ETV Bharat / state

ಈ ವರ್ಷವೂ ಉಚಿತ ಬೈಸಿಕಲ್ ಯೋಜನೆಗೆ ಕತ್ತರಿ.. ಈ ಬಗ್ಗೆ ಶಿಕ್ಷಣ ಸಚಿವರು ಹೀಗಂತಾರೆ.. - ಶಿಕ್ಷಣ ಸಚಿವ ನಾಗೇಶ್

2017-18ನೇ ಸಾಲಿನಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 2,47,955 ಹೆಣ್ಣುಮಕ್ಕಳು, 2,57,941 ಗಂಡು ಮಕ್ಕಳಿಗೆ ಒಟ್ಟಾರೆ 5,05,896 ಮಕ್ಕಳಿಗೆ ಉಚಿತ ಬೈಸಿಕಲ್ ವಿತರಣೆ (Free Bicycle Project) ಮಾಡಲಾಗಿತ್ತು.‌ ಇದಕ್ಕಾಗಿ 172 ಕೋಟಿ ವೆಚ್ಚ ಮಾಡಲಾಗಿತ್ತು..

ಶಿಕ್ಷಣ ಸಚಿವ ನಾಗೇಶ್
ಶಿಕ್ಷಣ ಸಚಿವ ನಾಗೇಶ್
author img

By

Published : Nov 12, 2021, 5:19 PM IST

ಬೆಂಗಳೂರು : ಸಾಂಕ್ರಾಮಿಕ ಕೊರೊನಾ ಸೋಂಕಿನಿಂದಾಗಿ ಆರ್ಥಿಕತೆ ಮೇಲೆ ಪರಿಣಾಮ ಬೀರಿದ್ದರಿಂದಾಗಿ ಈ ವರ್ಷವೂ 8ನೇ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಉಚಿತ ಬೈಸಿಕಲ್‌ ಯೋಜನೆ ಮುಂದುವರೆಸುವುದು ಅನುಮಾನ.

ಉಚಿತ ಬೈಸಿಕಲ್ ಯೋಜನೆ ಕುರಿತಂತೆ ಶಿಕ್ಷಣ ಸಚಿವ ನಾಗೇಶ್ ಪ್ರತಿಕ್ರಿಯೆ ನೀಡಿರುವುದು..

ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ಇದ್ದ ಸಂದರ್ಭದಲ್ಲಿ ಉಚಿತ ಬೈಸಿಕಲ್‌ ವಿತರಣಾ ಯೋಜನೆಗೆ ಚಾಲನೆ ನೀಡಲಾಗಿತ್ತು. ಆದರೆ, ಇದೀಗ ಕೊರೊನಾ ಹೊಡೆತಕ್ಕೆ ಸಿಲುಕಿದ್ದು ಇದೀಗ ಈ ಪ್ರೋತ್ಸಾಹದಾಯಕ ಯೋಜನೆಗೆ ತೊಡಕುಂಟಾಗಿದೆ. ಸರ್ಕಾರ ಅನುದಾನ ಕೊಟ್ಟರಷ್ಟೇ ಈ ಶೈಕ್ಷಣಿಕ ವರ್ಷಕ್ಕೆ ಉಚಿತ ಬೈಸಿಕಲ್ ವಿತರಣೆಯನ್ನ ವಿದ್ಯಾರ್ಥಿಗಳಿಗೆ ಮಾಡಲಾಗುತ್ತೆ ಅಂತಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಮೂಲಗಳು ಹೇಳಿವೆ.

