ಬೆಂಗಳೂರು: ರಾಜರಾಜೇಶ್ವರಿನಗರದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದು ಅನುಮಾನಾಸ್ಪದವಾಗಿ ಬೈಕ್ನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶ್ರೀನಿವಾಸ್ ಬಂಧಿತ ಆರೋಪಿ.
ಶ್ರೀನಿವಾಸ್ 5.30 ಲಕ್ಷ ಮೌಲ್ಯದ 105 ಗ್ರಾಂ ತೂಕದ ಚಿನ್ನಾಭರಣದ ಜೊತೆಗೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ. ಈ ವೇಳೆ ಸ್ವಯಂ ದೂರು ದಾಖಲಿಸಿ, ಸಮೀಪದ ಶಕ್ತಿ ರೆಸಾರ್ಟ್ ಬಳಿ ವಾಹನ ತಪಾಸಣೆ ನಡೆಸಿದ ವೇಳೆ ಸಿಕ್ಕಿಬಿದ್ದಿದ್ದಾನೆ.
![A thief arrested in Bengaluru after theft gold](https://etvbharatimages.akamaized.net/etvbharat/prod-images/ka-bng-04-rr-nagar-station-ka10033_26122020215948_2612f_1609000188_345.jpg)
ಇದಲ್ಲದೇ ಜೇಬಿಲ್ಲಿದ್ದ 53 ಗ್ರಾಂ ತೂಕದ ಚಿನ್ನ ಇಟ್ಟುಕೊಂಡಿದ್ದನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ವಿಚಾರಣೆ ವೇಳೆ ಕದ್ದ ಚಿನ್ನದ ಕುರಿತು ಶ್ರೀನಿವಾಸ್ ಬಾಯ್ಬಿಟ್ಟಿದ್ದಾನೆ
ಆರೋಪಿ ಶ್ರೀನಿವಾಸ್ ಕದ್ದ ಮಾಲುಗಳನ್ನು ತಮಿಳುನಾಡಿನ ಹೊಸೂರು ಬಳಿ ವಿಲೆವಾರಿ ಮಾಡಿದ್ದನು. ವಿಲೇವಾರಿ ಮಾಡಿದ್ದ ಚಿನ್ನ ಸೇರಿ ಒಟ್ಟು 105 ಗ್ರಾಂ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.