ETV Bharat / state

ಅಪ್ಪುಗೆ ಟೇಕ್ ಕೇರ್, ಬಾಯ್ ಅಂದಿದ್ದೆ, ಈಗ ಬಾರದ ಲೋಕಕ್ಕೆ ಹೋಗಿದ್ದಾರೆ : ರಚಿತಾ ರಾಮ್ - ಪುನೀತ್ ರಾಜ್ ಕುಮಾರ್ ಸಾವು

ಮೊನ್ನೆ ರಾತ್ರಿ 11.45ಕ್ಕೆ ಅವರು ಮತ್ತು ಅಶ್ವಿನಿ ಲಿಫ್ಟ್‌ನಲ್ಲಿ ಹೋಗೊವಾಗ ಟೇಕ್ ಕೇರ್ ಬಾಯ್ ಅಂತಾ ಹೇಳಿದ್ದೆ. ಆದರೆ, ಈಗ ಹೀಗಾಗಿದೆ ತುಂಬಾ ಬೇಜಾರು, ಸಂಕಟ ಆಗುತ್ತಿದೆ. ಹೇಳೋದಕ್ಕೆ ಆಗ್ತಾ ಇಲ್ಲ..

Actress Rachita Ram statement
ರಚಿತಾ ರಾಮ್
author img

By

Published : Oct 30, 2021, 6:27 PM IST

Updated : Oct 30, 2021, 7:43 PM IST

ಬೆಂಗಳೂರು : ಪುನೀತ್ ರಾಜ್ ಕುಮಾರ್ ಜೊತೆ ಕಡೆಯ ಭೇಟಿ ಮಾಡಿದ್ದ ವೇಳೆ ಟೇಕ್ ಕೇರ್, ಬಾಯ್ ಅಂತಾ ಹೇಳಿದ್ದೆ. ಈಗ ಅವರು ಬಾರದ ಲೋಕಕ್ಕೇ ಹೋಗಿ ಬಿಟ್ಟಿದ್ದಾರೆ ಎನ್ನುತ್ತಾ ಅಳು ತಡೆಯದೆ ನಟಿ ರಚಿತಾ ರಾಮ್ ಬಿಕ್ಕಳಿಸಿ ಬಿಕ್ಕಳಿಸುತ್ತಲೇ ಬೇಸರ ವ್ಯಕ್ತಪಡಿಸಿದರು.

ಅಪ್ಪುಗೆ ಟೇಕ್ ಕೇರ್, ಬಾಯ್ ಅಂದಿದ್ದೆ, ಈಗ ಬಾರದ ಲೋಕಕ್ಕೆ ಹೋಗಿದ್ದಾರೆ

ಕಂಠೀರವ ಕ್ರೀಡಾಂಗಣದಲ್ಲಿ ಪುನೀತ್ ರಾಜ್​​​ಕುಮಾರ್ ಪಾರ್ಥೀವ ಶರೀರದ ದರ್ಶನ ಮಾಡಿದ ನಂತರ ಮಾತನಾಡಿದ ಅವರು, ಕೈ ನಡುಗುತ್ತಿದೆ. ಮಾತು ಬರುತ್ತಿಲ್ಲ ಎಂದು ಗದ್ಗದಿತರಾದರು. ಗುರುಕಿರಣ್ ಬರ್ತ್ ಡೇ ಪಾರ್ಟಿಯಲ್ಲಿ ಸಿಕ್ಕಿದ್ದೆ, ಬಾಯ್ ಎಂದಿದ್ದೆ. ಹುಷಾರು ಎಂದಿದ್ದೆ, ಮೂರು ವರ್ಷ ಆದ ನಂತರ ನನಗೆ ಅವರು ಸಿಕ್ಕಿದ್ದರು.

ಮೊನ್ನೆ ರಾತ್ರಿ 11.45ಕ್ಕೆ ಅವರು ಮತ್ತು ಅಶ್ವಿನಿ ಲಿಫ್ಟ್‌ನಲ್ಲಿ ಹೋಗೊವಾಗ ಟೇಕ್ ಕೇರ್ ಬಾಯ್ ಅಂತಾ ಹೇಳಿದ್ದೆ. ಆದರೆ, ಈಗ ಹೀಗಾಗಿದೆ ತುಂಬಾ ಬೇಜಾರು, ಸಂಕಟ ಆಗುತ್ತಿದೆ. ಹೇಳೋದಕ್ಕೆ ಆಗ್ತಾ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಾನು ರಾಜ್ ಮಕ್ಕಳ ಜೊತೆ ಕೆಲಸ ಮಾಡಬೇಕು ಅಂತಾ ನಮ್ಮ ತಾಯಿ ಆಸೆ ಇತ್ತು. ಅದಕ್ಕೆ ಅವಕಾಶವನ್ನೂ ರಾಜ್ ಕುಟುಂಬ ಕಲ್ಪಿಸಿತ್ತು. ಹಾಗಾಗಿ, ದೇವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ಎಂದರು.

Last Updated : Oct 30, 2021, 7:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.