ETV Bharat / state

ಭೂಗತ ಪಾತಕಿ ರವಿ ಪೂಜಾರಿ ಜತೆಗೆ ಎಸಿಪಿ ನಂಟು.. ತನಿಖೆ ಚುರುಕುಗೊಳಿಸಿದ ಸಿಸಿಬಿ - ACP ties up with underworld don Ravi Poojary

ರವಿ ಪೂಜಾರಿ ಹಾಗೂ ಎಸಿಪಿ ವೆಂಕಟೇಶ್ ಪ್ರಸನ್ನ ಪರಿಚಯ ಬೆಳೆದದ್ದು ಹೇಗೆ?, ಪ್ರಸನ್ನ ಯಾವ ರೀತಿ ಸಹಾಯ ಮಾಡಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಕಲೆಹಾಕಲು ಸಿಸಿಬಿ ತನಿಖೆ ಮುಂದುವರೆಸಿದ್ದಾರೆ.

ACP ties up with underworld don Ravi Poojary
ಭೂಗತ ಪಾತಕಿ ರವಿ ಪೂಜಾರಿ
author img

By

Published : Mar 14, 2020, 7:30 PM IST

ಬೆಂಗಳೂರು: ತನ್ನ ಜೊತೆಗೆ ಎಸಿಪಿ ವೆಂಕಟೇಶ್‌ ಪ್ರಸನ್ನ ನಂಟು ಹೊಂದಿದ್ದರು ಎಂದು ಸಿಸಿಬಿ ತನಿಖೆ ವೇಳೆ ಭೂಗತ ಪಾತಕಿ ರವಿ ಪೂಜಾರಿ ಬಾಯಿಬಿಟ್ಟಿದ್ದಾನೆ.

ACP ties up with underworld don Ravi Poojary
ಭೂಗತ ಪಾತಕಿ ರವಿ ಪೂಜಾರಿ..

ಪಾತಕಿ ರವಿ ಪೂಜಾರಿ ಕರೆ ಮಾಡಿ ಬೆದರಿಸುತ್ತಿದ್ದ ನಂಬರ್​ಗಳನ್ನು ಸಿಸಿಬಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಆ ನಂಬರ್​ಗಳ ಮೂಲಕ ಯಾರಿಗೆಲ್ಲಾ ಕರೆ ಬಂದಿದೆ ಎನ್ನುವ ಮಾಹಿತಿಯನ್ನೂ ಸಿಸಿಬಿ ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಆ ವ್ಯಕ್ತಿಗಳ ಹೇಳಿಕೆ ಪಡೆಯಲು ‌ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭಯೋತ್ಪಾದನೆ ಹಾಗೂ ರೌಡಿ ಚಟುವಟಿಕೆ ನಿಗ್ರಹದಲ್ಲಿ ಮುಂಚೂಣಿಯಲ್ಲಿದ್ದ ಎಸಿಪಿ ವೆಂಕಟೇಶ್ ಪ್ರಸನ್ನ ಜೊತೆ ರವಿ ಪೂಜಾರಿ ನಿರಂತರ ಸಂಪರ್ಕದಲ್ಲಿದ್ದ ವಿಚಾರವೂ ಬೆಳಕಿಗೆ ಬಂದಿದೆ. ಇದನ್ನು ಸಿಸಿಬಿ ಗಂಭೀರವಾಗಿ ಪರಿಗಣಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.