ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಭೂ ಒಡೆತನ ಯೋಜನೆಯಲ್ಲಿ ಅಧಿಕಾರಿಗಳು ಅವ್ಯಹಾರ ನಡೆಸಿರುವ ಆರೋಪಕ್ಕೆ ಸಂಬಂಧಪಟ್ಟಂತೆ ಎಸಿಬಿ ಅಧಿಕಾರಿಗಳ ದಾಳಿ ಮುಂದುವರಿದಿದೆ. ಮೂವರು ಅಧಿಕಾರಿಗಳನ್ನ ವಶಕ್ಕೆ ಪಡೆದು, ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
![acb-raid-on-valmikhi-development-organisation](https://etvbharatimages.akamaized.net/etvbharat/prod-images/8587529_me.jpg)
ವಸಂತನಗರದ ಜನ್ಮಾ ಭವನ ರಸ್ತೆಯ ಬಳಿಯ ನಿಗಮದ ಕೇಂದ್ರ ಕಚೇರಿಯಲ್ಲಿ ಎಸಿಬಿ ಅಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿದ್ದಾರೆ. ತನಿಖೆ ವೇಳೆ ವಾಲ್ಮಿಕಿ ಅಭಿವೃದ್ಧಿ ನಿಗಮವು ಭೂ ಒಡೆತನ ಯೋಜನೆಯಡಿ ಜಮೀನು ಖರೀದಿಸಿ ಪರಿಶಿಷ್ಟ ಪಂಗಡದ ಭೂರಹಿತ ಬಡಜನರಿಗೆ ಹಂಚಿಕೆ ಮಾಡುತ್ತದೆ. ಆದರೆ ಇಲ್ಲಿ ಕಡಿಮೆ ಬೆಲೆಗೆಬಾಳುವ ಭೂಮಿಯನ್ಮ ಭೂ ಮಾಲೀಕರಿಂದ ಹೆಚ್ಚಿನ ಬೆಲೆಗೆ ಖರೀದಿಸಿ ಮತ್ತಷ್ಟು ಹಣಕ್ಕೆ ಮಾರಾಟ ಮಾಡಲಾಗಿದೆ.
ಸದ್ಯ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ ಮಂಡಳಿಯ ವ್ಯವಸ್ಥಾಪಕ ನಾಗೇಶ್ರಿಂದ 32.5 ಲಕ್ಷ, ಸಹಾಯಕ ವ್ಯವಸ್ಥಾಪಕ ಸುಬ್ಬಯ್ಯ ಮನೆಯಲ್ಲಿ 27.5ಲಕ್ಷ, ಒಟ್ಟು ಕಚೇರಿ ಮನೆ ಸೇರಿದಂತೆ 82 ಲಕ್ಷ ನಗದು ವಶಪಡಿಸಿಕೊಂಡು ದಾಖಲೆಗಳ ಪರಿಶೀಲನೆಯಲ್ಲಿ ಎಸಿಬಿ ತಂಡ ತೊಡಗಿದೆ. ಮತ್ತೊಂದೆಡೆ ಮೂವರು ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.