ETV Bharat / state

ಲಂಚಕ್ಕೆ ಬೇಡಿಕೆ ಆರೋಪ: ಎಸಿಬಿಯಲ್ಲಿ ಪೊಲೀಸರ ವಿರುದ್ಧವೇ FIR! - ಪೊಲೀಸರ ವಿರುದ್ಧ ಎಫ್​ಐಆರ್​ ದಾಖಲಿಸಿದ ಎಸಿಬಿ

ಬೆಂಗಳೂರು ನಗರದಲ್ಲಿ ದಾಖಲಾದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಲಂಚಕ್ಕೆ ಇಟ್ಟ ಆರೋಪದಡಿ ಭ್ರಷ್ಟಾಚಾರ ನಿಗ್ರಹ ದಳ(ACB)ದಲ್ಲಿ ಪೊಲೀಸರ ವಿರುದ್ಧವೇ ಎಫ್​.ಐ.ಆರ್​​ ದಾಖಲಾಗಿದೆ.

Acb registers FIR  against benglauru police
ಭ್ರಷ್ಟಾಚಾರ ನಿಗ್ರಹ ದಳ
author img

By

Published : Jul 24, 2021, 6:57 AM IST

ಬೆಂಗಳೂರು: ಸೆಟ್ಲ್‌ಮೆಂಟ್ ಹೆಸರಲ್ಲಿ ಲಕ್ಷಾಂತರ ರೂಪಾಯಿ ಲೂಟಿ ಹೊಡೆದಿರುವ ಆರೋಪ ನಗರದ ಕೆಲ ಪೊಲೀಸರ ವಿರುದ್ಧ ಕೇಳಿ ಬಂದಿದೆ. ಇದರ ಬೆನ್ನಲ್ಲೇ 2 ಪ್ರತ್ಯೇಕ ಪ್ರಕರಣಗಳಲ್ಲಿ ಲಂಚಕ್ಕೆ ಬೇಡಿಕೆಯಿಟ್ಟಿರುವ ಆರೋಪದಡಿ ವೈಟ್‌ಫೀಲ್ಡ್ ಸೈಬರ್ ಠಾಣೆಯ ಇನ್‌ಸ್ಪೆಕ್ಟರ್ ಸೇರಿ ನಾಲ್ವರು ಸಿಬ್ಬಂದಿ ಹಾಗೂ ಕೋಣನಕುಂಟೆ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದಲ್ಲಿ ಎಫ್.ಐ.ಆರ್ ದಾಖಲಾಗಿದೆ.

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಲಂಚಾವತಾರ ತಾಂಡವವಾಡುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ಪೊಲೀಸ್ ಇಲಾಖೆಯಲ್ಲೂ ಭ್ರಷ್ಟಾಚಾರದ ಆರೋಪ ಕೇಳಿಬಂದಿದ್ದು, ಪೊಲೀಸರೇ ಇಲ್ಲಿ ಆರೋಪಿಗಳಾಗಿದ್ದಾರೆ.

ಇದಕ್ಕೆ ಸಾಕ್ಷ್ಯ ಎಂಬಂತೆ ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ವೈಟ್‌ಫೀಲ್ಡ್ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ರೇಣುಕಾ, ಸಬ್ ಇನ್‌ಸ್ಪೆಕ್ಟರ್‌ಗಳಾದ ನವೀನ್, ಗಣೇಶ್, ಕಾನ್‌ಸ್ಪೇಬಲ್ ಹೇಮಂತ್ ಹಾಗೂ ಕೋಣನಕುಂಟೆ ಠಾಣೆಯ ಕಾನ್‌ಸ್ಟೇಬಲ್ ಮೊಹಮ್ಮದ್ ವಿರುದ್ಧ ಎಸಿಬಿಯಲ್ಲಿ 2 ಪ್ರತ್ಯೇಕ ಪ್ರಕರಣ ದಾಖಲಾಗಿವೆ.

