ETV Bharat / state

ಅಂಗನವಾಡಿ ಕೇಂದ್ರಗಳ ಬಗ್ಗೆ ಸರ್ಕಾರದ ನಿರ್ಲಕ್ಷ್ಯ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಅಂಗನವಾಡಿ ಕಟ್ಟಡಗಳಿಗೆ ಸ್ವಂತ ಕಟ್ಟಡ ಹಾಗೂ ಮೂಲ ಸೌಕರ್ಯ ಒದಗಿಸಬೇಕು, ಬಾಡಿಗೆ ಹಣ ಕನಿಷ್ಠ 5 ಸಾವಿರದಿಂದ 15 ಸಾವಿರಕ್ಕೆ ಏರಿಸಬೇಕು. ಎನ್​​ಆರ್​ಹೆಚ್​ಎಮ್ ನೌಕರರಿಗೆ ಹೆಚ್ಚುವರಿ ಭತ್ಯೆ ಕೊಡುವ ರೀತಿಯೇ ಅಂಗನವಾಡಿ ನೌಕರರಿಗೂ ಹೆಚ್ಚುವರಿ ಭತ್ಯೆ ಕೊಡಬೇಕು, ಭೌಗೋಳಿಕ ಆಧಾರದಲ್ಲಿ ಐಸಿಡಿಸಿ ಯೋಜನೆ ಪುನರ್ ರೂಪಿಸಬೇಕು, ಅಂಗನವಾಡಿ ನೌಕರರಿಗೆ ನಡೆಸುವ ಇಲಾಖಾ ಸಭೆಗಳಿಗೆ ಟಿಎ-ಡಿಎ ಹೆಚ್ಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Accused is that government neglecting the Anganwadi centers of bangalore
ಅಂಗನವಾಡಿ ಕೇಂದ್ರಗಳ ನಿರ್ಲಕ್ಷ್ಯ ಆರೋಪ; ಬೇಡಿಕೆ ಈಡೇರಿಕೆಗೆ ಆಗ್ರಹ
author img

By

Published : Jan 8, 2021, 7:03 AM IST

ಬೆಂಗಳೂರು: ನಗರದ ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿಲ್ಲ ಇತ್ತ ಬಾಡಿಗೆ ಕೊಡಲು ಹಣವೂ ಇಲ್ಲ. ಆರೇಳು ತಿಂಗಳಾದರೂ ಗ್ಯಾಸ್ ಹಣ - ಬಾಡಿಗೆ ಹಣ ಕೊಡದೇ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ಜೊತೆಗೆ ಬಿಬಿಎಂಪಿಯೂ ನಗರದ ಅಂಗನವಾಡಿಗಳ ಬಲವರ್ಧನೆಗೆ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದರು.

ಟಿ. ರಾಜೇಶ್ವರಿ

ನಗರದ ಜನಸಂಖ್ಯೆಗೆ ತಕ್ಕಂತೆ ಪೌಷ್ಟಿಕಾಂಶ ಆಹಾರ ಪೂರೈಕೆಯ ಯೋಜನೆಗಳನ್ನು ಜಾರಿಗೆ ತರಲು, ಮಕ್ಕಳು ಮತ್ತು ಮಹಿಳಾ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಅಂಗನವಾಡಿ ಕೇಂದ್ರಗಳು ಪ್ರಮುಖ ಪಾತ್ರ ವಹಿಸುತ್ತಿವೆ.

ಈ ಸುದ್ದಿಯನ್ನೂ ಓದಿ: ಸಹೋದರಿಯ ಮದುವೆಗಾಗಿ ಕಳ್ಳನಾದ ಸಹೋದರ!

ಹೀಗಾಗಿ ಅಂಗನವಾಡಿ ಕಟ್ಟಡಗಳಿಗೆ ಸ್ವಂತ ಕಟ್ಟಡ ಹಾಗೂ ಮೂಲ ಸೌಕರ್ಯ ಒದಗಿಸಬೇಕು, ಬಾಡಿಗೆ ಹಣ ಕನಿಷ್ಠ 5 ಸಾವಿರದಿಂದ 15 ಸಾವಿರಕ್ಕೆ ಏರಿಸಬೇಕು. ಎನ್​​ಆರ್​ಹೆಚ್​ಎಮ್ ನೌಕರರಿಗೆ ಹೆಚ್ಚುವರಿ ಭತ್ಯೆ ಕೊಡುವ ರೀತಿಯೇ ಅಂಗನವಾಡಿ ನೌಕರರಿಗೂ ಹೆಚ್ಚುವರಿ ಭತ್ಯೆ ಕೊಡಬೇಕು, ಭೌಗೋಳಿಕ ಆಧಾರದಲ್ಲಿ ಐಸಿಡಿಸಿ ಯೋಜನೆ ಪುನರ್ ರೂಪಿಸಬೇಕು, ಅಂಗನವಾಡಿ ನೌಕರರಿಗೆ ನಡೆಸುವ ಇಲಾಖಾ ಸಭೆಗಳಿಗೆ ಟಿಎ - ಡಿಎ ಹೆಚ್ಚಿಸಬೇಕು ಎಂದು ಸಂಘದ ಪೂರ್ವ ತಾಲೂಕಿನ ಪ್ರಧಾನ ಕಾರ್ಯದರ್ಶಿ ಟಿ. ರಾಜೇಶ್ವರಿ ಒತ್ತಾಯಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.