ಬೆಂಗಳೂರು: ರಾಜ್ಯದಲ್ಲಿ ಹೊಸ ಸಂಚಾರ ನಿಯಮ ಪಾಲನೆ ಬೆನ್ನಲ್ಲೇ, ಸಿಲಿಕಾನ್ ಸಿಟಿ ವಾಹನ ಸವಾರರಿಗೆ ಹೊಸ ಟ್ರಾಪಿಕ್ ರೂಲ್ಸ್ ಬಿಸಿ ತಟ್ಟಲು ಶುರುವಾಗಿದೆ.
ದಕ್ಷಿಣ ವಲಯದ ಕುಮಾರಸ್ವಾಮಿ ಲೇಔಟ್ ಸಂಚಾರಿ ವಿಭಾಗದಲ್ಲಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ ಆಕಾಶ್ ಎಂಬ ವೆಸ್ಟ್ ಬೈಕ್ ಸವಾರ ಬರೊಬ್ಬರಿ 17 ಸಾವಿರ ರೂ ದಂಡವನ್ನು ಕೋರ್ಟ್ನಲ್ಲಿ ಕಟ್ಟಿದ್ದಾನೆ.
ಡ್ರಿಂಕ್ ಅಂಡ್ ಡ್ರೈವ್ಗೆ 10 ಸಾವಿರ, ಡಿಎಲ್ ಇಲ್ಲದಿದ್ದಕ್ಕೆ 5 ಸಾವಿರ ಹಾಗೂ ಹೆಲ್ಮಟ್ ಹಾಕದಿದ್ದಕ್ಕೆ 2 ಸಾವಿರ ರೂ ಸೇರಿ ಬರೋಬ್ಬರಿ 17 ಸಾವಿರ ರೂಪಾಯಿ ದಂಡ ಸಂಚಾರಿ ಪೊಲೀಸರು ವಿಧಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸಂಚಾರಿ ಆಯುಕ್ತ ಬಿ.ಆರ್. ರವಿಕಾಂತೇ ಗೌಡ, ಸಾರ್ವಜನಿಕರು ರೂಲ್ಸ್ಗಳನ್ನ ಬ್ರೇಕ್ ಮಾಡುತ್ತಿರುತ್ತಾರೆ. ಫೈನ್ ಹಾಕೋದು ಮತ್ತೆ ಅದೇ ತಪ್ಪನ್ನ ಮಾಡದಿರಲಿ ಅಂತ. ಇದರಿಂದ ಇಲಾಖೆಗೆ ಲಾಭ ಆಗುತ್ತೆ ಅನ್ನೋದಲ್ಲ, ಜನ ದುಪ್ಪಟ್ಟು ಫೈನ್ ಕಟ್ಟೋದರ ಬಗ್ಗೆ ಎಚ್ಚರ ವಹಿಸಬೇಕು. ಸಂಚಾರಿ ನಿಯಮವನ್ನ ಚಾಚೂ ತಪ್ಪದೇ ಪಾಲಿಸಬೇಕು ಎಂದು ಅವರು ತಿಳಿಸಿದರು.