ಬೆಂಗಳೂರು: ಬೆಂಗಳೂರಿನಲ್ಲಿ 500ಕ್ಕೂ ಹೆಚ್ಚು ನಕಲಿ ವೈದ್ಯರಿದ್ದಾರೆ. ಈ ಕುರಿತು ಸಂಬಂಧಪಟ್ಟ ಡಿಸಿಪಿಗೆ ದೂರು ನೀಡಿದ್ದು, ಇವರ ಮೇಲೆ ಕ್ರಮ ಕೈಗೊಂಡು ಅದಷ್ಟು ಬೇಗ ತನಿಖೆ ಮುಗಿಸುವಂತೆ ಮನವಿ ಮಾಡಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಮತ್ತೊಮ್ಮೆ ಪತ್ರ ಬರೆದು, ಶಿಸ್ತುಕ್ರಮಕ್ಕೆ ಶಿಫಾರಸು ಮಾಡಲಾಗುತ್ತದೆ ಎಂದು ಬೆಂಗಳೂರು ಡಿಹೆಚ್ಓ ಡಾ. ಗೋಳೂರು ಶ್ರೀನಿವಾಸ್ ತಿಳಿಸಿದ್ದಾರೆ.
ನಗರಕ್ಕಿಂತ ಗ್ರಾಮಾಂತರ ಪ್ರದೇಶಗಳಲ್ಲೇ ನಕಲಿ ವೈದ್ಯರ ಹಾವಳಿ ಹೆಚ್ಚಾಗಿರುವುದರಿಂದ ಅಧಿಕೃತ ವೈದ್ಯರು ಯಾರು ಎಂಬುದರ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ. ಇನ್ನು ಸ್ಕ್ಯಾನಿಂಗ್ ಸೆಂಟರ್ಗಳಲ್ಲೂ ಅನಧಿಕೃತವಾಗಿ ಭ್ರೂಣ ಪತ್ತೆ ಮಾಡುವ ಕೆಲಸಗಳು ನಡೆಯುತ್ತಿವೆ.
ಈ ಸುದ್ದಿಯನ್ನೂ ಓದಿ: ರಾಜ್ಯದ ಖಾಕಿ ಪಡೆಗೆ 'ಮಹಿಳಾ ಗರುಡಾ ಪಡೆ' ಸೇರ್ಪಡೆ..!
ಸ್ಟೇಟ್ ಮೆಡಿಕಲ್ ಕೌನ್ಸಿಲ್ನಲ್ಲಿ ಯಾರು ರಿಜಿಸ್ಟರ್ ಮಾಡಿಕೊಂಡಿರುತ್ತಾರೋ ಅವರಿಗೆ ಸಂಬಂಧಪಟ್ಟ ದೂರು ಬಂದರಷ್ಟೇ ಕ್ರಮ ಕೈಗೊಳ್ಳುವ ಅವಕಾಶವಿದೆ ಹೊರತು, ರಿಜಿಸ್ಟರ್ ಮಾಡಿಕೊಳ್ಳದವರ ಕುರಿತು ಏನೂ ಮಾಡಲಾಗದು. ಸಾರ್ವಜನಿಕರು ನಕಲಿ ವೈದ್ಯರ ವಿರುದ್ಧ ದೂರು ನೀಡಬೇಕಾದರೆ ಆಯಾ ಡಿಹೆಚ್ಓ ಬಳಿಯೇ ಹೋಗಬೇಕಾಗುತ್ತದೆ ಎಂದು ಕೆಎಂಸಿ ಮೆಂಬರ್ಸ್ ಮಾಹಿತಿ ನೀಡಿದರು.