ETV Bharat / state

ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದ ಕಾರಾಗೃಹ ಅಧೀಕ್ಷಕ - ಎಸಿಬಿ ಬಲೆಗೆ ಬಿದ್ದ ಕಾರಾಗೃಹದ ಅಧೀಕ್ಷಕ

ಕಾರಾಗೃಹದ ಅಧೀಕ್ಷಕ ಜಯರಾಮ್ ಸಜಾಬಂಧಿಯ ಪತ್ನಿಯಿಂದ 5 ಸಾವಿರ ರೂ. ಲಂಚ ಪಡೆಯುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ರೆಡ್​​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ.

ACB RAID  in Bangalore
ಎಸಿಬಿ ಬಲೆಗೆ ಬಿದ್ದ ಕಾರಾಗೃಹದ ಅಧೀಕ್ಷಕ
author img

By

Published : Oct 4, 2020, 4:19 PM IST

ಬೆಂಗಳೂರು: ಅಪರಾಧಿಯೊಬ್ಬನ ಪೆರೋಲ್​ ವಿಚಾರವಾಗಿ ಲಂಚ ಪಡೆಯುತ್ತಿದ್ದ ವೇಳೆ ಕಾರಾಗೃಹದ ಸಿಬ್ಬಂದಿ ರೆಡ್​ ಹ್ಯಾಂಡ್​ ಆಗಿ ಎಸಿಬಿ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.

ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ತುಮಕೂರು ಮೂಲದ ಅಪರಾಧಿಗೆ ಸೆಷೆನ್ಸ್​ ನ್ಯಾಯಾಲಯ 14 ವರ್ಷ ಜೈಲು ಶಿಕ್ಷೆ ನೀಡಿ ತೀರ್ಪು ನೀಡಿತ್ತು. ಇತ್ತೀಚೆಗೆ ಈ ವ್ಯಕ್ತಿ ಪೆರೋಲ್ ಕೋರಿ ಕೇಂದ್ರ ಕಾರಾಗೃಹಕ್ಕೆ ಅರ್ಜಿ ಹಾಕಿದ್ದರು. ಈ ವೇಳೆ ಕಾರಾಗೃಹದ ಅಧೀಕ್ಷಕ ಜಯರಾಮ್ ಅಪರಾಧಿಯನ್ನು ಬಿಡುಗಡೆ ಮಾಡಲು 10 ಸಾವಿರ ರೂ. ಹಣದ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. 5 ಸಾವಿರ ರೂ.ಗಳನ್ನು ಮುಂಗಡವಾಗಿ ನೀಡುವಂತೆ ಕೇಳಿದ್ದರಂತೆ. ಅಪರಾಧಿ ಈ ವಿಷಯವನ್ನು ತಮ್ಮ ಪತ್ನಿಗೆ ತಿಳಿಸಿದ್ದು, ಪತ್ನಿ ಎಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಕಾರಾಗೃಹದ ಅಧೀಕ್ಷಕ ಜಯರಾಮ್ ಸಜಾಬಂಧಿಯ ಪತ್ನಿಯಿಂದ 5 ಸಾವಿರ ರೂ. ಲಂಚ ಪಡೆಯುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ರೆಡ್​​ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ. ಸದ್ಯ ಕಾರಾಗೃಹದ ಅಧೀಕ್ಷಕ ಜಯರಾಮ್​ನನ್ನು ಬಂಧಿಸಿದ್ದು, ಕೃತ್ಯದಲ್ಲಿ ಕಾರಾಗೃಹದ ವಾರ್ಡನ್ ಬಡಿಗೇರ್ ಭಾಗಿಯಾಗಿದ್ದ ಆರೋಪದಡಿ ಅವರನ್ನು ಸಹ ಅಧಿಕಾರಿಗಳು ವಶಕ್ಕೆ‌ ಪಡೆದುಕೊಂಡು ತನಿಖೆ‌ ಮುಂದುವರೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.