ETV Bharat / state

ಮದುವೆಯಾದ್ರೂ ಇನಿಯನ ತೆಕ್ಕೆಯಲ್ಲಿ ಮಹಿಳೆ: ಬೆಂಗಳೂರಲ್ಲಿ ಬಿತ್ತು ಹೆಣ.. ಠಾಣೆಗೆ ಶವ ತಂದು ಆರೋಪಿಗಳು ಶರಣು

ಮಹಿಳೆ ತನ್ನ ಗಂಡನ ಜೊತೆ ಜಗಳ ಮಾಡಿಕೊಂಡು ಒಬ್ಬಳೇ ನಗರದಲ್ಲಿ ಜೀವನ ಮಾಡಿಕೊಂಡಿದ್ದಳು. ಈ ವೇಳೆ ಆಕೆಯ ಹಳೆಯ ಬಾಯ್​ಫ್ರೆಂಡ್​ ಆಕೆಗೆ ಜೀವನ ಕೊಡಿಸುವುದಾಗಿ ಕರೆದುಕೊಂಡು ಹೋಗುವಾಗ ಹತ್ಯೆಯಾಗಿದ್ದಾನೆ. ಆತನನ್ನು ಕೊಲೆ ಮಾಡಿರುವ ಆರೋಪಿಗಳು ಹೆಣವನ್ನು ಆಟೋದಲ್ಲಿ ಒಯ್ದು ಪೊಲೀಸರಿಗೆ ಶರಣಾಗಿದ್ದಾರೆ. ಈ ಬೆಚ್ಚಿಬೀಳಿಸುವ ಘಟನೆ ಬೆಂಗಳೂರಲ್ಲಿ ನಡೆದಿದೆ.

author img

By

Published : Oct 17, 2021, 12:55 PM IST

Updated : Oct 17, 2021, 1:24 PM IST

Killed a man over illegal relationship in bangalore
ಠಾಣೆಗೆ ಶವ ತಂದು ಶರಣಾದ ಆರೋಪಿಗಳು

ಬೆಂಗಳೂರು: ಮದುವೆಯಾಗಿದ್ದ ತನ್ನ ಅಕ್ಕನ ಜೊತೆ ಸಂಬಂಧ ಬೆಳೆಸಿದ್ದವನನ್ನು ಆಕೆಯ ತಮ್ಮ ಹಾಗೂ ಆತನ ಸಹಚರರು ಕೊಲೆ ಮಾಡಿದ್ದಾರೆ. ಹತ್ಯೆ ಬಳಿಕ ಆಟೋದಲ್ಲಿ ಶವ ಇರಿಸಿಕೊಂಡು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ. ಈ ಪ್ರಕರಣ ನಗರದ ಜನತೆಯನ್ನು ಬೆಚ್ಚಿಬೀಳಿಸಿದೆ.

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಅನ್ನಪೂರ್ಣೇಶ್ವರಿ ನಗರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.‌ ಮಾಲೂರು ಮೂಲದ ಮುನಿರಾಜು ಪ್ರಮುಖ ಬಂಧಿತ ಆರೋಪಿಯಾಗಿದ್ದು, ಈತನ ಸಹಚರರಾದ ಮಾರುತಿ, ನಾಗೇಶ್ ಹಾಗೂ ಪ್ರಶಾಂತ್ ಅವರನ್ನು ಬಂಧಿಸಿ ಹೆಚ್ಚಿನ ವಿಚಾರಣೆ ಮಾಡಲಾಗುತ್ತಿದೆ.

ಏನಿದು ಘಟನೆ?

ಭಾಸ್ಕರ್ ಕೊಲೆಯಾದ ಯುವಕ. ಈ ಹತ್ಯೆಗೆ ಕಾರಣಳಾದ ಮಹಿಳೆಯು ವಿವಾಹಿತೆಯಾಗಿದ್ದು, ಮೂಲತಃ ಮಾಲೂರಿನವಳು. ಅನ್ನಪೂರ್ಣೇಶ್ವರಿ ನಗರದ ಚಂದ್ರಶೇಖರ್ ಬಡಾವಣೆಯಲ್ಲಿ ವಾಸವಾಗಿದ್ದಳು. ಜೀವನಕ್ಕಾಗಿ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದಳು. ಈಕೆಯ ಗಂಡ ಊರಿನಲ್ಲೇ ನೆಲೆಸಿದ್ದ.

