ಬೆಂಗಳೂರು: ಮೆಜೆಸ್ಟಿಕ್ ಮೆಟ್ರೊ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದ ಅನುಮಾನಾಸ್ಪದ ವ್ಯಕ್ತಿಯನ್ನು ಉಪ್ಪಾರಪೇಟೆ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಆತ ಹಲಸೂರಿನ ಪೊಲೀಸ್ ಠಾಣಾ ವ್ಯಾಪ್ತಿಯ ಮಸೀದಿಯೊಂದರಲ್ಲಿ ಮೌಲ್ವಿಯಾಗಿದ್ದು, ಆರ್.ಟಿ.ನಗರ ನಿವಾಸಿಯಾಗಿದ್ದಾರೆ. ಮೌಲ್ವಿಯನ್ನ ವಶಕ್ಕೆ ಪಡೆದಿದ್ದ ಉಪ್ಪಾರಪೇಟೆ ಪೊಲೀಸರು ವಿಚಾರಣೆಗೊಳಪಡಿಸಿದ್ದರು.
ಮೇ 6 ರಂದು ಮೆಟ್ರೋ ನಿಲ್ದಾಣದಲ್ಲಿ ಅನುಮಾನಸ್ಪದವಾಗಿ ವರ್ತನೆ ತೋರಿದ್ದು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿತ್ತು. ಈ ಪೈಕಿ ಓರ್ವ ಗಾಂಧಿನಗರದಲ್ಲಿ ವಾಚ್ ಅಂಗಡಿ ಇಟ್ಟುಕೊಂಡಿದ್ದ ರಿಯಾಜ್ ಅಹಮದ್ ಎಂದು ತಿಳಿದು ಬಂದಿತ್ತು. ಬಳಿಕ ಮತ್ತೋರ್ವ ವ್ಯಕ್ತಿಗಾಗಿ ವಿಶೇಷ ತಂಡ ರಚಿಸಿ ಪೊಲೀಸರು ಹುಡುಕಾಟ ನಡೆಸಿದ್ದರು. ಇದೀಗ ಮೌಲ್ವಿ ಉಪ್ಪಾರಪೇಟೆ ಪೊಲೀಸರ ವಶದಲ್ಲಿದ್ದು, ಸದ್ಯ ಎಲ್ಲ ಆತಂಕಗಳಿಗೂ ತೆರೆಬಿದ್ದಿದೆ.