ETV Bharat / state

ಕೃಷಿ ಮೇಳದಲ್ಲಿ ಎಲ್ಲರ ಗಮನಸೆಳೆದ ಸ್ವದೇಶಿ ನಿರ್ಮಿತ ರೈತ ಸ್ನೇಹಿ 'ಭಜರಂಗಿ' ಯಂತ್ರ

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಡಾಕ್ಟರ್ ಸಿ ನಾಗರಾಜ ಭಜರಂಗಿ ಯಂತ್ರವನ್ನು ಅಂತರ ಬೇಸಾಯ ಪದ್ಧತಿ ಅಳವಡಿಸಿಕೊಂಡು ಸಂಶೋಧಿಸಿದ್ದಾರೆ. ಇದು ರೈತರಿಗೆ ಹಲವಾರು ಉಪಯೋಗಗಳನ್ನು ಕೊಡ ಮಾಡುತ್ತದೆ.

Agricultural Fair by Agricultural University
ಭಜರಂಗಿ ಯಂತ್ರ
author img

By

Published : Nov 4, 2022, 7:51 PM IST

ಬೆಂಗಳೂರು: ನಗರದಲ್ಲಿ ಗುರುವಾರದಿಂದ ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಕೃಷಿ ಮೇಳ ನಡೆಯುತ್ತಿದೆ. ವಿಶೇಷವಾಗಿ ಭಾರತದಲ್ಲಿ ಪ್ರಪ್ರಥಮವಾಗಿ ಅವಿಷ್ಕಾರವಾಗಿರುವಂತಹ 12 ಕೆಲಸ ಕಾರ್ಯಗಳನ್ನು ನಿರ್ವಹಿಸುವ ಮಲ್ಟಿ ಪರ್ಪಸ್ ಪವರ್ ಇಂಟರ್ ಕಲ್ಟಿವೇಟರ್ 'ಭಜರಂಗಿ' ಯಂತ್ರ, ಕೃಷಿಕರ, ಸಾರ್ವಜನಿಕರ, ವಿದ್ಯಾರ್ಥಿಗಳ ಗಮನ ಸೆಳೆಯುತ್ತಿದೆ.

ಬೇಸಾಯ ಕ್ರಮದಲ್ಲಿ ರೈತರಿಗೆ ಎದುರಾಗುವ ಹಲವಾರು ತೊಂದರೆಗಳನ್ನು ಅಧ್ಯಯನ ನಡೆಸಿ, ರೈತರಿಗೆ ಎದುರಾಗುವ ಹಲವಾರು ತೊಂದರೆಗಳನ್ನು ಅಭ್ಯಸಿಸಿ ರೈತರು ಅಂತರ ಬೇಸಾಯವನ್ನು ಸುಲಭ ರೀತಿಯಲ್ಲಿ ಮಾಡಿಕೊಳ್ಳಲು ಅನುಕೂಲವಾಗುವಂತೆ ಮಲ್ಟಿ ಪರ್ಪಸ್ ಪವರ್ ಇಂಟರ್ ಕಲ್ಟಿವೇಟರ್ ಭಜರಂಗಿ ಯಂತ್ರವನ್ನು ಅಭಿವೃದ್ದಿ ಪಡಿಸಲಾಗಿದೆ.

