ETV Bharat / state

ಇಂದು ಒಟ್ಟು 182 ನೂತನ ಶಾಸಕರಿಂದ ಪ್ರಮಾಣ ವಚನ ಸ್ವೀಕಾರ: ಡಿಕೆಶಿ, ದೇವೇಗೌಡರ ಹೆಸರಲ್ಲಿ ಪ್ರಮಾಣ - A total of 182 new MLAs took oath today

ಇಂದಿನ ವಿಧಾನಸಭೆ ಅಧಿವೇಶನಲ್ಲಿ 182 ನೂತನ ಶಾಸಕರು ಪ್ರಮಾಣ ವಚನ ಸ್ವೀಕರಿಸಿದರು.

a-total-of-182-new-mlas-took-oath-today
ಇಂದು ಒಟ್ಟು 182 ನೂತನ ಶಾಸಕರಿಂದ ಪ್ರಮಾಣ ವಚನ ಸ್ವೀಕಾರ: ಡಿಕೆಶಿ, ದೇವೇಗೌಡರ ಹೆಸರಲ್ಲಿ ಪ್ರಮಾಣ
author img

By

Published : May 22, 2023, 10:16 PM IST

Updated : May 22, 2023, 10:33 PM IST

ಬೆಂಗಳೂರು: ವಿಧಾನಸಭೆಗೆ ಚುನಾಯಿತರಾದ ಶಾಸಕರು ಇಂದು ಪ್ರಮಾಣ ವಚನ ಸ್ವೀಕರಿಸಿದರು. ಬಹುತೇಕ ಚುನಾಯಿತ ಶಾಸಕರು ಭಗವಂತನ ಹೆಸರಲ್ಲಿ ಪ್ರತಿಜ್ಞಾವಿಧಿ ಸ್ಬೀಕರಿಸಿದರೆ ಇನ್ನು ಕೆಲವರು ತಮ್ಮ ನೆಚ್ಚಿನ ನಾಯಕ, ಕ್ಷೇತ್ರದ ಜನರ ಹೆಸರಲ್ಲಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಚುನಾಯಿತರಾದ ಒಟ್ಟು 182 ಶಾಸಕರು ಇಂದು ವಿಧಾನಸಭೆಯಲ್ಲಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಇನ್ನೂ 42 ಶಾಸಕರ ಪ್ರಮಾಣ ವಚನ ಬಾಕಿ ಉಳಿದಿದ್ದು, ನಾಳೆ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಇಂದು ನಡೆದ ಪ್ರಮಾಣ ವಚನ ಸ್ವೀಕಾರದಲ್ಲಿ ಕೆಲ ಸ್ವಾರಸ್ಯಕರ ಸಂಗತಿಗಳಿಗೆ ಸಾಕ್ಷಿಯಾಯಿತು. ಬಹುತೇಕ ಶಾಸಕರು ಭಗವಂತ, ಸಂವಿಧಾನ ಹೆಸರಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರೆ, ಇನ್ನು ಕೆಲ ಶಾಸಕರು ತಮ್ಮ ನೆಚ್ಚಿನ ನಾಯಕನ ಹೆಸರಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು.

ಪ್ರಮಾಣವಚನ ಸ್ವೀಕರಿಸುತ್ತಿರುವ ಸಿಎಂ ಸಿದ್ದರಾಮಯ್ಯ

ಡಿಕೆಶಿ ಹೆಸರಲ್ಲಿ ಪ್ರಮಾಣ ವಚನ: ಕುಣಿಗಲ್ ಕ್ಷೇತ್ರದ ಶಾಸಕ ಡಾ ರಂಗನಾಥ್ ಡಿ.ಕೆ ಶಿವಕುಮಾರ್ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ವ್ಯಕ್ತಿ ಹೆಸರಲ್ಲಿ ಪ್ರಮಾಣ ವಚನ ಪಠಿಸುತ್ತಿದ್ದ ಹಾಗೇ ವಿಧಾನಸಭೆ ಕಾರ್ಯದರ್ಶಿ ಆಕ್ಷೇಪಿಸಿದರು. ಬಳಿಕ ಭಗವಂತನ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಮಾಣವಚನ ಸ್ವೀಕರಿಸುತ್ತಿರುವ ಡಿಕೆ ಶಿವಕುಮಾರ್​​

