ಬೆಂಗಳೂರು: ನನ್ನ ಬಗ್ಗೆ ಸಿಬಿಐ ಕೋರ್ಟ್ಗೆ ಬಿ ರಿಪೋರ್ಟ್ ಸಲ್ಲಿಸಿದೆ. ನನ್ನ ಮೇಲೆ ಮಾಡಿದ್ದ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಮಾಜಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಡಿವೈಎಸ್ಪಿ ಗಣಪತಿ ಪ್ರಕರಣದಲ್ಲಿ ಸಿಬಿಐನಿಂದ ಕೋರ್ಟ್ಗೆ ಬಿ ರಿಪೋರ್ಟ್ ಸಲ್ಲಿಕೆ ವಿಚಾರ ಪ್ರಸ್ತಾಪಿಸಿ, ಬಿ.ಗಣಪತಿ ಮಾತ್ರವಲ್ಲ, ಡಿ.ಕೆ.ರವಿ ಕೇಸ್ನಲ್ಲೂ ರಾಜಕೀಯ ದುರುದ್ದೇಶದಿಂದ ಆರೋಪ ಮಾಡಲಾಗಿತ್ತು ಎಂದರು. ಈಗ ಸತ್ಯ ಏನು ಅಂತ ಜನರಿಗೆ ಗೊತ್ತಾಗಿದೆ ಎಂದರು.
ಜೈಲಿನಲ್ಲಿರಬೇಕಾದವರು ಸಚಿವರಾಗಿದ್ದಾರೆ ಎಂದು ಪ್ರಧಾನಿ ಮೋದಿ ನನ್ನನ್ನು ಟೀಕಿಸಿದ್ದರು. ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಮಾಡಿದ ಬಿಜೆಪಿಗೆ ಈಗ ಉತ್ತರ ಸಿಕ್ಕಿದೆ.
ಕೆ.ಆರ್.ಪುರಂ ಉಪ ಚುನಾವಣೆ ಹಿನ್ನೆಲೆ ಕೆ.ಆರ್.ಪುರಂ ಕ್ಷೇತ್ರದ ಮುಖಂಡರ ಸಭೆ ಇಂದು ಕೆಪಿಸಿಸಿ ಕಚೇರಿಯಲ್ಲಿ ನಡೆಯಿತು. ಮಾಜಿ ಸಚಿವ ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ಉಮಾಶ್ರೀ, ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ, ನಾರಾಯಣಸ್ವಾಮಿ ಎಂಎಲ್ಸಿ ಯು.ಬಿ.ವೆಂಕಟೇಶ್, ಸ್ಥಳೀಯ ಮುಖಂಡರು ಭಾಗಿಯಾಗಿದ್ದರು. ಚುನಾವಣೆ ಪ್ರಚಾರ, ತಂತ್ರಗಾರಿಕೆ ಕುರಿತು ಚರ್ಚಿಸಲಾಯಿತು.