ಕಳೆದ ವರ್ಷ ಲಾಕ್‌ಡೌನ್​ ಬಿಕ್ಕಟ್ಟು ಇದ್ದರೂ ಶಾಲಾ ಮಕ್ಕಳಿಗೆ ಉಚಿತ ಬೈಸಿಕಲ್ ವಿತರಣೆ ಮಾಡುವುದನ್ನ ನಿಲ್ಲಿಸುವುದಿಲ್ಲ ಅಂತಾ ಸಿಎಂ ಯಡಿಯೂರಪ್ಪ ಹೇಳಿದ್ದರು. ಆದರೆ, 2021-22ನೇ ಶೈಕ್ಷಣಿಕ ಸಾಲಿನ 8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಆಗುವುದು ಕಷ್ಟ ಎನ್ನಲಾಗುತ್ತಿದೆ. ಬಜೆಟ್‌ನಲ್ಲಿ ಇದಕ್ಕಾಗಿ ಅನುದಾನ ಮೀಸಲು ಇಟ್ಟಿಲ್ಲ. ಹೀಗಾಗಿ, ಶಾಲಾ ಮಕ್ಕಳಿಗೆ ಸೈಕಲ್ ಸಿಗುವುದು ಅನುಮಾನವಾಗಿದೆ.

ಈ ಕುರಿತು ಶಿಕ್ಷಣ ಸಚಿವ ನಾಗೇಶ್ ಮಾತನಾಡಿದ್ದು, ಕಳೆದ ಎರಡು ವರ್ಷ ಶಾಲೆಗಳೇ ನಡೆದಿಲ್ಲ. ಈಗಿನ್ನೂ ಶಾಲೆಗಳು ಶುರುವಾಗಿವೆ. ಸೈಕಲ್ ವಿತರಣೆ ಕುರಿತು ತೀರ್ಮಾನ ಮಾಡಲಾಗುವುದು. ಆದರೆ, ಈ ಯೋಜನೆ ಮುಂದುವರೆಯಲಿದೆ. ಯಾವ ವರ್ಷ ಮಾಡಬೇಕೆಂದು ಚಿಂತನೆ ಮಾಡಲಾಗುವುದು ಎಂದು ತಿಳಿಸಿದರು. ಅಂದಹಾಗೆ ಮುಂದಿನ ದಿನಗಳಲ್ಲಿ ಬೈಸಿಕಲ್ ವಂಚಿತ ವಿದ್ಯಾರ್ಥಿಗಳಿಗೂ ಲಭಿಸುತ್ತಾ ಇಲ್ವಾ ಅನ್ನೋ ಪ್ರಶ್ನೆ ಹಾಗೆ ಮುಂದುವರೆದಿದೆ.

ಉಚಿತ ಬೈಸಿಕಲ್ ಯೋಜನೆ ಶುರುವಾಗಿದ್ಯಾವಾಗ?

ಅಂದಹಾಗೆ, 2006-2007ನೇ ಸಾಲಿನಲ್ಲಿ ಉಚಿತ ಬೈಸಿಕಲ್ ವಿತರಣಾ ಯೋಜನೆಗೆ ಚಾಲ್ತಿ ನೀಡಲಾಯ್ತು. ಗ್ರಾಮೀಣ ಹಾಗೂ ಗುಡ್ಡಗಾಡು ಪ್ರದೇಶದ ಮಕ್ಕಳಿಗೆ ಸಾರಿಗೆ ಸೌಲಭ್ಯ ಒದಗಿಸುವ ದೃಷ್ಟಿಯಿಂದ ಉಚಿತ ಬೈಸಿಕಲ್ ವಿತರಣೆ ಮಾಡಲಾಗುತ್ತಿದೆ.

ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 8ನೇ ತರಗತಿಯ ಬಡತನ ರೇಖೆಗಿಂತ ಕೆಳಗೆ ಇರುವ ಹೆಣ್ಣು ಮಕ್ಕಳಿಗೆ ಈ ಸೌಲಭ್ಯ ಒದಗಿಸಲಾಗುತ್ತಿತ್ತು. ಆದರೆ, 2007-2008ನೇ ಸಾಲಿನಿಂದ ಈ ಯೋಜನೆಯನ್ನು ನಗರ ಪ್ರದೇಶದ ಬಿಪಿಎಲ್ ಕಾರ್ಡ್ ಕುಟುಂಬದ ಹೆಣ್ಣು-ಗಂಡು ಮಕ್ಕಳಿಗೂ ವಿಸ್ತರಿಸಲಾಯಿತು.