ಪ್ರಕರಣದ ಹಿನ್ನೆಲೆ:

ಉದ್ಯಮಿ ಗೋಪಿನಾಥ್ ಇಂಟಿರಿಯರ್ ಡಿಸೈನ್ ಮಾಡಿಕೊಡುವುದಾಗಿ ವ್ಯಕ್ತಿಯೊಬ್ಬರಿಂದ ಹಣ ಪಡೆದಿದ್ದರು. ಆದರೆ, ಕೆಲಸ ಮಾಡಿಸಿಕೊಡದೇ ಹಣವನ್ನೂ ಕೊಡದೇ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಗೋಪಿನಾಥ್ ವಿರುದ್ಧ ದೂರು ದಾಖಲಾಗಿತ್ತು. ಜುಲೈ 16ರಂದು ಗೋಪಿನಾಥ್ ಮನೆಗೆ ಬಂದಿದ್ದ ಪಿಎಸ್‌ಐ ಗಣೇಶ್ ಪತ್ನಿ, ಮಗು ಸಮೇತ ಠಾಣೆಗೆ ಕರೆತಂದಿದ್ದರು.

ಎಫ್.ಐ.ಆರ್ ತೋರಿಸಲು ಹೇಳಿದ್ದಕ್ಕೆ ಗಣೇಶ್ ಕಪಾಳಕ್ಕೆ ಹೊಡೆದು ಅವರ ಹಾಗೂ ಪತ್ನಿಯ ಮೊಬೈಲ್ ತೆಗೆದುಕೊಂಡಿದ್ದಾರೆ. ಮಧ್ಯಾಹ್ನ ಚೇಂಬರ್‌ಗೆ ಕರೆಸಿದ ಇನ್‌ಸ್ಪೆಕ್ಟರ್, ಗೋಪಿನಾಥ್ ಹಾಗೂ ಪತ್ನಿಯನ್ನು ಜೈಲಿಗೆ ಕಳಿಸುವುದಾಗಿ ಹೇಳಿದ್ದರು. ದೂರುದಾರರಿಗೆ ಡಿಸೈನ್ ಕೆಲಸ ಮಾಡಲು ಅಥವಾ ಹಣ ವಾಪಸ್ ನೀಡಲು ಸಿದ್ಧನಿದ್ದೇನೆ. ಕಾಲಾವಕಾಶ ನೀಡಬೇಕು ಎಂದು ಹೇಳಿದ್ದೆ. ಆಗ ಪಿಎಸ್‌ಐ ನವೀನ್ ಕಾನ್ಫರೆನ್ಸ್ ರೂಂಗೆ ಕರೆದೊಯ್ದು ಅರೆಸ್ಟ್ ಎಲ್ಲ ಯಾಕೆ ? ಸೆಟ್ಲ್ ಮಾಡಿಕೋ ಎಂದಿದ್ದರು ಎಂದು ಗೋಪಿನಾಥ್ ದೂರಿನಲ್ಲಿ ಉಲ್ಲೇಖಿಸಿದ್ದರು ಎಂದು ಹೇಳಲಾಗ್ತಿದೆ.

5 ಲಕ್ಷ ರೂ.ನ್ನು ದೂರುದಾರರ ಖಾತೆಗೆ ಹಾಕು. ನಿಮ್ಮಿಬ್ಬರನ್ನು ಅರೆಸ್ಟ್ ಮಾಡದಿರಲು 10 ಲಕ್ಷ ರೂ. ನೀಡಬೇಕು. ಹಣ ನೀಡದಿದ್ದರೆ ಜೈಲಿಗೆ ಕಳಿಸುವಂತೆ ಇನ್‌ಸ್ಪೆಕ್ಟರ್ ಸೂಚಿಸಿದ್ದಾರೆ ಎಂದು ಹೇಳಿದ್ದರು ಎಂಬುದಾಗಿ ದೂರಿನಲ್ಲಿ ಗೋಪಿನಾಥ್ ಹೇಳಿದ್ದಾರೆ.

