ಹಾಗೂ ಅವ್ರ ತಾಯಿ ಸುಧಾ ಬೆಳವಾಡಿ ಜೊತೆಗೂಡಿ ಹಾಡಿದ್ದಾರೆ.

ಗೀತರಚನೆಕಾರ ಎನ್ ,ಎಸ್ ಲಕ್ಷ್ಮೀ ನಾರಾಯಣ್ ಭಟ್ ಬರೆದಿರುವ ಪದಗಳಿಗೆ ಕೆ.ಈಶ್ವರ್ ಸಂಗೀತ ನೀಡಿದ್ದು, ಕೆ ವಿಜಯ್ ಕುಮಾರ್ ಈ ಭಾವಗೀತೆಯನ್ನ ಹಾಡಿದ್ದರು. ಸದ್ಯದ ಪರಿಸ್ಥಿತಿಯನ್ನು ಅರಿತ ಸಂಯುಕ್ತಾ ಹೊರನಾಡು ಈ ಹಾಡನ್ನು ತಾವೇ ಸಮಾಧಾನ ಮಾಡಿಕೊಂಡಿದ್ದಾರಂತೆ. ಅಮ್ಮ ಮಗಳ ಈ ಹಾಡು ಕೇಳುಗರನ್ನ ಇಂಪ್ರೇಸ್ ಮಾಡುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.