ETV Bharat / state

9 ವರ್ಷಗಳಿಂದ ವಂಚನೆಯಲ್ಲಿ ತೊಡಗಿದ್ದ ಆರೋಪಿ ಒಂದೇ ದಿನದಲ್ಲಿ ಸಿಸಿಬಿ ಬಲೆಗೆ

CCB police arrested fraud case accused: ಆರೋಪಿ ಪ್ರತಾಪ್​ ಸಿಂಹ ವಿರುದ್ಧ ಬೆಂಗಳೂರು ಹಾಗೂ ಹೊರರಾಜ್ಯಗಳಲ್ಲಿ ಚೆಕ್​ಬೌನ್ಸ್​ ಹಾಗೂ ಪೊಲೀಸ್​ ಠಾಣೆಗಳನ್ನು ವಂಚನೆ ಪ್ರಕರಣಗಳು ದಾಖಲಾಗಿವೆ.

Accused and Police Commissioner B Dayanand
ಆರೋಪಿ ಹಾಗೂ ಪೊಲೀಸ್​ ಆಯುಕ್ತ ಬಿ ದಯಾನಂದ್​
author img

By ETV Bharat Karnataka Team

Published : Dec 12, 2023, 2:16 PM IST

Updated : Dec 12, 2023, 3:08 PM IST

ಪೊಲೀಸ್​ ಆಯುಕ್ತ ಬಿ ದಯಾನಂದ್​

ಬೆಂಗಳೂರು: ಸರ್ಕಾರೇತರ ಸಂಸ್ಥೆ (ಎನ್.ಜಿ.ಓ)ಗಳು, ರೈತರು ಜನಸಾಮಾನ್ಯರಿಗೆ ವಿವಿಧ ರೀತಿಯ ಆಮಿಷಗಳನ್ನೊಡ್ಡಿ ಲಕ್ಷಾಂತರ ರೂಪಾಯಿ ಪಡೆದುಕೊಂಡು ವಂಚಿಸುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪ್ರತಾಪ್ ಸಿಂಹ (39) ಬಂಧಿತ ಆರೋಪಿ. 8-9 ವರ್ಷಗಳಿಂದ ವಂಚಿಸುತ್ತ ಕಳೆದ ಮೂರು ವರ್ಷಗಳಿಂದ ಆರೋಪಿ ತಲೆಮರೆಸಿಕೊಂಡಿದ್ದ. ವಿವಿಧ ಠಾಣೆಗಳಲ್ಲಿ ಆರೋಪಿಯ ವಿರುದ್ಧ ದಾಖಲಾಗಿದ್ದ ಪ್ರಕರಣಗಳ ತನಿಖೆಯ ಜವಾಬ್ಧಾರಿ ಪಡೆದ ಸಿಸಿಬಿ ಪೊಲೀಸರ ತಂಡ ಒಂದೇ ದಿನದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಅಂಧರು, ವೃದ್ಧರು ಮತ್ತು ವಿಶೇಷಚೇತನರನ್ನು ಪೋಷಿಸುವ ಎನ್.ಜಿ.ಓ. ಸಂಸ್ಥೆಗಳಿಗೆ 100ಕ್ಕೂ ಹೆಚ್ಚು ಲ್ಯಾಪ್‌ಟಾಪ್‌ಗಳನ್ನು ಕೊಡಿಸುವುದಾಗಿ ಹಾಗೂ ಖಾಸಗಿ ಕಂಪನಿಗಳು ನೀಡುವ ಸಿಎಸ್​ಆರ್ ಫಂಡ್‌ ಮತ್ತು ಪೆಟ್ರೋ ಕಂಪನಿಗಳಿಂದ 50 ಲಕ್ಷದಷ್ಟು ಫಂಡ್ ಕೊಡಿಸುವುದಾಗಿ ಸುಮಾರು 2.53 ಲಕ್ಷ ರೂ. ಪಡೆದುಕೊಂಡಿದ್ದ ಆರೋಪಿ, ತನ್ನ ಸ್ವಂತ ಖರ್ಚಿಗೆ ಬಳಸಿಕೊಂಡಿದ್ದ. ಇದೇ ರೀತಿ ಬೆಂಗಳೂರು ನಗರದ 18ಕ್ಕೂ ಹೆಚ್ಚು ಸರ್ಕಾರೇತರ ಸಂಸ್ಥೆಗಳಿಗೆ ವಂಚಿಸಿದ್ದ ಆರೋಪಿಯ ವಿರುದ್ಧ ಹಲಸೂರು, ಪೀಣ್ಯ ಸೇರಿದಂತೆ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು.

