ಬೆಂಗಳೂರು: ದೇವೇಂದ್ರಪ್ಪ ಆಪ್ತ ಬಿಬಿಎಂಪಿ ಪೂರ್ವ ವಲಯ ಟೌನ್ ಪ್ಲಾನಿಂಗ್ ಎಫ್ಡಿಎ ಶ್ರೀನಿವಾಸ್ ಮೂರ್ತಿ ಮನೆ ಮೇಲೆ ಎಸಿಬಿ ದಾಳಿ ಮಾಡಿದ್ದು, ಮಹತ್ವದ ದಾಖಲೆಗಳ ಜೊತೆಗೆ ಶ್ರೀನಿವಾಸ ಮೂರ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ಬಿಬಿಎಂಪಿ ಪೂರ್ವ ವಲಯ ಟೌನ್ ಪ್ಲಾನಿಂಗ್ನಲ್ಲಿ ಎಫ್ಡಿಎ ಆಗಿರುವ ಶ್ರೀನಿವಾಸ್ ಮೂರ್ತಿಯ ಖಾಸಗಿ ಅಪಾರ್ಟ್ಮೆಂಟ್ನಲ್ಲಿ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ. ಹಲಸೂರಿನ ಗುಪ್ತಾ ಲೇಔಟ್ನಲ್ಲಿರುವ ಶ್ರೀನಿವಾಸ್ ಮೂರ್ತಿಯ ಖಾಸಗಿ ಅಪಾರ್ಟ್ಮೆಂಟ್ನಲ್ಲಿ ಆತನ ಮೊಬೈಲ್ ಫೋನ್ಅನ್ನು ಎಸಿಬಿ ಅಧಿಕಾರಿಗಳು ವಶಪಡಿಸಿಕೊಂಡರು. ಮೊಬೈಲ್ ಪರಿಶೀಲನೆ ವೇಳೆ ದೇವೇಂದ್ರಪ್ಪನ ಜತೆ ಸಂರ್ಪಕದಲ್ಲಿರುವುದು ಪತ್ತೆಯಾಗಿದೆ. ಹಾಗಾಗಿ ಅಧಿಕಾರಿಗಳು ಶ್ರೀನಿವಾಸ್ ಮೂರ್ತಿಯನ್ನು ವಶಕ್ಕೆ ಪಡೆದು ಎಸಿಬಿ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ.
ದಾಳಿ ಗಮನಿಸಿದ ಶ್ರೀನಿವಾಸ್ ಮೂರ್ತಿ ಸಿಕ್ಕಿ ಬೀಳುವ ಭಯದಿಂದ ವಾಟ್ಸ್ಆ್ಯಪ್ ಸಂದೇಶಗಳನ್ನು ಅಳಿಸಿ, ವಾಟ್ಸ್ಆ್ಯಪ್ ಡಿಲೀಟ್ ಮಾಡಿದ್ದಾನೆ ಎನ್ನಲಾಗುತ್ತಿದೆ. ಎಫ್.ಡಿ.ಎ ಮೂರ್ತಿ ಬಳಿ ಮಹತ್ವದ ಮಾಹಿತಿಯಿರುವ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸಿಬಿ ತಿಳಿಸಿದೆ. ಶ್ರೀನಿವಾಸ್ ಮೂರ್ತಿ ಬಾಯ್ಬಿಟ್ಟರೆ ದೇವೇಂದ್ರಪ್ಪ ಅವರ ಮತ್ತಷ್ಟು ಹಗರಣ ಬಯಲಿಗೆ ಬರುವ ಸಾಧ್ಯತೆ ಇದೆ.
ಓದಿ: ಸರ್ಕಾರದ ಸಹಾಯಕ ನಿರ್ದೇಶಕನಿಗೆ ಎಸಿಬಿ ಶಾಕ್: ದೇವೇಂದ್ರಪ್ಪ ಮನೆ, ಕಚೇರಿ ಮೇಲೆ ದಾಳಿ