ETV Bharat / state

ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಎ++ ನ್ಯಾಕ್ ಶ್ರೇಣಿಯ ಗರಿಮೆ: ಕುಲಪತಿ ಎಸ್ ಎಂ ಜಯಕರ್ - Chancellor SM Jayakar

ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳ ಪೈಕಿ ಎ ಶ್ರೇಣಿ ಪಡೆದ ಏಕೈಕ ವಿವಿ ಎಂಬ ಹೆಗ್ಗಳಿಕೆಗೆ ಬೆಂಗಳೂರು ವಿಶ್ವವಿದ್ಯಾಲಯ ಪಾತ್ರವಾಗಿದೆ.

A press conference was held at Jnanjyoti Hall
ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿ
author img

By

Published : Jun 12, 2023, 6:46 PM IST

Updated : Jun 13, 2023, 10:21 AM IST

ಬೆಂಗಳೂರು: ಎ++ ನ್ಯಾಕ್ ಶ್ರೇಣಿ ಪಡೆದು ಬೆಂಗಳೂರು ವಿಶ್ವವಿದ್ಯಾಲಯ ಐತಿಹಾಸಿಕ ಸಾಧನೆಗೈದಿದೆ. ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳ ಪೈಕಿ ಎ ಶ್ರೇಣಿ ಪಡೆದ ಏಕೈಕ ವಿವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಎಸ್ ಎಂ ಜಯಕರ್ ತಿಳಿಸಿದ್ದಾರೆ.

ಈ ಕುರಿತು ಸೋಮವಾರ ಜ್ಞಾನಜೋತಿ ಸಭಾಂಗಣದಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ವಿಶ್ವವಿದ್ಯಾಲಯವು 2018 ರಿಂದ 2022 ರವರೆಗಿನ ಮೌಲ್ಯಮಾಪನ ಅವಧಿಯ ಸ್ವಯಂ ಅಧ್ಯಯನ ವರದಿಯನ್ನು ರಾಷ್ಟ್ರೀಯ ಮೌಲ್ಯಮಾಪನ ಮಾನ್ಯತಾ ಮಂಡಳಿಗೆ ಸಲ್ಲಿಸಿತ್ತು. ದೇಶದ ಕೆಲವೇ ಕೆಲವು ಶೈಕ್ಷಣಿಕ ಸಂಸ್ಥೆಗಳು ನಾಲ್ಕನೇ ಆವೃತ್ತಿಗೆ ಮಂಡಳಿಯಿಂದ ಮಾನ್ಯತೆ ಪಡೆದಿವೆ. ಜೆಎನ್‌ಯು ನಂತರ ದೇಶದಲ್ಲೇ ಮೊದಲ ಬಾರಿಗೆ ಈ ಸಾಧನೆಗೈದ ಸರ್ಕಾರಿ ವಿವಿಯಾಗಿದೆ. ಸ್ವಾಯತ್ತತೆಯನ್ನು ಪಡೆಯುವ ಅವಕಾಶವನ್ನು ತನ್ನದಾಗಿಸಿಕೊಡಿದೆ ಎಂದು ಮಾಹಿತಿ ನೀಡಿದರು.

ನ್ಯಾಕ್ ನಿಗದಿಪಡಿಸಿದ 7 ಮಾನದಂಡಗಳಾದ ಪಠ್ಯಕ್ರಮ, ಭೋಧನೆ ಹಾಗೂ ಕಲಿಕೆ, ಮೌಲ್ಯಮಾಪನ, ಸಂಶೋಧನೆ, ಮೂಲಸೌಕರ್ಯ, ಕಲಿಕಾ ಸಂಪನ್ಮೂಲ, ವಿದ್ಯಾರ್ಥಿಗಳ ಪ್ರಗತಿ, ಆಡಳಿತ ಮತ್ತು ನಿರ್ವಹಣೆ, ಸಾಂಖ್ಯಿಕ ಮೌಲ್ಯಗಳು ಮತ್ತು ಉತ್ತಮ ಅಭ್ಯಾಸಗಳಲ್ಲಿ ವಿಶ್ವವಿದ್ಯಾಲಯ ಗರಿಷ್ಠ 4ರಲ್ಲಿ ಸರಾಸರಿ 3.75 ಅಂಕ ಗಳಿಸುವುದರ ಮೂಲಕ ಅತ್ಯುತ್ತಮ ಸಾಧನೆಗೈದಿದೆ ಎಂದು ಹೇಳಿದರು.