ಭಜರಂಗಿ ಯಂತ್ರ ಸಂಶೋಧನೆ: ಈ ಯಂತ್ರದ ಸಹಾಯದಿಂದ ಮುಖ್ಯವಾಗಿ 12 ವಿವಿಧ ರೀತಿಯ ಕೃಷಿ ಕೆಲಸಗಳಾದ ಉಳಿಮೆ, ಕಳೆ ತೆಗೆಯುವುದು, ರಿಡ್ಜ್ ರ್, ಲೆವೆಲಿಂಗ್, ಕೂರ್ಗೆ, ಬೆಡ್ ಫಾರ್ಮೇಷನ್, ಸ್ಪ್ರೆಯರ್, ವಾಟರ್ ಲಿಫ್ಟಿಂಗ್, ಟ್ರಾಲಿ, ಚಾಪ್ ಕಟ್ಟರ್, ಮಿಲ್ಕಿಂಗ್ ಮಷಿನ್ ಮಾಡಬಹುದಾಗಿದೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಡಾಕ್ಟರ್ ಸಿ ನಾಗರಾಜ ಭಜರಂಗಿ ಯಂತ್ರವನ್ನು ಅಂತರ ಬೇಸಾಯ ಪದ್ಧತಿ ಅಳವಡಿಸಿಕೊಂಡು ಸಂಶೋಧಿಸಿದ್ದಾರೆ. ಇದು ರೈತರಿಗೆ ಹಲವಾರು ಉಪಯೋಗಗಳನ್ನು ಕೊಡ ಮಾಡುತ್ತದೆ ಎಂದು ಮಾರುತಿ ಉದ್ಯೋಗ್ ವ್ಯವಸ್ಥಾಪಕ ಅರುಣ್ ತಿಳಿಸಿದರು.

ಸ್ವದೇಶಿ ನಿರ್ಮಿತ ರೈತ ಸ್ನೇಹಿ 'ಭಜರಂಗಿ' ಯಂತ್ರ

ಮುಖ್ಯವಾಗಿ ಟ್ರಾಕ್ಟರ್, ಟಿಲ್ಲರ್ ಹಾಗೂ ಎತ್ತುಗಳು ಉಪಯೋಗವನ್ನು ಕಡಿಮೆ ಮಾಡಿ ಅತ್ಯಂತ ಕಡಿಮೆ ತೂಕವಿರುವ ಯತ್ರದಿಂದ ಉಳುಮೆಯಲ್ಲಿ ಅತ್ಯಲ್ಪ ಘರ್ಷಣೆಯಿಂದ ಶಿಲ್ಟ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಪೋಷಕಾಂಶ ಉಳ್ಳ ಹೆಚ್ಚಿನ ಮಳೆ ನೀರು ಭೂಮಿಯಲ್ಲಿ ಇಂಗುವುದರಿಂದ ಭೂಮಿಯ ಫಲವತ್ತತೆಯು ಹೆಚ್ಚು ಮಾಡುತ್ತದೆ ಎಂದು ಹೇಳಿದರು.

ಭೂಮಿ ಗಟ್ಟಿಯಾಗುವುದನ್ನ ತಡೆಯಬಹುದಾಗಿದೆ: ಕೃಷಿ ಕಾರ್ಮಿಕರು ಮತ್ತು ಎತ್ತುಗಳನ್ನು ಅವಲಂಬಿಸದೇ ಹೆಚ್ಚಿನ ಭೂಮಿಯನ್ನು ಬೇಸಾಯಕ್ಕಾಗಿ ಉಪಯೋಗಿಸಿ ತಕ್ಕ ಸಮಯದಲ್ಲಿ ಕಳೆಯನ್ನು ನಾಶಪಡಿಸುವುದು. ಈ ಯಂತ್ರದ ಸಹಾಯದಿಂದ ಸಾವಯವ ಉಳಿಮೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಮಾಡಬಹುದಾಗಿದೆ. ಕೂಲಿ ಕೆಲಸಗಾರರ ತುಳಿತದಿಂದ ಭೂಮಿ ಗಟ್ಟಿಯಾಗುವುದನ್ನು ಈ ಯಂತ್ರದ ಬಳಕೆಯಿಂದ ತಡೆಯಬಹುದಾಗಿದೆ.