ಅಲ್ಲದೆ ಮಂಡ್ಯ, ತುಮಕೂರು ಮತ್ತು ಮೈಸೂರು ಜಿಲ್ಲೆಗಳಲ್ಲಿ ವಾಸಿಸುವಂತಹ ಅಮಾಯಕ ರೈತರನ್ನು ಗುರಿಯಾಗಿಸಿಕೊಂಡು ಅವರ ಜಮೀನನ್ನು ಅಭಿವೃದ್ಧಿ ಪಡಿಸುವುದಾಗಿ, ಸರ್ಕಾರದಿಂದ ನೀಡಲಾಗುವ ಸ್ಕೀಂಗಳ ಮುಖಾಂತರ ಸಬ್ಸಿಡಿಗಳನ್ನು ಮಾಡಿಸಿಕೊಡುವುದಾಗಿ, ರೈತಾಪಿ ವರ್ಗದವರು ಬೆಳೆಯುವಂತಹ ಎಳನೀರು, ಕಾಯಿಗಳನ್ನು ಹೊರರಾಜ್ಯಗಳಿಗೆ ಅಧಿಕ ಬೆಲೆಗೆ ಮಾರಾಟ ಮಾಡಿಸಿಕೊಡುವುದಾಗಿಯೂ ಈತ ಹಣ ಪಡೆದುಕೊಂಡಿದ್ದ. ಅಲ್ಲದೇ ದೆಹಲಿ, ಲಖನೌ, ಆಗ್ರಾ, ಹಿಮಾಚಲ ಪ್ರದೇಶಗಳಲ್ಲಿ ವಾಸಿಸುವ ವ್ಯಾಪಾರಿಗಳನ್ನು ನಂಬಿಸಿ ಎಳನೀರು ವ್ಯವಹಾರಕ್ಕೆ ಪಾಲುದಾರರನ್ನಾಗಿ ಮಾಡಿಕೊಳ್ಳುತ್ತೇನೆಂದು ಅವರುಗಳಿಂದಲೂ ಸಹ ಲಕ್ಷಾಂತರ ರೂಗಳನ್ನು ಪಡೆದುಕೊಂಡಿದ್ದ. ಆದರೆ ಯಾರೊಬ್ಬರಿಗೂ ಯಾವುದೇ ವ್ಯವಹಾರ ಮಾಡಿಸದೇ, ಹಣವನ್ನು ಸಹ ಹಿಂತಿರುಗಿಸದೇ ತನ್ನ ಸ್ವಂತ ಖರ್ಚಿಗೆ ಬಳಸಿಕೊಂಡು ವಂಚಿಸಿದ್ದ ಎಂದು ನಗರ ಪೊಲೀಸ್​ ಆಯುಕ್ತ ದಯಾನಂದ ಮಾಹಿತಿ ನೀಡಿದ್ದಾರೆ.

ಅಷ್ಟೇ ಅಲ್ಲದೆ ಬೆಂಗಳೂರು ನಗರದಲ್ಲಿ ವಾಸಿಸುವ ಕೆಲ ಸಾರ್ವಜನಿಕರಿಗೆ ವಿವಿಧ ಪ್ರತಿಷ್ಠಿತ ಕಂಪನಿಗಳಿಂದ ಮತ್ತು ಫ್ಯಾಕ್ಟರಿಗಳಿಂದ ಉತ್ತಮ ಗುಣಮಟ್ಟದ ಲ್ಯಾಪ್‌ಟಾಪ್‌ಗಳನ್ನು ಅತೀ ಕಡಿಮೆ ಬೆಲೆಗೆ ಕೊಡಿಸುತ್ತೇನೆಂದು ನಂಬಿಸಿ ಅವರಿಂದ ಮುಂಗಡ ಹಣವನ್ನು ಪಡೆದು ತನ್ನ ಬ್ಯಾಂಕ್ ಖಾತೆಗೆ ಲಕ್ಷಾಂತರ ರೂಗಳನ್ನು ವರ್ಗಾವಣೆ ಮಾಡಿಸಿಕೊಂಡು, ತನ್ನ ಸ್ವಂತ ಖರ್ಚಿಗೆ ಹಣವನ್ನು ಬಳಸಿ ವಂಚಿಸಿದ್ದ ಎಂದರು.

ಸುಮಾರು 8 ರಿಂದ 9 ವರ್ಷಗಳಿಂದ ಅಮಾಯಕರನ್ನು ನಂಬಿಸಿ, ವಿಶ್ವಾಸ ಗಳಿಸಿ ಅವರುಗಳಿಂದ ಸುಮಾರು 50 ಲಕ್ಷಗಳಿಗೂ ಹೆಚ್ಚಿನ ಹಣವನ್ನು ಪಡೆದುಕೊಂಡು ಯಾರಿಗೂ ಯಾವುದೇ ಕೆಲಸ ಮಾಡಿಕೊಡದೇ ಸುಮಾರು 3 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಆರೋಪಿಯ ವಿರುದ್ಧ ಹೊರರಾಜ್ಯಗಳಲ್ಲಿ ಮತ್ತು ಬೆಂಗಳೂರಿನ ನ್ಯಾಯಾಲಯಗಳಲ್ಲಿ ಹಲವಾರು ಚೆಕ್ ಬೌನ್ಸ್ ಪ್ರಕರಣಗಳು ಹಾಗೂ ಬೆಂಗಳೂರು ನಗರದ ಹಲಸೂರು ಪೊಲೀಸ್ ಠಾಣೆ ಮತ್ತು ಪೀಣ್ಯ ಪೊಲೀಸ್ ಠಾಣೆಗಳಲ್ಲಿ ವಂಚನೆ ಪ್ರಕರಣಗಳು ದಾಖಲಾಗಿದ್ದವು. ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗಾಗಿ‌ ಸಿಸಿಬಿ ಘಟಕಕ್ಕೆ ವರ್ಗಾಯಿಸಲಾಗಿತ್ತು. ತನಿಖೆಯನ್ನು ಪ್ರಾರಂಭಿಸಿದ ಮೊದಲ ದಿವವೇ ಸಿಸಿಬಿ ಪೊಲೀಸರ ತಂಡ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಪೊಲೀಸ್​ ಆಯುಕ್ತರು ವಿವರಿಸಿದರು.

ಇದನ್ನೂ ಓದಿ: ಬೆಂಗಳೂರಲ್ಲಿ ಸೈಟ್​ ಕೊಡಿಸೋದಾಗಿ ₹30 ಲಕ್ಷ ವಂಚನೆ: ಅಮೆರಿಕದಿಂದ ಪೊಲೀಸ್ ಕಮೀಷನರ್​ಗೆ ದೂರು ನೀಡಿದ ವ್ಯಕ್ತಿ

Last Updated : Dec 12, 2023, 3:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.