ETV Bharat / state

ರೌಡಿಗಳ ಒಕ್ಕೂಟ ಏರ್ಪಡಿಸುತ್ತಿರುವ ಸರ್ಕಾರ: ವಿಎಸ್ ಉಗ್ರಪ್ಪ - ಕೆಪಿಸಿಸಿ ಕಚೇರಿ

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಉಪಾಧ್ಯಕ್ಷ ವಿ ಎಸ್ ಉಗ್ರಪ್ಪ ರೌಡಿಗಳ ಒಕ್ಕೂಟವನ್ನು ಏರ್ಪಡಿಸುವ ರೀತಿಯಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ. ಬೆಂಗಳೂರು ರೇಪ್ ಸಿಟಿ ಆಗುತ್ತಿದೆ ಎಂದು ಆರೋಪಿಸಿದರು.

KPCC Vice President VS Ugrappa
ಕೆಪಿಸಿಸಿ ಉಪಾಧ್ಯಕ್ಷ ವಿ ಎಸ್ ಉಗ್ರಪ್ಪ
author img

By

Published : Dec 2, 2022, 9:04 PM IST

ಬೆಂಗಳೂರು: ರೌಡಿಗಳ ಒಕ್ಕೂಟವನ್ನು ಏರ್ಪಡಿಸುವ ರೀತಿಯಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ. ಬೆಂಗಳೂರು ರೇಪ್ ಸಿಟಿ ಆಗುತ್ತಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ ಆರೋಪಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಇತ್ತೀಚಿನ ಬೆಳವಣಿಗೆಗಳಿಂದ ಬಿಜೆಪಿ ಅವರಿಗೆ ತಮ್ಮ ಶಕ್ತಿಯಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂಬುದು ಅರಿವಾಗುತ್ತಿದೆ. ಹೀಗಾಗಿ ವಾಮ ಮಾರ್ಗಗಳ ಹಿಡಿದಿದೆ. ಬೆಂಗಳೂರಿನಲ್ಲಿ ಶೇಕಡಾ 25ರಷ್ಟು ಮಂದಿ ಕೊಳಗೇರಿ ಪ್ರದೇಶದ ಮತದಾರರಿದ್ದು, ಇನ್ನು ಆರ್ಥಿಕವಾಗಿ ಹಿಂದುಳಿದ ವರ್ಗಗಳು ಸೇರಿ ಶೇಕಡಾ 35ರಷ್ಟು ಮತಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದರು.

ನಂತರ ಮಾತನಾಡಿ ಅವರು ಇದಕ್ಕಾಗಿ ಬಿಜೆಪಿ ಉಪದೇಶಗಳನ್ನು ತಯಾರು ಮಾಡುತ್ತಿದ್ದು, ಇದಕ್ಕೆ ಆಧಾರವಾಗಿ ಬೆಂಗಳೂರಿನಲ್ಲಿರುವ ಸಮಾಜಘಾತಕ ಶಕ್ತಿಗಳ ಗುಂಪನ್ನು ಕಟ್ಟುತ್ತಿದೆ. ಸೋಮಣ್ಣ ಅವರು ವಸತಿ ಸಚಿವರಾಗಿದ್ದು, ಬೆಂಗಳೂರಿನಲ್ಲಿ ಎಲ್ಲೆಲ್ಲಿ ಕೊಡಗೇರಿ ಪ್ರದೇಶಗಳಿವೆ ಎಂದು ಮ್ಯಾಪಿಂಗ್ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಸರ್ಕಾರ ಉತ್ತಮ ಆಡಳಿತ ನೀಡಲು ವೈಫಲ್ಯವಾಗಿದ್ದು, ಅಭಿವೃದ್ಧಿಯಲ್ಲಿ ವಿಫಲರಾಗಿದ್ದಾರೆ. ಈಗ ಮತದಾರರ ಪಟ್ಟಿ ತಿರುಚುವಲ್ಲಿಯೂ ವಿಫಲರಾಗಿದ್ದು. ಈಗ ಈ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಗುಜರಾತ್ ಹಾಗೂ ಮಹಾರಾಷ್ಟ್ರದ ಕಡೆ ಈ ವಿಚಾರದ ಬಗ್ಗೆ ಗಮನಹರಿಸಿದರೆ, ಬಿಜೆಪಿ ಹಾಗೂ ಆರ್​ಎಸ್ಎಸ್​ನ ಸಂಸ್ಕೃತಿ ಅರಿವಾಗುತ್ತದೆ.

ಅದೇ ಸಂಸ್ಕೃತಿಯನ್ನು ಕರ್ನಾಟಕದಲ್ಲಿ ಆರಂಭಿಸಲು ಮುಂದಾಗಿದ್ದಾರೆ. ರಾಜ್ಯದ ಜನ ಬಹಳ ಪ್ರಬುದ್ಧರಾಗಿದ್ದು ಬದ್ಧತೆ ಇರುವಂತ ವಿಚಾರವಂತರಾಗಿದ್ದಾರೆ. ಬಿಜೆಪಿಯ ರೌಡಿಸಂ ಸಂಸ್ಕೃತಿಗೆ ಜನ ಮುಂದಿನ ದಿನಗಳಲ್ಲಿ ಪಾಠ ಕಲಿಸಲಿದ್ದಾರೆ ಎಂದು ನಂಬಿದ್ದೇನೆ ಎಂದು ತಿಳಿಸಿದರು.

