ಬೆಂಗಳೂರು: ವೇಗವಾಗಿ ಬೈಕ್ ಚಲಾಯಿಸಿ ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೈಸೂರು ರಸ್ತೆ ಫ್ಲೈಓವರ್ ಮೇಲೆ ನಡೆದಿದೆ.
ಹಳೆ ಗುಡ್ಡದಹಳ್ಳಿ ನಿವಾಸಿ ಗಜೇಂದ್ರ ಮೃತಪಟ್ಟ ಯುವಕ. ಶಿವಕುಮಾರ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಜನತಾ ಕರ್ಪ್ಯೂ ಹಿನ್ನೆಲೆ ನಗರದ ರಸ್ತೆಗಳೆಲ್ಲಾ ಖಾಲಿ ಖಾಲಿ ಇದ್ದವು. ಈ ರಸ್ತೆಯಲ್ಲಿ ಬೌನ್ಸ್ ಬೈಕ್ನಲ್ಲಿ ವೇಗವಾಗಿ ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಈ ಸಂಬಂಧ ಕೆ.ಆರ್ ಮಾರುಕಟ್ಟೆ ಸಂಚಾರ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.