ಬೆಂಗಳೂರು : ಬಿಬಿಎಂಪಿ ಕೋವಿಡ್-19 ಹತೋಟಿಗೆ ತರಲು ನಾನಾ ಪ್ರಯತ್ನಗಳನ್ನು ನಡೆಸ್ತಿದೆ. ಇದರ ಭಾಗವಾಗಿ ಕೊರೊನಾ ಶಂಕಿತರನ್ನು ಪಾಲಿಕೆ ವ್ಯಾಪ್ತಿಯ ಹೋಟೆಲ್ಗಳಲ್ಲಿರಿಸಲು ಬಿಬಿಎಂಪಿ ತೀರ್ಮಾನಿಸಿದೆ.
ಕೆಮ್ಮು, ನೆಗಡಿ ಲಕ್ಷಣ ಕಂಡು ಬಂದ ವ್ಯಕ್ತಿಗಳಿಗೆ ಚಿಕಿತ್ಸೆ ನೀಡುವ ಮೊದಲು ಗಂಟಲು ದ್ರವ, ರಕ್ತ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿ ಅವರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ. ಈ ವರದಿ ಬರುವವರೆಗೂ ಶಂಕಿತರನ್ನು ಮನೆಯಲ್ಲಿರಿಸುವ ಬದಲು ಪಾಲಿಕೆ ವ್ಯಾಪ್ತಿಯ ಹೋಟೆಲ್ಗಳಲ್ಲಿರಿಸುವುದು ಸೂಕ್ತ ಎಂಬ ತೀರ್ಮಾನಕ್ಕೆ ಬಿಬಿಎಂಪಿ ಬಂದಿದೆ.
ಕೋರಮಂಗಲ, ಬಿಟಿಎಂಲೇಔಟ್, ಹಲಸೂರು ಸೇರಿ ಒಟ್ಟು 17 ಹೋಟೆಲ್‌ಗಳನ್ನ ಗುರುತಿಸಲಾಗಿದೆ. ಗರಿಷ್ಠ ಎರಡು ದಿನ ಹೋಟೆಲ್ನಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಹಾಗೂ ಊಟ-ತಿಂಡಿಯ ವ್ಯವಸ್ಥೆಯನ್ನೂ ಪಾಲಿಕೆ ನೋಡಿಕೊಳ್ಳಲಿದೆ.