ETV Bharat / state

ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ರಾತ್ರಿ ವೇಳೆ ದರೋಡೆ: ಆರೋಪಿ ಅರೆಸ್ಟ್​ - ಬೆಂಗಳೂರು

ಒಂಟಿ ಮಹಿಳೆಯರನ್ನು ಗುರಿಯಾಗಿಕೊಂಡು ರಾತ್ರಿ ವೇಳೆ ದರೋಡೆ ನಡೆಸುತ್ತಿದ್ದ ದರೋಡೆಕೋರನ್ನು ತಲಘಟ್ಟಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಶಿವಕುಮಾರ್ ಬಂಧಿತ ಆರೋಪಿ.

Accused arrest for Robbery Case in  Bangalore
ಶಿವಕುಮಾರ್ ಬಂಧಿತ ಆರೋಪಿ
author img

By

Published : Jan 9, 2021, 8:36 AM IST

ಬೆಂಗಳೂರು: ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ರಾತ್ರಿ ವೇಳೆ ನೈಸ್ ರಸ್ತೆಯಲ್ಲಿ ದರೋಡೆಗೆ ಇಳಿಯುತ್ತಿದ್ದ ಆರೋಪಿಯನ್ನು ತಲಘಟ್ಟಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಶಿವಕುಮಾರ್ ಬಂಧಿತ ಆರೋಪಿ

ಶಿವಕುಮಾರ್ ಬಂಧಿತ ಆರೋಪಿ. ಮತ್ತೋರ್ವ ಆರೋಪಿ ಪ್ರವೀಣ ಎಸ್ಕೇಪ್ ಆಗಿದ್ದಾನೆ. ಹಳ್ಳಿಗಳ ಕಡೆ ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ದರೋಡೆ ಮಾಡುತ್ತಿದ್ದ ಈ ಆರೋಪಿಗಳು ಕನಕಪುರ, ಮಾಗಡಿ, ಬಿಡದಿ ಭಾಗದ ನೈಸ್ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೂ ಉಪಟಳ ನೀಡುತ್ತಿದ್ದರು. ದರೋಡೆ ಬಳಿಕ ತಮಿಳುನಾಡಿಗೆ ಹೋಗಿ ತಲೆಮರೆಸಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಈ ಹಿಂದೆ ಕೂಡ ದರೋಡೆ ಕೇಸ್​​ನಲ್ಲಿ ಜೈಲು‌ ಸೇರಿದ್ದ ಆಸಾಮಿಗಳು ಹೊರ ಬಂದ ಬಳಿಕವೂ ಮತ್ತೆ ಹಳೇ ಚಾಳಿಯನ್ನು ಮುಂದುವರೆಸಿದ್ದರು. ಬಂಧಿತರ ವಿರುದ್ಧ ವಿವಿಧ ಠಾಣೆಗಳಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.