ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿರುವ ಘಟನೆ ನಗರದ ತಲಘಟ್ಟಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಮಹದೇವ್ ಪ್ರಸಾದ್ (70) ಕೊಲೆಯಾದ ವ್ಯಕ್ತಿ. ತಲಘಟ್ಟಪುರ ಬಳಿಯ ಗುಬ್ಬಲಾಳ ಬಳಿ ಮಹದೇವ್ ಪ್ರಸಾದ್ನ್ನು ಹತ್ಯೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ. ಮಹದೇವ್ ಪ್ರಸಾದ್ ಮತ್ತು ಸಂಬಂಧಿಕರ ನಡುವೆ ಆಸ್ತಿ ವಿಚಾರಕ್ಕಾಗಿ ಆಗಾಗ ಜಗಳ ನಡೆಯುತಿತ್ತು ಎನ್ನಲಾಗಿದ್ದು. ಈ ವಿಚಾರಕ್ಕೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ತಲಘಟ್ಟಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.