ಬೆಂಗಳೂರು : ಬಸವೇಶ್ವರನಗರದ ಕಮಲಾನಗರದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸ್ರು ಬಂಧಿಸಿದ್ದಾರೆ.
ಶಿವು, ಈಶ್ವರಿ, ಕರಿಯಾ ಬಂಧಿತ ಆರೋಪಿಗಳು.
ಈ ಆರೋಪಿಗಳು ನಿನ್ನೆ ನಿತೇಶ್ ಎಂಬಾತನನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದರು. ಆರೊಪಿ ಶಿವು ಸಹೋದರಿಯಾಗಿದ್ದ ಈಶ್ವರಿಯನ್ನು ಮೃತ ನಿತೇಶ್ ರೇಗಿಸಿದ್ದನಂತೆ. ಸಹೋದರಿಯನ್ನ ರೇಗಿಸಿದ್ದ ಅನ್ನೋ ಕಾರಣಕ್ಕೆ ಕೋಪಗೊಂಡ ಆರೋಪಿ ಶಿವು ತನ್ನ ಸ್ನೇಹಿತನಾದ ಕರಿಯನ ಜೊತೆ ಸೇರಿ ಕಮಲಾನಗರದ ಶಂಕರ್ನಾಗ್ ಬಸ್ ಸ್ಟಾಪ್ ಬಳಿ ಇರುವ ಶೌಚಾಲಯದ ಬಳಿ ಗಲಾಟೆ ಮಾಡಿದ್ದಾರೆ.
ಗಲಾಟೆ ತೀವ್ರಸ್ವರೂಪ ಪಡ್ಕೊಳ್ತಿದ್ದಂತೆ ಶಿವು ಹಾಗು ಕರಿಯಾ ಸೇರಿ ನಿತೇಶ್ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ತೀವ್ರ ರಕ್ತಸ್ರಾವದಿಂದ ನಿತೇಶ್ ಸಾವನ್ನಪ್ಪಿದ್ದು, ಆರೋಪಿಗಳನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.