ಕಳೆದ ಐದು ವರ್ಷಗಳಲ್ಲಿ ಶೈಕ್ಷಣಿಕ ಮತ್ತು ಮೂಲ ಸೌಕರ್ಯಕ್ಕೆ ಸಂಬಂಧಿಸಿದ ವಿವಿಧ ಕಾರ್ಯಗಳ ಮೂಲಕ ವಿವಿ ಶೈಕ್ಷಣಿಕ ಉತ್ಕೃಷ್ಟತೆಯನ್ನು ಸಾಧಿಸಿದೆ. ಹಿಂದಿನ ಎರಡು ಆವೃತ್ತಿಗಳಲ್ಲಿ 3.16 ಸಿಜಿಪಿಎಯೊಂದಿಗೆ ಮಾನ್ಯತಾ ಮಂಡಳಿಯಿಂದ ಎ ಶ್ರೇಣಿಯನ್ನು ವಿವಿ ಪಡೆದಿತ್ತು. ಹಲವು ಆಯಾಮಗಳಲ್ಲಿ ತನ್ನ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಂಡಿದ್ದರಿಂದ ಪುಸ್ತುತ ಎ++ ಶ್ರೇಣಿಯನ್ನು ವಿಶ್ವವಿದ್ಯಾಲಯ ಗಳಿಸಲು ಸಾಧ್ಯವಾಗಿದೆ ಎಂದು ಮಾಹಿತಿ ನೀಡಿದರು.

ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆ, ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಹೊಸ ಕೋರ್ಸ್‌ಗಳ ಪರಿಚಯ, ಪ್ರತಿ ಅಧ್ಯಾಪಕರಿಂದ ಹತ್ತಕ್ಕೂ ಹೆಚ್ಚು ಸಂಶೋಧನಾ ಪ್ರಕಟಣೆಗಳು, ಹೆಚ್ಚಿನ ಸಂಶೋಧನಾ ನಿಧಿ, ಅನೇಕ ಸಲಹಾ ಯೋಜನೆಗಳು, ಅತ್ಯುತ್ತಮ ಉಲ್ಲೇಖ ಸೂಚ್ಯಂಕ, 53 ಪೇಟೆಂಟ್‌ಗಳು, ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ವಿಶೇಷ ಬೆಂಬಲ, ಜೈವಿಕ ವೈವಿಧ್ಯತೆಯ ಸಂರಕ್ಷಣೆ, ಇ ಆಡಳಿತ ಹಾಗೂ ಹಳೇ ವಿದ್ಯಾರ್ಥಿ ಸಂಘಗಳಿಂದ ಧನ ಸಹಾಯ ಇಂತಹ ಹಲವಾರು ಕಾರ್ಯಕ್ರಮಗಳ ಮೂಲಕ ವಿವಿ ಈ ಸಾಧನೆ ಮಾಡಿದೆ ಎಂದು ತಿಳಿಸಿದರು.

ವಿವಿ ಸಿಬ್ಬಂದಿ ಹಾಗೂ ಆಡಳಿತ ವರ್ಗದ ಸತತ ಪರಿಶ್ರಮದಿಂದ ಸಾಧನೆ ಸಾಧ್ಯವಾಗಿದೆ. ಎಲ್ಲಾ ಸರಕಾರಿ ವಿಶ್ವವಿದ್ಯಾಲಯಗಳ ಪೈಕಿ ಮಾದರಿ ವಿವಿಯಾಗಿ ಹೊರಹೊಮ್ಮಿದೆ. ಸಿಬ್ಬಂಧಿಯ ಕಠಿಣ ಪರಿಶ್ರಮ ಹಾಗೂ ಆಡಳಿತ ವರ್ಗದ ಬದ್ಧತೆಯ ಮೂಲಕ ಇನ್ನಷ್ಟು ಶೈಕ್ಷಣಿಕ ಸಾಧನೆ ಮಾಡಲು ನ್ಯಾಕ್ ಶ್ರೇಣಿ ಪ್ರೇರೇಪಣೆಯಾಗಿದೆ. ಈ ಐತಿಹಾಸಿಕ ಶೈಕ್ಷಣಿಕ ಸಾಧನೆ ವಿವಿಯ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಅಭಿಪ್ರಾಯಪಟ್ಟರು. ಮಾಧ್ಯಮಗೋಷ್ಟಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಡಾ. ಸಿ ಶ್ರೀನಿವಾಸ್ ಸೇರಿದಂತೆ ವಿವಿಯ ಹಲವು ಅಧಿಕಾರಿಗಳು ಹಾಜರಿದ್ದರು.

ಇದನ್ನೂ ಓದಿ: Tulsi Gowda: ಧಾರವಾಡದ ಕೃಷಿ ವಿವಿಯಿಂದ ಪದ್ಮಶ್ರೀ ಪುರಸ್ಕೃತ ತುಳಸಿ ಗೌಡಗೆ ಡಾಕ್ಟರೇಟ್ ಪದವಿ ಘೋಷಣೆ

Last Updated : Jun 13, 2023, 10:21 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.