ಯಾರಿಗೆ ಇಲ್ಲ ಈ ಸೌಲಭ್ಯ?

ಬಸ್ ಪಾಸ್ ಹೊಂದಿದ ಹಾಗೂ ಹಾಸ್ಟೆಲ್ ಸೌಲಭ್ಯ ಪಡೆದ ಮಕ್ಕಳಿಗೆ ಈ ಸೌಲಭ್ಯ ನೀಡುವುದಿಲ್ಲ.‌ ಅಂದಹಾಗೇ ಮಕ್ಕಳ ದಾಖಲಾತಿಯನ್ನ ಉತ್ತೇಜಿಸಲು, ದೂರದಲ್ಲಿರುವ ಶಾಲೆಯನ್ನು ತಲುಪಲು ಅನುಕೂಲ ಮಾಡಿಕೊಡುವುದು, ಆತ್ಮಸ್ಥೈರ್ಯ ಹೆಚ್ಚಿಸುವುದು ಹಾಗೂ ಕಲಿಕೆಯ ಗುಣಮಟ್ಟವನ್ನ, ಗೈರು ಹಾಜರಾಗುವುದನ್ನ ತಪ್ಪಿಸುವುದು, ಪ್ರಯಾಣದ ವೇಳೆಯನ್ನ ತಗ್ಗಿಸುವುದು ಈ ಪ್ರೋತ್ಸಾಹದಾಯಕ ಯೋಜನೆಯ ಮುಖ್ಯ ಉದ್ದೇಶವಾಗಿತ್ತು.

2017-18ನೇ ಸಾಲಿನಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 2,47,955 ಹೆಣ್ಣುಮಕ್ಕಳು, 2,57,941 ಗಂಡು ಮಕ್ಕಳಿಗೆ ಒಟ್ಟಾರೆ 5,05,896 ಮಕ್ಕಳಿಗೆ ಬೈಸಿಕಲ್ ವಿತರಣೆ ಮಾಡಲಾಗಿತ್ತು.‌ ಇದಕ್ಕಾಗಿ 172 ಕೋಟಿ ವೆಚ್ಚ ಮಾಡಲಾಗಿತ್ತು.

ಇನ್ನು ಬೈಸಿಕಲ್ ವಿತರಣೆ ಮಾಡುವ ಸಂದರ್ಭದಲ್ಲಿ ಪ್ರತಿ ಶಾಲೆಗೆ ಒಂದು ಸೆಟ್‌ ಟೂಲ್ ಕಿಟ್, ಪ್ರತಿ ಬೈಸಿಕಲ್‌ಗೆ 5 ವರ್ಷಗಳ ವಾರಂಟಿ ಕಾರ್ಡ್ ನೀಡಲಾಗುತ್ತೆ. ಜೊತೆಗೆ ಸೈಕಲ್ ವಿತರಿಸಿದ ಆರು ತಿಂಗಳೊಳಗೆ ಕ್ಲಸ್ಟರ್ ಹಂತದಲ್ಲಿ ಬೈಸಿಕಲ್ ಸರ್ವಿಸಿಂಗ್ ಕ್ಯಾಂಪ್ ಮಾಡಲು ಅವಕಾಶ ಕಲ್ಪಿಸಲಾಗುತ್ತೆ.

ಆದರೆ, ಈ ಸಲ ಕೊರೊನಾ ಕಾರಣಕ್ಕೆ ಲಾಕ್‌ಡೌನ್ ಹೊಡೆತದಿಂದ ಇದೀಗ ಈ ಯೋಜನೆಗೆ ಈ ವರ್ಷ ಎಳ್ಳು ನೀರು ಬಿಡುವುದು ಖಚಿತ ಎನ್ನಲಾಗುತ್ತಿದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.