ಕೆಲವರಿಂದ ಅಂಬೇಡ್ಕರ್, ಬಸವ ಬುದ್ಧ ಹೆಸರಲ್ಲಿ ಪ್ರಮಾಣ: ಇನ್ನು ಮೂಡಿಗೆರೆ ಕೈ ಶಾಸಕಿ ನಯನಾ ಮೋಟಮ್ಮ ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ರಾಣೆಬೆನ್ನೂರು ಕೈ ಶಾಸಕ ಪ್ರಕಾಶ್ ಕೋಳಿವಾಡ ಮತ್ತು ಕೆಜಿಎಫ್ ಕಾಂಗ್ರೆಸ್ ಶಾಸಕಿ ರೂಪಕಲಾ ಶಶಿಧರ್ ಬುದ್ಧ, ಬಸವ, ಕಾರ್ಮಿಕ ಅಂಬೇಡ್ಕರ್, ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಆನೇಕಲ್ ಕಾಂಗ್ರೆಸ್ ಶಾಸಕ ಬಿ ಶಿವಣ್ಣ ಅಂಬೇಡ್ಕರ್​​ ಹಾಗೂ ಕ್ಷೇತ್ರದ ಜನರ ಹೆಸರಲ್ಲಿ ಪ್ರಮಾಣ ವಚನ ಪಡೆದರು.

ಡಿಕೆಶಿ ಜೊತೆ ಮಾಜಿ ಸಚಿವ ಆರ್​​ ಅಶೋಕ್​​ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಚಿಕ್ಕಬಳ್ಳಾಪುರ ಕೈ ಶಾಸಕ ಪ್ರದೀಪ್ ಈಶ್ವರ್ ಅಂಬೇಡ್ಕರ್, ಶಿವಕುಮಾರ ಸ್ವಾಮಿ ಹೆಸರಲ್ಲಿ ಪ್ರತಿಜ್ಞಾ ವಿಧಿ ಸ್ವೀಕಾರ ಮಾಡಿದರು. ಹೆಚ್.ಡಿ ತಮ್ಮಯ್ಯ ಬುದ್ದ, ಬಸವ, ಅಂಬೇಡ್ಕರ್ ಹಾಗೂ ಕನಕದಾಸ ಹೆಸರಲ್ಲಿ ಪ್ರಮಾಣ ವಚನ ಮಾಡಿದರು. ನೇಮಿರಾಜ್ ನಾಯ್ಕ್ ಗುರು ಕೊಟ್ಟೂರೇಶ್ವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು.

ಡಿಕೆ ಶಿವಕುಮಾರ್​ ಹಾಗೂ ಮಾಜಿ ಸಿಎಂ ಬೊಮ್ಮಾಯಿ
ಡಿಕೆ ಶಿವಕುಮಾರ್​ ಹಾಗೂ ಮಾಜಿ ಸಿಎಂ ಬೊಮ್ಮಾಯಿ

ದೇವೇಗೌಡರ ಹೆಸರಲ್ಲಿ ಪ್ರಮಾಣ ವಚನ: ಮುಳುಬಾಗಿಲು ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಹೆಸರಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು.‌ ಬಳಿಕ ವಿಧಾನಸಭೆ ಕಾರ್ಯದರ್ಶಿ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆ ಭಗವಂತ ಹೆಸರಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಕಾಂಗ್ರೆಸ್ ಶಾಸಕ ಎಂ.ಜಿ ಪೊನ್ನಣ್ಣ ತಾಯಿ ಕಾವೇರಮ್ಮ ಹೆಸರಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರೆ, ಶ್ಯಾಮನೂರು ಶಿವಶಂಕರಪ್ಪ ಕಲ್ಲೇಶ್ವರ ಹೆಸರಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​​ ಮತ್ತು ಶಾಸಕ ಗಾಲಿ ಜರ್ನಾದನ ರೆಡ್ಡಿ