ಗಂಡನನ್ನು ಬಿಟ್ಟು ಬಂದಿದ್ದ ಮಹಿಳೆ:

ಈಕೆ ಒಬ್ಬಳೇ ನಗರದಲ್ಲಿ ನೆಲೆಸಿದ್ದು, ಈ ಹಿಂದೆ ಅಂದರೆ ಎರಡು ವರ್ಷಗಳ ಹಿಂದೆ ತಮಿಳುನಾಡು ಮೂಲದ ಭಾಸ್ಕರ್​ನ ಪರಿಚಯವಾಗಿತ್ತು. ಕಾಲಕ್ರಮೇಣ ಸ್ನೇಹ ಪ್ರೀತಿಗೆ ತಿರುಗಿತ್ತು. ಪ್ರೀತಿಯ ವಿಷಯ ಮಹಿಳೆ ಮನೆಯಲ್ಲಿ ಗೊತ್ತಾಗಿದ್ದರಿಂದ ಗಂಡನ ಜೊತೆ ಜಗಳವಾಗಿತ್ತು‌‌‌. ಕಳೆದ 15 ದಿನಗಳ ಹಿಂದೆ ಮಾಲೂರಿನಿಂದ ನಗರಕ್ಕೆ ಬಂದು ಮನೆ ಮಾಡಿಕೊಂಡಿದ್ದಳು‌.

ಶನಿವಾರ ಸಂಜೆ ಮಹಿಳೆಯ ಮನೆಗೆ ಬಂದಿದ್ದ ಭಾಸ್ಕರ್, ಬೇರೆ ಮನೆ ಮಾಡಿಕೊಡುತ್ತೇನೆ ಎಂದು ಹೇಳಿ ಆಕೆಯನ್ನು ಕರೆದೊಯ್ಯಲು ಮುಂದಾಗಿದ್ದ. ಈ ವೇಳೆ ಆಕೆಯ ಹಿರಿಮಗ ಭಾಸ್ಕರ್ ನೊಂದಿಗೆ ಬರಲು ನಿರಾಕರಿಸಿ ಸೋದರಮಾವ ಆಗಿರುವ ಆರೋಪಿ ಮುನಿರಾಜುಗೆ ಕರೆ ಮಾಡಿ ಎಲ್ಲಾ ಮಾಹಿತಿ ನೀಡಿದ್ದ.

ವ್ಯಕ್ತಿಯನ್ನು ಕೊಂದ ಪೊಲೀಸರಿಗೆ ಶರಣಾದ ಆರೋಪಿಗಳು

ಆಟೋದಲ್ಲಿ ಹಿಂಬಾಲಿಸಿ ಹಲ್ಲೆ:

ಆಟೋವೊಂದರಲ್ಲಿ ಭಾಸ್ಕರ್ ಹಾಗೂ ತಾಯಿ ಹೋಗುತ್ತಿರುವುದಾಗಿ ಮಾಹಿತಿ ನೀಡಿದ ಹಿನ್ನೆಲೆ, ಕೂಡಲೇ ಆರೋಪಿ ತನ್ನ ಆಟೋದೊಂದಿಗೆ ಭಾಸ್ಕರ್​​ನನ್ನ ಹಿಂಬಾಲಿಸಿದ್ದಾನೆ. ಸುಂಕದಕಟ್ಟೆ ಬಳಿ ಆಟೋ ಅಡ್ಡಹಾಕಿ ಅಕ್ಕನನ್ನು ಮನೆಗೆ ಕರೆತಂದು ಬಿಟ್ಟಿದ್ದಾನೆ.

ಎಗ್​ರೈಸ್​ ಕೊಡಿಸಿ ಮತ್ತೇ ಹಲ್ಲೆ:

ನಂತರ ತನ್ನ ಸಹಚರರನ್ನು ಕರೆದುಕೊಂಡು ಭಾಸ್ಕರ್​ನನ್ನು ಆಟೋದಲ್ಲಿ ಕೂರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ. ಈ ವೇಳೆ ಭಾಸ್ಕರ್ ಹಸಿವು ಊಟ ಬೇಕು ಎಂದು ಬೇಡಿಕೊಂಡಿದ್ದಾನೆ. ಆಗ ಎಗ್ ರೈಸ್ ಕೊಡಿಸಿ ನಂತರ ಮತ್ತೇ ಆತನ ಹಲ್ಲೆ ಮಾಡಿದ್ದಾರೆ.‌

ಈ ವೇಳೆ ಭಾಸ್ಕರ್​ ಮೂರ್ಚೆ ಹೋಗಿದ್ದಾನೆ ಎಂದು ಆರೋಪಿಗಳು ಶಂಕಿಸಿದ್ದಾರೆ. ಆದರೆ ಕೆಲ ಹೊತ್ತಿನ ಬಳಿಕ ಮೃತಪಟ್ಟಿರುವುದು ಗೊತ್ತಾಗುತ್ತಿದ್ದಂತೆ ತನ್ನ ತಾಯಿಗೆ ನಡೆದಿರುವ ವಿಷಯವನ್ನು ಮುನಿರಾಜು ತಿಳಿಸಿದ್ದಾನೆ.

ಬಳಿಕ ಆರೋಪಿಗಳು ಶವವನ್ನು ಆಟೊದಲ್ಲೇ ಇರಿಸಿಕೊಂಡು ಠಾಣೆಗೆ ಬಂದು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ‌ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.

Last Updated : Oct 17, 2021, 1:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.