ETV Bharat / state

ರಾಗಿಣಿ ಜಾಮೀನು ಅರ್ಜಿ ಮುಂದೂಡಿಕೆ: ಸಂಜೆ ವೇಳೆಗೆ ನಟಿ ಭವಿಷ್ಯ ನಿರ್ಧಾರ

ರಾಗಿಣಿ ಜಾಮೀನು ಅರ್ಜಿ ವಿಚಾರಣೆಯನ್ನು ಸಿಟಿ ಸಿವಿಲ್ ಆವರಣದ ಎನ್​​​​​​ಡಿಪಿಎಸ್‌ ವಿಶೇಷ ನ್ಯಾಯಾಲಯ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಿದೆ. ಸೆಪ್ಟೆಂಬರ್ 16ವರೆಗೆ ಜಾಮೀನು ಅರ್ಜಿ ಮುಂದೂಡಿಕೆಯಾಗಿದೆ. ಸಂಜೆ ವೇಳೆಗೆ ನಟಿಗೆ ಜೈಲಾ ಅಥವಾ ಸಿಸಿಬಿ ಕಸ್ಟಡಿನಾ ಎಂಬುದು ನಿರ್ಧಾರವಾಗಲಿದೆ.

author img

By

Published : Sep 14, 2020, 1:11 PM IST

actress-ragini-bail-postponed-by-court
ರಾಗಿಣಿ ಜಾಮೀನು ಅರ್ಜಿ ಮುಂಡೂಡಿಕೆ: ಜೈಲಾ..? ಕಷ್ಟಡಿನ..? ಸಂಜೆ ನಿರ್ಧಾರ

ಬೆಂಗಳೂರು: ಸ್ಯಾಂಡಲ್​​​​​ವುಡ್​ಗೆ ಡ್ರಗ್ಸ್​ ಚಾಲದ ನಂಟಿನ ಆರೋಪದ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ರಾಗಿಣಿ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ.

ಹೀಗಾಗಿ ರಾಗಿಣಿಗೆ ಮತ್ತಷ್ಟು ಆತಂಕ ಎದುರಾಗಿದೆ. ಇಂದು ಸಿಸಿಬಿ ಕಸ್ಟಡಿ ಅಂತ್ಯ ಹಿನ್ನೆಲೆ ನ್ಯಾಯಾಧೀಶರ ಎದುರು ಮಧ್ಯಾಹ್ನ ಹಾಜರುಪಡಿಸಲಿದ್ದು, ಈ ವೇಳೆ ಪರಪ್ಪನ ಅಗ್ರಹಾರನಾ ಅಥವಾ ಸಿಸಿಬಿ ಕಸ್ಟಡಿನಾ ಎನ್ನುವುದು ನಿರ್ಧಾರವಾಗಲಿದೆ.

ರಾಗಿಣಿ ಪರ ವಕೀಲರು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ರಾಗಿಣಿ ಜೊತೆಗೆ ಶಿವಪ್ರಕಾಶ್ @ಚಿಪ್ಪಿ, ರಾಹುಲ್ ತೋಷೆ, ವೈಭವ್ ಜೈನ್, ವಿನಯ್ ಕುಮಾರ್ ಅರ್ಜಿ ವಿಚಾರಣೆಯನ್ನು ಸಿಟಿ ಸಿವಿಲ್ ಆವರಣದಲ್ಲಿರುವ ಎನ್​​​​​​ಡಿಪಿಎಸ್‌ ವಿಶೇಷ ನ್ಯಾಯಾಲಯ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಿದೆ. ಸೆಪ್ಟೆಂಬರ್ 16ವರೆಗೆ ಜಾಮೀನು ಅರ್ಜಿ ಮುಂದೂಡಿಕೆಯಾಗಿದೆ.

ಸರ್ಕಾರಿ ಅಭಿಯೋಜಕರು ಪ್ರಕರಣ ತನಿಖಾ ಹಂತದಲ್ಲಿರುವ ಕಾರಣ ಆಕ್ಷೇಪಣೆ ಸಲ್ಲಿಸುವ ಮುನ್ನವೇ ವಿಚಾರಣೆ ಅಸಾಧ್ಯ ಎ‌ಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಸಿದರು. ಹೀಗಾಗಿ ನ್ಯಾಯಾಲಯ ಸರ್ಕಾರಿ ಅಭಿಯೋಜಕರಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಿ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದೆ.

ಹಿನ್ನೆಲೆ ರಾಗಿಣಿ ಹಾಗೂ ಅವರ ಕುಟುಂಬಸ್ಥರು ಇಂದು ಜಾಮೀನು ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಸದ್ಯ ಜಾಮೀನು ಅರ್ಜಿ ಮುಂದೂಡಿಕೆಯಾಗಿದೆ. ಇದಲ್ಲದೆ ಪುನಃ ರಾಗಿಣಿಯನ್ನು ವಿಚಾರಣೆಗಾಗಿ ಸಿಸಿಬಿ ಕಸ್ಟಡಿಗೆ ನೀಡಲಿದ್ದಾರಾ ಅಥವಾ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಲಿದ್ದಾರಾ ಎಂಬುದು ಸಂಜೆ ವೇಳೆಗೆ ನಿರ್ಧಾರವಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.