ಲಂಚ ಕೊಟ್ಟರೂ ಮತ್ತೆ ಬೇಡಿಕೆ:

ಇದಾದ ಬಳಿಕ ಸಂಬಂಧಿಕರ ಮೂಲಕ 10 ಲಕ್ಷ ರೂ.ನ್ನು ಪತ್ನಿಯ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡು ಕಾರು ಚಾಲಕನ ಮೂಲಕ ಪತ್ನಿಯ ಬ್ಯಾಂಕ್ ಖಾತೆಯ ಚೆಕ್‌ಬುಕ್‌ನ್ನು ಸೈಬರ್ ಠಾಣೆಗೆ ತರಿಸಿಕೊಂಡು ಪಿಎಸ್‌ಐ ಗಣೇಶ್ ಸೂಚನೆಯಂತೆ ಸ್ಥಳೀಯ ಬ್ಯಾಂಕ್‌ಗೆ ಹೋಗಿ 5 ಲಕ್ಷ ರೂ.ನ್ನು ನನ್ನ ವಿರುದ್ಧ ದೂರು ಕೊಟ್ಟವರ ಖಾತೆಗೆ ವರ್ಗಾವಣೆ ಮಾಡಿದ್ದೆ. ಉಳಿದ 5 ಲಕ್ಷ ರೂ.ನ್ನು ಡ್ರಾ ಮಾಡಿಕೊಂಡು ಸೈಬರ್ ಕ್ರೈಂ ಠಾಣೆಗೆ ತಂದು ಪಿಎಸ್‌ಐ ಸೂಚನೆಯಂತೆ ಸೋಫಾ ಮೇಲಿಟ್ಟಿದ್ದೆ. ಇದನ್ನು ಕಾನ್‌ಸ್ಟೇಬಲ್ ಹೇಮಂತ್ ತೆಗೆದುಕೊಂಡು ಹೋಗಿದ್ದರು. ಠಾಣೆಯಿಂದ ಹೊರ ಬರುವಾಗ ಬಾಕಿ 5 ಲಕ್ಷ ರೂ. ತರುವಂತೆ ಸೂಚಿಸಿದ್ದರು ಎಂದು ದೂರಿನಲ್ಲಿ ಮಾಹಿತಿ ನೀಡಿದ್ದಾರೆ.

ಜುಲೈ 19ರಂದು ಠಾಣೆಗೆ ಹೋಗಿ 5 ಲಕ್ಷ ರೂ. ನೀಡಲು ಕಾಲಾವಕಾಶ ನೀಡುವಂತೆ ಪಿಎಸ್‌ಐ ನವೀನ್ ಬಳಿ ಕೇಳಿಕೊಂಡಾಗ, ನೀವು ಕೊಟ್ಟ ಎಲ್ಲಾ ಹಣವನ್ನು ಇನ್‌ಸ್ಪೆಕ್ಟರ್ ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಇಂದು 2 ಲಕ್ಷ ರೂ ಕೊಟ್ಟು, ಮರುದಿನ ಮತ್ತೆ 2 ಲಕ್ಷ ರೂ. ಕೊಡುವಂತೆ ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ. ಈ ಸಂಭಾಷಣೆಯನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿರುವುದಾಗಿ ಗೋಪಿನಾಥ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಗಾಂಜಾ ಕೇಸ್‌ನಲ್ಲಿ ಫಿಟ್ ಮಾಡುವುದಾಗಿ ಬೆದರಿಕೆ:

ಮತ್ತೊಂದು ಪ್ರಕರಣದಲ್ಲಿ ಬಟ್ಟೆ ವ್ಯಾಪಾರಿ ಸುಧಿನ್ ಕೊಟ್ಟ ದೂರಿನ ಆಧಾರದ ಮೇಲೆ ಕೋಣನಕುಂಟೆಯ ಪೇದೆ ಮೊಹಮದ್ ವಿರುದ್ಧ FIR ದಾಖಲಾಗಿದೆ.

