ETV Bharat / state

ಪ್ರಾಧಿಕಾರ, ಅಕಾಡೆಮಿ ಬಲಗೊಳಿಸಲು ಕ್ರಮ : ಸಚಿವ ಅರವಿಂದ ಲಿಂಬಾವಳಿ - Minister Arvind Limbayavali talks about authority

ಸಾಂಸ್ಕೃತಿಕ ವಾತಾವರಣವನ್ನ ಮತ್ತಷ್ಟು ಹೆಚ್ಚು ಮಾಡಲು ಅಗತ್ಯ ಕ್ರಮದ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ ಅವರು, ಒಟ್ಟಾರೆ ರಾಜ್ಯದ ಸಂಸ್ಕೃತಿ ಬೆಳವಣಿಗೆಗೆ ಎಲ್ಲಾ ನೆರವು ನೀಡುವುದಾಗಿ ಭರವಸೆ ನೀಡಿದರು..

action-will-be-taken-strengthen-the-academy-minister-arvind-limbayavali
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ
author img

By

Published : Feb 9, 2021, 7:31 PM IST

ಬೆಂಗಳೂರು : ಪ್ರಾಧಿಕಾರಗಳು ಹಾಗೂ ಅಕಾಡೆಮಿಗಳನ್ನು ಬಲಗೊಳಿಸಲು ಕ್ರಮವಹಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಇಂದು ಇಲಾಖೆಯ ವ್ಯಾಪ್ತಿಗೆ ಬರುವ ವಿವಿಧ ಪ್ರಾಧಿಕಾರಗಳು ಮತ್ತು ಅಕಾಡೆಮಿಗಳ ಅಧ್ಯಕ್ಷರುಗಳು ಹಾಗೂ ನಾಲ್ಕು ರಂಗಾಯಣಗಳ ನಿರ್ದೇಶಕರ ಜೊತೆ ಸಭೆ ನಡೆಸಿದರು.

ವಿಕಾಸಸೌಧದಲ್ಲಿ ನಡೆದ ಈ ಸಭೆಯಲ್ಲಿ ಪ್ರಾಧಿಕಾರಗಳು ಮತ್ತು ಅಕಾಡೆಮಿಗಳು ಕೈಗೊಳ್ಳುತ್ತಿರುವ ಕಾರ್ಯಚಟುವಟಿಕೆಗಳು, ಅವರ ಬೇಡಿಕೆ ಮತ್ತು ಅಹವಾಲುಗಳನ್ನು ಆಲಿಸಿದರು.

ಪ್ರತಿ ಪ್ರಾಧಿಕಾರ ಮತ್ತು ಅಕಾಡೆಮಿಗಳ ಅಧ್ಯಕ್ಷರ ಜೊತೆ ಸಂವಾದ ನಡೆಸಿದ ಅವರು, ಕಾರ್ಯಚಟುವಟಿಕೆಯನ್ನು ಬಲಪಡಿಸಲು ಹಾಗೂ ಸಾಂಸ್ಕೃತಿಕವಾಗಿ ಪರಿಣಾಮಕಾರಿ ಮಾಡಲು ಏನೆಲ್ಲಾ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಚರ್ಚಿಸಿದರು.

ಜಾನಪದವನ್ನು ಪಠ್ಯದಲ್ಲಿ ಸೇರಿಸುವ ಬಗ್ಗೆ, ಜಾನಪದ ಹಳ್ಳಿ ರೂಪಿಸುವ ಬಗ್ಗೆ ಸಮಾಲೋಚನೆ ನಡೆದಿದ್ದು, ಕೆಲವು ಅಕಾಡೆಮಿಗಳು ಪ್ರಶಸ್ತಿ ಸಂಖ್ಯೆ ಹೆಚ್ಚಿಸುವ ಪ್ರಸ್ತಾಪ ಹಾಗೂ ಕಲಾ ಗ್ರಾಮದಲ್ಲಿ ಆರ್ಟ್ ಗ್ಯಾಲರಿ ಸ್ಥಾಪನೆ ಕುರಿತ ಪ್ರಸ್ತಾಪವನ್ನೂ ಸಹ ಮಾಡಲಾಗಿದೆ.

ಮೂಡಲಪಾಯ ಯಕ್ಷಗಾನ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮ ರೂಪಿಸುವ ಅಕಾಡೆಮಿಯ ಅಧ್ಯಕ್ಷರ ಪ್ರಸ್ತಾವನೆಗೆ ಸಚಿವರು ಸಕಾರಾತ್ಮಕ ಸ್ಪಂದನೆ ತೋರಿದರು. ವಿನಾಶದ ಅಂಚಿಗೆ ಬಂದಿರುವ ಕಲಾ ಪ್ರಕಾರಗಳ ರಕ್ಷಣೆಗೆ ಕಾರ್ಯಕ್ರಮ ರೂಪಿಸಲು ತಿಳಿಸಿದರು.

ಓದಿ: ಸಿಎಂ ಯಡಿಯೂರಪ್ಪ ಅವರ ಬೆನ್ನೇರಿದ ಮೀಸಲು ಹೋರಾಟಗಳು...!

ಸಾಂಸ್ಕೃತಿಕ ವಾತಾವರಣವನ್ನ ಮತ್ತಷ್ಟು ಹೆಚ್ಚು ಮಾಡಲು ಅಗತ್ಯ ಕ್ರಮದ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ ಅವರು, ಒಟ್ಟಾರೆ ರಾಜ್ಯದ ಸಂಸ್ಕೃತಿ ಬೆಳವಣಿಗೆಗೆ ಎಲ್ಲಾ ನೆರವು ನೀಡುವುದಾಗಿ ಭರವಸೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.