ETV Bharat / state

ಟ್ರಾನ್ಸಪೋರ್ಟ್ ಮಾಲೀಕರ ನಡುವೆ ರಸ್ತೆಯಲ್ಲೇ ಮಾರಾಮಾರಿ.. ವಿಡಿಯೋ

ಕಾಟನ್ ಪೇಟೆಯ ಜಾಲಿಮೊಹಲ್ಲಾ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಶೇಖ್ ಖಲೀಮುಲ್ಲಾ ಎಂಬುವನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆ ಆರೋಪದಡಿ ಅಫ್ರೋಜ್ ಹಾಗೂ ಇತರ ಮೂವರ ಮೇಲೆ ಕಾಟನ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

A street fight between transport owners in Bengaluru
ಟ್ರಾನ್ಸ್ ಪೋರ್ಟ್ ಮಾಲೀಕರ ನಡುವೆ ರಸ್ತೆಯಲ್ಲೇ ಮಾರಾಮಾರಿ
author img

By

Published : Jan 9, 2021, 9:02 AM IST

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಟ್ರಾನ್ಸಪೋರ್ಟ್ ಮಾಲೀಕರು ನಡು ರಸ್ತೆಯಲ್ಲೇ ಪರಸ್ಪರ ಮಾರಾಮಾರಿ ನಡೆಸಿದ್ದು ಈ ಸಂಬಂಧ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಟನ್ ಪೇಟೆಯ ಜಾಲಿಮೊಹಲ್ಲಾ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಶೇಖ್ ಖಲೀಮುಲ್ಲಾ ಎಂಬುವನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆ ಆರೋಪದಡಿ ಅಫ್ರೋಜ್ ಹಾಗೂ ಇತರ ಮೂವರ ಮೇಲೆ ಕಾಟನ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಖಲೀಮುಲ್ಲಾ ಈತ ಜನತಾ ಟ್ರಾನ್ಸಪೋರ್ಟ್​ ಮಾಲೀಕನಾಗಿದ್ದಾನೆ. ಪಕ್ಕದಲ್ಲೆ ಅಫ್ರೋಜ್ ಎಂಬಾತ ಮತ್ತೊಂದು ಟ್ರಾನ್ಸಪೋರ್ಟ್ ನಡೆಸುತ್ತಾನೆ. ಈ ಅಫ್ರೋಜ್ ಏಕಾಏಕಿ ಶಾಪ್ ಬಳಿ ಬಂದು, ‌ನಮ್ಮ ಗಿರಾಕಿಗಳನ್ನೆಲ್ಲ ನೀನು ತಡೆಯುತ್ತಿರುವೆ, ಹೀಗಾಗಿ ಟ್ರಾನ್ಸಪೋರ್ಟ್ ಖಾಲಿ ಮಾಡಿಕೊಂಡು ಹೋಗು ಅಂತ ಹಲ್ಲೆ ಮಾಡಿದ್ದಾರೆ ಎಂದು‌ ಖಲೀಮುಲ್ಲಾ ಆರೋಪಿಸಿದ್ದಾರೆ‌‌. ಘಟನೆ ಮಾರಾಮಾರಿ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಓದಿ : ದಂತ ಚಿಕಿತ್ಸೆಗಾಗಿ ಹೊಸ ಲೇಸರ್ ಸಾಧನ‌ ಆವಿಷ್ಕರಿಸಿದ ಹುಬ್ಬಳ್ಳಿ ವೈದ್ಯ.. ದೇಶದಲ್ಲೇ ಮೊದಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.