ಜುಲೈ 7 ರಂದು ಕೋಣನಕುಂಟೆ ಠಾಣೆಯ ಪ್ರಕರಣ ಸಂಬಂಧ 5 ಜನ ಪೊಲೀಸರು ಸುಧಿನ್ ರೂಂ ಶೋಧ ಮಾಡಿದ್ದರು. ರೂಂನಲ್ಲಿದ್ದ ಸುಧಿನ್ ಸ್ನೇಹಿತರಾದ ಆದರ್ಶ್ ಹಾಗೂ ಅನಿರುದ್ಧನನ್ನು ಸುದೀನ್ ಕಾರಿನಲ್ಲಿ ಠಾಣೆಗೆ ಕರೆದುಕೊಂಡು ಹೋಗಿದ್ದರು.

ಇದಾದ ಬಳಿಕ ಆದರ್ಶ್‌ಗೆ ಸೇರಿದ 12 ಗ್ರಾಂ ಚಿನ್ನದ ಸರ ಕಾಣೆಯಾಗಿತ್ತು. ಇವರನ್ನು ಬಿಡುಗಡೆ ಮಾಡಲು 4 ಲಕ್ಷ ರೂ. ಲಂಚ ಪಡೆದು, ಕಾರನ್ನು ಬಿಡುಗಡೆ ಮಾಡಲು ಮತ್ತೆ 3 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ಕೊಡದಿದ್ದರೆ 144 ಕೆಜಿ ಗಾಂಜಾ ಕೇಸಿನಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಎಂದು ತೋರಿಸಿ, ಕಾರನ್ನು ಸೀಜ್ ಮಾಡುವುದಾಗಿ ಬೆದರಿಸಿದ್ದಾರೆ ಎಂದು ಸುಧಿನ್ ಎನ್ನುವವರು ಆರೋಪಿಸಿದ್ದಾರೆ.

ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಪ್ರಕರಣದ ಬಗ್ಗೆ ಮಾಹಿತಿ:

ಒಟ್ಟಿನಲ್ಲಿ ದಾಖಲೆ ಸಮೇತ ದೂರು ಕೊಟ್ಟಿರುವ ಹಿನ್ನೆಲೆಯಲ್ಲಿ ಈ 2 ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಆರೋಪಿಗಳನ್ನು ಸದ್ಯದಲ್ಲೇ ವಿಚಾರಣೆ ನಡೆಸಲಾಗುವುದು. ಕೆಲ ಸಾಕ್ಷ್ಯಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಇತ್ತೀಚೆಗೆ ನಗರದಲ್ಲಿ ಲಂಚ ಪಡೆದಿರುವುದಕ್ಕೆ ಸಂಬಂಧಿಸಿದಂತೆ ಪೊಲೀಸರ ವಿರುದ್ಧ ಕೇಳಿ ಬಂದಿರುವ ಆರೋಪಗಳು:

  • ಆರ್‌ಟಿ ನಗರ ಇನ್‌ಸ್ಪೆಕ್ಟರ್ ಕಾತ್ಯಾಯಿನಿ ಆಳ್ವ ಹಾಗೂ ಇತರರು ಲಂಚ ಪಡೆದ ಆರೋಪದಲ್ಲಿ ಅಮಾನತುಗೊಂಡಿದ್ದರು.
  • ತಳ್ಳುಗಾಡಿ ಕಡಲೆಕಾಯಿ ವ್ಯಾಪಾರಿಗೆ ಮಾಮೂಲಿ ಕೊಡುವಂತೆ ಬೆದರಿಸಿದ ಆರ್‌.ಎಂ.ಸಿ ಯಾರ್ಡ್ ಠಾಣೆಯ ಇನ್‌ಸ್ಪೆಕ್ಟರ್ ಪಾರ್ವತಮ್ಮ ಹಾಗೂ ಇತರರು ಅಮಾನತುಗೊಂಡಿದ್ದರು.
  • ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಎನ್‌ಸಿಆರ್ ಪ್ರತಿ ನೀಡಲು 4 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಡಿದ್ದ ಬೇಗೂರು ಠಾಣೆಯ ಎಎಸ್‌ಐ ಸುರೇಶ್ ಬಂಧನಕ್ಕೊಳಗಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.