ಕೂಲಿ ಖರ್ಚು ಕಡಿಮೆ: ಕೂಲಿ ಖರ್ಚನ್ನು ಗಮನಾರ್ಹವಾದ ಕಡಿಮೆ ಗೊಳಿಸಬಹುದಾಗಿದೆ. ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಭೂ ಪ್ರದೇಶದಲ್ಲಿ ಬೆಸಾಯಿ ಮಾಡಬುದುದಾಗಿದೆ. ಕಳೆ ನಾಶ, ಮಣ್ಣನ್ನು ಹುಸಿ ಮಾಡುವಿಕೆ ಮತ್ತು ಬೆಳೆಗೆ ಮಣ್ಣನ್ನು ಏರಾಕಾಗುವ ಮೂರು ಕ್ರಮಗಳನ್ನು ಏಕಕಾಲದಲ್ಲಿ ಮಾಡಬಹುದಾಗಿದ್ದರಿಂದ ರೈತರಿಗೆ ಸಮಯದ ಉಳಿತಾಯವಾಗಿ ಹೆಚ್ಚು ಉತ್ಪಾದನೆ ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.

ಸಾವಯವ ಕೃಷಿಗೆ ಈ ಯಂತ್ರ ಉಪಕಾರಿಯಾಗಿದೆ. ಈ ಯಂತ್ರವನ್ನು ಉಪಯೋಗಿಸಿ ಉಳಿಮೆ ಮಾಡುವುದರಿಂದ ಗಟ್ಟಿ ನೆಲವನ್ನು ಸುಲಭವಾಗಿ ಹದ ಮಾಡಬಹುದು. ಯಂತ್ರದಲ್ಲಿ ಅಳವಡಿಕೆಯಾಗಿರುವ ಉತ್ತಮ ಗುಣಗಳು ಮಣ್ಣನ್ನು ಹೆಚ್ಚು ಆಳವಾಗಿ ಹುಸಿ ಮಾಡುವುದಲ್ಲದೇ ಸಾಲುಗಳು ಕ್ರಮಬದ್ದವಾಗಿರಲು ಸಹಾಯ ಮಾಡುತ್ತದೆ. ಈ ಯಂತ್ರದ ಸಹಾಯದಿಂದ ಮಣ್ಣಿನ ತೇವಾಂಶವನ್ನು ಸಮತೋಲನವಾಗಿ ಕಾಪಾಡಬಹುದಾಗಿದೆ. ಅಲ್ಪ ಪ್ರಮಾಣದ ಮಳೆ ಬೀಳುವ ಪ್ರದೇಶಗಳಲ್ಲಿ ಈ ಯತ್ರಂದ ಬಳಕೆಯಿಂದ ಹೆಚ್ಚು ಇಳುವರಿಯನ್ನು ಪಡೆಯಬಹುದು ಎಂದು ಅಭಿಪ್ರಾಯ ವ್ಯಕ್ತಡಿಸಿದ್ದಾರೆ.

ಇದನ್ನೂ ಓದಿ: ಕುರುಕಲು ತಿಂಡಿ ಅಂದ್ರೆ ಮೂಗು ಮುರಿಯುವುದೇಕೆ?: ಮುಖ ಅರಳುವ ಸಂಗತಿ ಇಲ್ಲಿದೆ ನೋಡಿ

ಮುಖ್ಯವಾಗಿ ರೇಷ್ಮೆ ಬೆಳೆ, ನೆಲಕಡ್ಲೆ ಮತ್ತು ಎಲ್ಲ ಸಾಲು ಬೆಳೆಗಳಾದ ಅಡಕೆ, ಬಾಳೆ, ತರಕಾರಿಗಳು. ಎಣ್ಣೆ ಕಾಳುಗಳು ಮತ್ತು ಇತರ ಕೃಷಿಯಲ್ಲಿ ಈ ಯಂತ್ರವು ಅಂತರ ಬೇಸಾಯಕ್ಕೆ ಬಹಳ ಉಪಯುಕ್ತವಾಗಿದೆ. 500 ಕೆಜಿ ಟ್ರಾಲಿಯನ್ನು ಸಹ ಅಳವಡಿಸಬಹುದಾಗಿದೆ. ಸಿಂಪರಣಾ ಉಪಕರಣವನ್ನು ವಿನ್ಯಾಸ ಮಾಡಿ ಅಳವಡಿಸಲಾಗಿದೆ ಎಂದು ಅರುಣ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.