ಆಂಗ್ಲ ಭಾಷೆಯಲ್ಲಿ ಪ್ರಮಾಣ: ಇನ್ನು ಕೆಲ ಶಾಸಕರು ಆಂಗ್ಲ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಬಿಜೆಪಿ ಶಾಸಕ ನಿಖಿಲ್ ಕತ್ತಿ, ಕಾಂಗ್ರೆಸ್ ಶಾಸಕ ರೆಹಮಾನ್‌ ಖಾನ್ ಹಾಗೂ ಕೈ ಶಾಸಕಿ ಖನೀಜಾ ಫಾತಿಮಾ ಆಂಗ್ಲ ಭಾಷೆಯಲ್ಲಿ ಪ್ರಮಾಣ ವಚನ ಪಠಿಸಿದರು. ಇತ್ತ ಖಾನಾಪುರ ಬಿಜೆಪಿ ಶಾಸಕ ವಿಠಲ ಹಲಗೇಕರ್ ಪ್ರಮಾಣ ವಚನ ಸ್ವೀಕಾರ ಮಾಡಲು ಮುಂದಾಗುತ್ತಿದ್ದ ಹಾಗೇ ಕೈ ಶಾಸಕ ಬೇಳೂರು ಗೋಪಾಲ ಕೃಷ್ಣ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿ ಎಂದರು. ಆಗ ವಿಠಲ ಹಲಗೇಕರ್ ನಾನು ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕಾರ ಮಾಡುತ್ತೇನೆ ಎಂದು ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕಾರ ಮಾಡಿದರು. ಬಳಿಕ ಎಲ್ಲಾ ಸದಸ್ಯರು ಮೇಜು ಕುಟ್ಟಿ ಶ್ಲಾಘಿಸಿದರು.

ಹಂಗಾಮಿ ಸ್ಪೀಕರ್​ ಆರ್​​.ವಿ ದೇಶಪಾಂಡೆ ಮತ್ತು ಸಚಿವ ಜಮೀರ್​​ ಅಹಮದ್​ ಖಾನ್​​

ಜಮೀರ್ ರಿಂದ ಸ್ಪೀಕರ್ ಕಚೇರಿಯಲ್ಲಿ ಪ್ರಮಾಣ ವಚನ: ಇತ್ತ ಜಮೀರ್ ಅಹಮ್ಮದ್ ಖಾನ್ ಹಂಗಾಮಿ ಸ್ಪೀಕರ್ ಆರ್.ವಿ ದೇಶಪಾಂಡೆ ಕಚೇರಿಯಲ್ಲಿ ಪ್ರತ್ಯೇಕವಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಮೊನ್ನೆ ಸಚಿವರಾಗಿ ಇಂಗ್ಲಿಷ್​​ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಕ್ಕೆ ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು. ಕನ್ನಡ ಬಾರದ ಕಾರಣ ಸ್ಪೀಕರ್ ಕಚೇರಿಯಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು‌. ಮತ್ತೆ ವಿವಾದವಾಗಬಾರದು ಎಂದು ಸ್ಪೀಕರ್ ಮುಂದೆ ಪ್ರಮಾಣ ವಚನ ಸ್ವೀಕಾರ ಮಾಡಿದರು.

ಇದನ್ನೂ ಓದಿ: ಸಿಡ್ನಿಯಲ್ಲಿ ನೃತ್ಯ ಮೂಲಕ ಮೋದಿ ಸ್ವಾಗತಿಸಲಿರುವ ಕುಡ್ಲದ ಕುವರಿ: ಕಾಂತಾರ ಸಿನಿಮಾ ಹಾಡಿಗೆ ನಾಟ್ಯ ಪ್ರದರ್ಶನ

Last Updated : May 22, 2023, 10:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.