ಬೆಂಗಳೂರು: ಲಂಚ ಸ್ವೀಕರಿಸುತ್ತಿದ್ದ ಪರವಾನಿಗೆ ಭೂ ಮಾಪನ ಅಧಿಕಾರಿ ಬಿ ಎಂ ಅಶೋಕ್ ಎಂಬುವರನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡಾಗಿ ಬಂಧಿಸಿದ್ದಾರೆ.
ಬಿ. ಎಂ ಚಂದ್ರಶೇಖರ್ ಎಂಬುವರು ಯಲಹಂಕ ತಾಲೂಕು (ಉತ್ತರ), ಜಾಲ ಹೋಬಳಿ, ಬಾಗಲೂರು ಗ್ರಾಮಕ್ಕೆ ಸೇರಿದ ಸರ್ವೇ ನಂ. 255/18ರಲ್ಲಿ 17. 25 ಗುಂಟೆ ಜಮೀನಿಗೆ ನಕ್ಷೆ ಮಾಡಿಸುವ ಸಂಬಂಧ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು.
ಸರ್ವೇ ಮಾಡಿಕೊಡಲು ನೇಮಕವಾಗಿದ್ದ ಪರವಾನಿಗೆ ಭೂಮಾಪಕ ಅಧಿಕಾರಿ ಅಶೋಕ್ ಚಂದ್ರಶೇಖರ್ ಅವರನ್ನು ಖುದ್ದಾಗಿ ಭೇಟಿಯಾಗಿ 20 ಸಾವಿರ ರೂ. ಗೆ ಬೇಡಿಕೆ ಇಟ್ಟಿರುವುದಾಗಿ ಚಂದ್ರಶೇಖರ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರಿನನ್ವಯ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು 5 ಸಾವಿರ ರೂಪಾಯಿ ಪಡೆದುಕೊಳ್ಳುವಾಗ ಅಶೋಕ್ನನ್ನು ಬಂಧಿಸಿದ್ದು ತನಿಖೆ ಮುಂದುವರಿಸಿದ್ದಾರೆ.
ಓದಿ: ಲಂಚ ಪ್ರಕರಣ: ಬಿಎಸ್ವೈಗೆ ನೀಡಿದ್ದ ರಿಲೀಫ್ ವಿಸ್ತರಿಸಿ ಸುಪ್ರೀಂ ಆದೇಶ