ETV Bharat / state

ಗೃಹ ಪ್ರವೇಶದ ಆಹ್ವಾನ ಪತ್ರಿಕೆ ನೀಡಲು ಬಂದು 48 ಗ್ರಾಂ ಚಿನ್ನದ ಸರ ಕದ್ದು ಮಹಿಳೆ ಪರಾರಿ! - Bangalore Crime News

ಗೃಹ ಪ್ರವೇಶದ ಆಹ್ವಾನ ಪತ್ರಿಕೆ ನೀಡುವ ಸೋಗಿನಲ್ಲಿ ಬಂದ ಮಹಿಳೆ ಒಬ್ಬಂಟಿಯಾಗಿ ಮನೆಯಲ್ಲಿದ್ದ ಮಹಿಳೆಯನ್ನ ವಂಚಿಸಿ ಚಿನ್ನದ ಸರ ಕದ್ದು ಪರಾರಿಯಾದ ಘಟನೆ ನಡೆದಿದೆ.

48 ಗ್ರಾಂ ಚಿನ್ನದ ಸರ ಕದ್ದು ಪರಾರಿಯಾದ ಮಹಿಳೆ
48 ಗ್ರಾಂ ಚಿನ್ನದ ಸರ ಕದ್ದು ಪರಾರಿಯಾದ ಮಹಿಳೆ
author img

By

Published : Aug 24, 2020, 7:49 AM IST

ಬೆಂಗಳೂರು: ಗೃಹ ಪ್ರವೇಶದ ಆಹ್ವಾನ ಪತ್ರಿಕೆ ಕೊಡುವ ಸೋಗಿನಲ್ಲಿ ಮನೆಗೆ ಹೋಗಿದ್ದ ಮಹಿಳೆ 48 ಗ್ರಾಂ ಚಿನ್ನದ ಸರ ಕದ್ದು ಪರಾರಿಯಾಗಿದ್ದಾಳೆ.

ದೇವಸಂದ್ರ ನಿವಾಸಿ ನಂದಿನಿ ವಂಚನೆಗೊಳಗಾದವರು. ಇವರು ಕೊಟ್ಟ ದೂರಿನ ಮೇರೆಗೆ ಮಂಜುಳಾ ಎಂಬಾಕೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಕೆ.ಆರ್.ಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.

ನಂದಿನಿ ಆಗಸ್ಟ್​​ 20ರಂದು ಮಧ್ಯಾಹ್ನ ಮನೆಯಲ್ಲಿ ಒಬ್ಬರೇ ಇದ್ದರು. ಅಂದು ಮನೆ ಮುಂದೆ ಬಂದಿದ್ದ ಅಪರಿಚಿತ ಮಹಿಳೆ, ಮನೆಯಲ್ಲಿ ನಿಮ್ಮ ಅತ್ತೆ ಇಲ್ಲವೇ ಎಂದು ಕೇಳಿದ್ದು, ಅದಕ್ಕೆ ನಂದಿನಿ ಇಲ್ಲ ಎಂದಿದ್ದಾರೆ. ಬಳಿಕ ಮಹಿಳೆ, ಗೃಹ ಪ್ರವೇಶದ ಕಾರ್ಡ್ ಕೊಡಲು ಬಂದಿರುವುದಾಗಿ ಹೇಳಿದ್ದಾಳೆ. ನಿಮ್ಮ ಅತ್ತೆ ಮನೆಯಲ್ಲಿ ಇದ್ದಿದ್ದರೆ ನನಗೆ ಟೀ ಮಾಡಿ ಕೊಡುತ್ತಿದ್ದರು ಎಂದಿದ್ದಾಳೆ.

ಆಕೆಯ ಮಾತಿನ ಹಿನ್ನೆಲೆಯಲ್ಲಿ ಮನೆಯೊಳಗೆ ಕರೆದು ಕೂರಿಸಿದ್ದರು. ಈ ವೇಳೆ ಚಿನ್ನದ ಸರ ಚೆನ್ನಾಗಿದೆಯಲ್ಲ. ಎಲ್ಲಿ ಮಾಡಿಸಿದ್ದು ಎಂದು ಕೇಳಿದ್ದಾಳೆ. ಬಳಿಕ ಅದನ್ನು ನೋಡಿ ಕೊಡುವುದಾಗಿ ಹೇಳಿ ಬಿಚ್ಚಿಸಿಕೊಂಡಿದ್ದಾಳೆ. ನಂದಿನಿ ಟೀ ಮಾಡಲೆಂದು ಅಡುಗೆ ಕೊಠಡಿಗೆ ಹೋದಾಗ ಅಲ್ಲಿಂದ ಪರಾರಿಯಾಗಿದ್ದಾಳೆ. ಮನೆಯ ಸುತ್ತಮುತ್ತಲಿನ ರಸ್ತೆಯ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.