ನಿಮ್ಮ ಪಕ್ಷದಲ್ಲಿ ರೌಡಿಗಳು ಇಲ್ಲವೇ ಎಂಬ ಪ್ರಶ್ನೆಗೆ, ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ನಮ್ಮ ಪಕ್ಷದಲ್ಲಿ ರೌಡಿ ಹಿನ್ನೆಲೆ ಇರುವವರು ಇದ್ದರೆ ಅವರ ಪಟ್ಟಿ ಮಾಡಿ ಅವರ ವಿರುದ್ಧ ಕ್ರಮ ಕೈಗೊಳ್ಳಲಿ ನಾವು ಇದಕ್ಕೆ ಆಕ್ಷೇಪ ವ್ಯಕ್ತಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ವಿದ್ಯಾರ್ಥಿ ವೇತನವನ್ನು ಮೋದಿಯವರು ಸರ್ಕಾರ ನಿಲ್ಲಿಸಿದೆ: ಸಮಾಜದ ವ್ಯವಸ್ಥೆಯ ಕಟ್ಟ ಕಡೆಯ ಬಡವರು ಅದರಲ್ಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದ ಮಕ್ಕಳ ಭವಿಷ್ಯದ ಮೇಲೆ ಚಪ್ಪಡಿ ಕಲ್ಲು ಎಳೆಯುವಂತಹ ಪ್ರಯತ್ನ ನರೇಂದ್ರ ಮೋದಿಯವ ರಿಂದ ನಡೆದಿದೆ.

ಆದರೆ, ಇಲ್ಲಿ ಆಘಾತಕಾರಿ ವಿಚಾರ ಏನೆಂದರೆ, ಒಂದರಿಂದ ಎಂಟನೇ ತರಗತಿಯವರೆಗಿನ ಬಡ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನವನ್ನು ಮೋದಿಯವರು ಸರ್ಕಾರ ನಿಲ್ಲಿಸಿದೆ. ಮೋದಿ ಅವರ ಸರ್ಕಾರ ಮಕ್ಕಳ ಭವಿಷ್ಯದ ವಿಚಾರದಲ್ಲಿ ಇಂತಹ ಕೆಟ್ಟ ನಿರ್ಧಾರ ತೆಗೆದುಕೊಂಡಿದೆ. ಇದೇ ಕಾರಣಕ್ಕೆ ನಾನು ಮೋದಿ ಅವರನ್ನು ಹಾಗಾಗ ಆಧುನಿಕ ಭಸ್ಮಾಸುರರು ಎಂದು ಕರೆಯುತ್ತಿರುತ್ತೇನೆ ಎಂದು ಟೀಕಿಸಿದರು.

ವಿಧಾನಸೌಧಕ್ಕೆ ಬೀಗ ಹಾಕಿದ ರೀತಿಯಲ್ಲಿ ಇರುತ್ತದೆ: ವಿಧಾನಸೌಧದಲ್ಲಿ ಮುಖ್ಯಮಂತ್ರಿ ಹಾಗೂ ಯಾವುದೇ ಸಚಿವರು ಇರುವುದಿಲ್ಲ. ಹೀಗಾಗಿ ವಿಧಾನಸೌಧಕ್ಕೆ ಬೀಗ ಹಾಕಿದ ರೀತಿಯಲ್ಲಿ ಇರುತ್ತದೆ. ಮತದಾರರ ಪಟ್ಟಿ ಪರಿಷ್ಕರಣೆ ಹೆಸರಲ್ಲಿ ಕಾಂಗ್ರೆಸ್ ಪರವಾಗಿರುವ ಪರಿಶಿಷ್ಟರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರ ಮತಗಳನ್ನು ಕೈಬಿಡಲಾಗಿದೆ.

ಅವರ ಪರವಾಗಿರುವ ಮತದಾರ ಹೆಸರು ಸೇರ್ಪಡೆ ಮಾಡಲಾಗುತ್ತಿದೆ. ಈ ಬಗ್ಗೆ ಆರಂಭದಲ್ಲಿ ಚುನಾವಣಾ ಆಯೋಗಕ್ಕೆ ದೂರು ನೀಡಿದಾಗ ಏನೂ ನಡೆದಿಲ್ಲ ಎಂದು ಸರ್ಕಾರ ಹೇಳಿತ್ತು. ಆದರೆ ಚುನಾವಣಾ ಆಯೋಗ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿದೆ ಎಂದರು.

ಇದನ್ನೂ ಓದಿ:ಕಾಂಗ್ರೆಸ್ ರೌಡಿಗಳನ್ನು ತಯಾರು ಮಾಡುವ ಫ್ಯಾಕ್ಟರಿ ಇದ್ದಂತೆ: ಸಚಿವ ಅಶೋಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.