ಬೆಂಗಳೂರು: ವಿದ್ಯಾರ್ಥಿಗಳಿಗೆ ಅಸಾಧ್ಯ ಎನ್ನುವುದು ಯಾವುದೂ ಇಲ್ಲ. ಮನೋಬಲದಿಂದ ತಮ್ಮ ಕನಸುಗಳನ್ನು ಸಾಧಿಸಿಕೊಳ್ಳಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಬಿಜಿಎಸ್ ಸಂಸ್ಥಾಪಕರ ದಿನಾಚರಣೆ ಹಾಗೂ ಬಿಜಿಎಸ್ ಜಿಮ್ಸ್ ಗ್ರಂಥಾಲಯದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ತಾರ್ಕಿಕ ಚಿಂತನೆಯೇ ವಿದ್ಯಾರ್ಥಿಗಳ ಯಶಸ್ಸಿನ ಮೆಟ್ಟಿಲು. ಒಮ್ಮೆ ವಿದ್ಯಾರ್ಥಿಯಾದರೆ ಜೀವನದಲ್ಲಿ ಎಂದೆಂದಿಗೂ ವಿದ್ಯಾರ್ಥಿಯೇ ಎಂದರು.
ಬಿಜಿಎಸ್ ಸಂಸ್ಥೆಯಲ್ಲಿ ಇರುವುದು ನಿಮ್ಮ ಪುಣ್ಯ. ಇಲ್ಲಿ ಸಂಸ್ಕೃತಿಯೂ ಸಿಗುತ್ತದೆ. ನೀವು ಯಾವುದೇ ಹುದ್ದೆಯಲ್ಲಿ ಇದ್ದರೂ ಈ ಸಂಸ್ಥೆಯನ್ನು ಯಾವತ್ತೂ ಮರೆಯಬಾರದು. ಇಲ್ಲಿಯ ಸಂಸ್ಕಾರವನ್ನು ಸದಾಕಾಲ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಂಸ್ಥೆಗೆ ಗೌರವ ನೀಡಬೇಕು ಎಂದು ಕಿವಿಮಾತು ಹೇಳಿದರು.
ನಿರ್ಮಲಾನಂದನಾಥ ಸ್ವಾಮೀಜಿ ದೊಡ್ಡ ಗುರುಗಳ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಕೇವಲ ಆಧ್ಯಾತ್ಮ ಬೋಧನೆ ಮಾಡದೇ ವಿಜ್ಞಾನವನ್ನೂ ಬೋಧಿಸುತ್ತಿದ್ದಾರೆ. ವಿಜ್ಞಾನ ಮತ್ತು ಆಧ್ಯಾತ್ಮ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಇವೆರಡರ ಸಂಗಮವೇ ನಿರ್ಮಲಾನಂದನಾಥ ಸ್ವಾಮೀಜಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ :ಬಾನಂದೂರು ಗ್ರಾಮ ವಿಶ್ವದರ್ಜೆಯ ಪಾರಂಪರಿಕ ತಾಣ ಯೋಜನೆಗೆ ಚಾಲನೆ