ಬೆಂಗಳೂರು: ಖಾಸಗಿ ಸೆಕ್ಯುರಿಟಿ ಏಜೆನ್ಸಿ ಮಾಲೀಕ ಸೆಕ್ಯುರಿಟಿಯೋರ್ವನ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿರುವ ಘಟನೆ ಹೆಚ್ಎಸ್ಆರ್ ಲೇಔಟ್ನಲ್ಲಿ ನಡೆದಿದ್ದು, ವಿಡಿಯೋ ವೈರಲ್ ಆದ ಹಿನ್ನೆಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಫೇಸ್ಬುಕ್ನಲ್ಲಿ ಜನರು ಮನವಿ ಮಾಡಿದ್ದಾರೆ.
ಮಹಮ್ಮದ್ ಸಲಿಂ ಖಾನ್ ಎಂಬಾತ ತನ್ನ ಭದ್ರತಾ ಸಿಬ್ಬಂದಿ ಮೇಲೆ ಮನ ಬಂದಂತೆ ಹಲ್ಲೆ ಮಾಡಿದ್ದಾನೆ. ಈ ಘಟನೆ ಅಕ್ಟೋಬರ್ 14ರ ಬೆಳಗ್ಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇನ್ನು ಈ ಕುರಿತು ಆಗ್ನೇಯ ವಿಭಾಗ ಡಿಸಿಪಿ ಇಶಾ ಪಂತ್ ಮಾತನಾಡಿ, ಈ ಘಟನೆ ಹೆಚ್ಎಸ್ಆರ್ ಲೇಔಟ್ನ ಬೆಂಗಳೂರು ಸೆಕ್ಯುರಿಟಿ ಫೋರ್ಸ್ ಎಂಬ ಏಜೆನ್ಸಿಯಲ್ಲಿ ನಡೆದಿದೆ. ಘಟನೆಯಲ್ಲಿ ಸಲೀಂ ಖಾನ್ ಹಾಗೂ ಐವರು ಸೇರಿ ಅಸ್ಸಾಂ ಮೂಲದ ಇಬ್ಬರು ಸೆಕ್ಯುರಿಟಿಗಳ ಮೇಲೆ ಹಲ್ಲೆ ಮಾಡಿದ್ದಾರೆ. ಘಟನೆ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ರು. ಆದ್ರೆ ಪ್ರಮುಖ ಆರೋಪಿ ಸಲೀಂ ಖಾನ್ ನಾಪತ್ತೆಯಾಗಿದ್ದಾನೆ. ಹೀಗಾಗಿ ಅವನಿಗಾಗಿ ಬಲೆ ಬೀಸಲಾಗಿದೆ. ಸದ್ಯ ಐಪಿಸಿ 307 ಕಾಯ್ದೆಯಡಿ ಹೆಚ್ಎಸ್ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯಾವ ಕಾರಣಕ್ಕೆ ಹಲ್ಲೆ ನಡೆಸಲಾಗಿದೆ ಅನ್ನೋದ್ರ ಬಗ್ಗೆ ತನಿಖೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.