ಬೆಂಗಳೂರು: ಡ್ರಗ್ಸ್ ಜಾಲ ಆರೋಪದಡಿ ಸಿಲುಕಿರುವ ನಟಿಮಣಿಯರಿಬ್ಬರು ಪರಪ್ಪನ ಅಗ್ರಹಾರ ಜೈಲು ಸೇರಿದ್ದು, ರಾತ್ರಿ ಒಬ್ಬರನ್ನೊಬ್ಬರು ನೋಡಿ ಮಾತುಕತೆ ನಡೆಸಿದ್ದಾರೆ. ಸದ್ಯ ಕೊರೊನಾ ಇರುವ ಕಾರಣ ಇಬ್ಬರನ್ನು ಹೊಸದಾಗಿ ನಿರ್ಮಾಣವಾಗಿರುವ ಕಟ್ಟಡದಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ನಟಿ ರಾಗಿಣಿ ಹಾಗೂ ಸಂಜನಾ ಸದ್ಯ ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಕೈದಿಗಳಾಗಿ ಇರಬೇಕಾದ ಅನಿವಾರ್ಯತೆ ಎದುರಾಗಿದೆ. ಸದ್ಯ ರಾಗಿಣಿ ಇಂಗ್ಲೀಷ್ ನಾವೆಲ್ ಓದುತ್ತಾ ಆತಂಕದಲ್ಲಿ ಮೂರು ರಾತ್ರಿ ಕಳೆದರೆ, ನಿನ್ನೆ ರಾತ್ರಿ ಸಂಜನಾ ಜೈಲಿಗೆ ಎಂಟ್ರಿ ಕೊಟ್ಟಿದ್ದಾರೆ. ಸಂಜನಾಗೆ ಒಂದು ಚಾಪೆ, ದಿಂಬು, ಜಮಖಾನ ನೀಡಿದ್ದು ಇಬ್ಬರು ಆತಂಕದಲ್ಲೇ ಸಮಯ ಕಳೆದಿದ್ದಾರೆ.
ರಾಗಿಣಿ ಜೈಲು ಸೇರುವಾಗ ಒಂದು ಪುಸ್ತಕ ಸಮೇತ ಬಂದಿದ್ದಾರೆ. ಆದರೆ ಸಂಜನಾ ಜೈಲಿಗೆ ತೆರಳುವಾಗ ಅಗತ್ಯ ವಸ್ತುಗಳ ಕಿಟ್ ಮಾತ್ರ ತೆಗೆದುಕೊಂಡು ಹೋಗಿದ್ದಾರೆ. ಇಂದು ಮುಂಜಾನೆ ಜೈಲಿನ ಮ್ಯಾನುವಲ್ ಪ್ರಕಾರ ಪುಳಿಯೋಗರೆ ಸೇವಿಸಲಿದ್ದು, ಇಂದಿನ ದಿನಚರಿ ಮುಂದುವರೆಯಲಿದೆ. ಮತ್ತೊಂದೆಡೆ ಸಂಜನಾ ಜೈಲಿನ ದ್ವಾರ ನೋಡಿ ಇದೇನು ಚಿಕ್ಕ ದ್ವಾರ, ನಾನು ಹೇಗೆ ಒಳಗಡೆ ಹೋಗಲಿ ಅನ್ನೋ ಪ್ರಶ್ನೆ ಮಾಡಿದ್ದಾರಂತೆ. ಸದ್ಯ ಎಷ್ಟೇ ಪ್ರಭಾವಿ ವ್ಯಕ್ತಿಗಳಾಗಿದ್ರೂ ಕೂಡ ಜೈಲಿನ ನಿಯಮ ಪಾಲನೆ ಮಾಡಬೇಕಾದದ್ದು ಅನಿವಾರ್ಯವಾಗಿದೆ.