ಬೆಂಗಳೂರು: ಬಿಡಿಎಗಳು ಮತ್ತು ಏಜೆಂಟ್ಗಳು ಬಿಡಿಎ ಅಧಿಕಾರಿಗಳ ಜತೆ ಸೇರಿಕೊಂಡು ಭ್ರಷ್ಟಾಚಾರ, ಅವ್ಯವಹಾರದಲ್ಲಿ ತೊಡಗಿರುವ ಆರೋಪ ಕೇಳಿಬಂದ ಹಿನ್ನೆಲೆ ಬೆಂಗಳೂರು ನಗರದ 9 ಕಡೆ ಎಸಿಬಿ ಏಕಕಾಲದಲ್ಲಿ ದಾಳಿ ನಡೆಸಿದೆ.
ಎಸಿಬಿ SP ಉಮಾ ಪ್ರಶಾಂತ್ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳು ಬೆಂಗಳೂರಿನ ವಿವಿಧ ಭಾಗಗಳಲ್ಲಿ ದಾಳಿ ನಡೆಸಿದ್ದಾರೆ.
- ರಘು ಬಿ ಎನ್ , ಚಾಮರಾಜಪೇಟೆ.
- ಮೋಹನ್ , ಮನೋರಾಯನ ಪಾಳ್ಯ, ಆರ್ ಟಿ ನಗರ
- ಮನೋಜ್ , ದೊಮ್ಮಲೂರು
- ಮುನಿರತ್ನ@ರತ್ನವೇಲು, ಕೆಂಗುಟೆ, ಮಲ್ಲತ್ತಹಳ್ಳಿ
- ತೇಜು@ತೇಜಸ್ವಿ, ಆರ್ ಆರ್ ನಗರ
- ಅಶ್ವಥ್ @ಮುದ್ದಿನಪಾಳ್ಯ ಅಶ್ವತ್ಥ, ಕೆಜಿ ಸರ್ಕಲ್ , ಮುದ್ದಿನಪಾಳ್ಯ
- ರಾಮ, ಚಾಮುಂಡೇಶ್ವರಿನಗರ, ಬಿಡಿಎ ಲೇಔಟ್
- ಲಕ್ಷ್ಮಣ್, ಚಾಮುಂಡೇಶ್ಚರಿ ನಗರ, ಬಿಡಿಎ ಲೇಔಟ್
- ಚಿಕ್ಕ ಹನುಮಯ್ಯ, ಮುದ್ದಿನಪಾಳ್ಯ
ಈ ಮಧ್ಯವರ್ತಿ ಮತ್ತು ಏಜೆಂಟ್‌ಗಳ ನಿವಾಸದ ಮೇಲೆ ಎಸಿಬಿ ದಾಳಿ ನಡೆಸಿದೆ. ಇವರೆಲ್ಲರೂ ಸರ್ಕಾರಿ ಅಧಿಕಾರಿ, ಸಾರ್ವಜನಿಕ ಕಚೇರಿಯಲ್ಲಿ ಪ್ರಭಾವ ಬಳಸಿ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದರು ಎನ್ನಲಾಗುತ್ತಿದೆ.