ETV Bharat / state

ಜೀವ ನೀನು.... ಜನ್ಮ ನೀಡಿದ ತಾಯಿಗೆ ಪುನರ್​ಜನ್ಮ ನೀಡಿದ ಮಗಳು... - Kidney Transplant stories

ತನ್ನ ತಾಯಿಯ ಜೀವ ಉಳಿಸಲು ಮಗಳೊಬ್ಬಳು ತನಗೆ ನಿಶ್ಚಿತಾರ್ಥ ಫಿಕ್ಸ್​ ಆಗಿದ್ದರೂ ಅದನ್ನು ಕ್ಯಾನ್ಸಲ್​ ಮಾಡಿ ಕಿಡ್ನಿದಾನ ಮಾಡಿ ಎಲ್ಲರಿಗೂ ಮಾದರಿಯಾದ ಘಟನೆ ನಡೆದಿದೆ.

ಅಮ್ಮ- ಮಗಳು
author img

By

Published : Aug 22, 2019, 3:54 AM IST

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ವಯಸ್ಸಿಗೆ ಬಂದ ಯುವಕ ಯುವತಿಯರು ಹೆತ್ತವರ ಕಡೆ ಗಮನ ಕೊಡದೆ ತಮ್ಮ ಜೀವನ ನಡೆದರೆ ಸಾಕು ಎಂದಿರುತ್ತಾರೆ. ಆದರೆ ಇಲ್ಲೊಬ್ಬ ಯುವತಿ ತಾಯಿಯ ಜೀವ ಉಳಿಸಲು ತನ್ನ ಕಿಡ್ನಿಯನ್ನೇ ದಾನ ಮಾಡಿ ಮಾದರಿಯಾಗಿದ್ದಾಳೆ.

ಬಾಂಗ್ಲಾದೇಶ ಮೂಲದ ಶಿಖಾರಾಣಿ ಎಂಬವರಿಗೆ ಕಿಡ್ನಿ ಸಮಸ್ಯೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ಪುತ್ರಿ ದೇವ್ ಶಾನ್ಬೋಜಯ ಸಿತ್ತಿ ಅವರು ಕಿಡ್ನಿದಾನ ಮಾಡಿದ್ದಾರೆ.

ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಶಿಖಾರಾಣಿಗೆ ಚಿಕಿತ್ಸೆ ಕೊಡಿಸಬೇಕೆಂದು ಅವರ ಪುತ್ರಿ ದೇವ್ ಶಾನ್ಬೋಜಯ ಸಿತ್ತಿ ಅವರು ವೆಬ್​ಸೈಟ್​ ಮೂಲಕ ಮಣಿಪಾಲ್ ಆಸ್ಪತ್ರೆ ಬಗ್ಗೆ ತಿಳಿದುಕೊಂಡಿದ್ದಾಳೆ. ಬಳಿಕ ಇಲ್ಲಿನ ಡಾಕ್ಟರ್​ಗಳನ್ನು ಸಂಪರ್ಕಿಸಿದಾಗ, ತಮ್ಮ ಅಮ್ಮನಿಗೆ ಎರಡೂ ಕಿಡ್ನಿ ಹಾಳಾಗಿದ್ದು, ಯಾರಾದರೂ ಕಿಡ್ನಿ ದಾನ ಮಾಡಿದರೆ ನಿಮ್ಮಮ್ಮನನ್ನು ಉಳಿಸಬಹುದು ಎಂದು ಹೇಳಿದ್ದಾರೆ. ತಕ್ಷಣ ಹಿಂದೆ ಮುಂದೆ ಯೋಚಿಸದೆ ಮಗಳು ಅಮ್ಮನಿಗಾಗಿ ತನ್ನ ಕಿಡ್ನಿ ನೀಡಲು ಮುಂದಾಗಿದ್ದಾಳೆ.

ತಾಯಿ ಜೀವ ಉಳಿಸಿದ ಮಗಳು

ಆದರೆ ಮಗಳು ದೇವ್ ಶಾನ್ಬೋಜಯ ಸಿತ್ತಿಗೆ ನಿಶ್ಚಿತಾರ್ಥದ ಡೇಟ್ ಫಿಕ್ಸ್ ಆಗಿತ್ತು. ಕಿಡ್ನಿ ದಾನ ಮಾಡಬಾರದೆಂದು ಯುವಕ ಹೇಳಿದಕ್ಕೆ ಸಿತ್ತಿಯು ವಿರೋಧ ವ್ಯಕ್ತಪಡಿಸಿ ತನ್ನ ನಿಶ್ಚಿತಾರ್ಥವನ್ನೇ ಕಾನ್ಸಲ್​ ಮಾಡಿ ಎಲ್ಲರ ಹುಬ್ಬೇರುವಂತಹ ತ್ಯಾಗ ಮಾಡಿದ್ದಾಳೆ ಈ ಮಹಾ ಮಗಳು.

ಇನ್ನು ಕಿಡ್ನಿದಾನದ ಬಗ್ಗೆ ಮಾತನಾಡಿದ ಮಣಿಪಾಲ ಆಸ್ಪತ್ರೆಯ ಮೂತ್ರಪಿಂಡ ರೋಗತಜ್ಞರಾದ ಡಾ. ಸನಕರನ್ ಸುಂದರ್, ಅಂಗದಾನಿಗಳಾಗುವಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಸಾಮಾನ್ಯವಾಗಿ ವಿವಾಹವಾಗದ ಯುವ ಮಹಿಳೆಯರು ಅಂಗದಾನ ಮಾಡುವುದನ್ನು ನಾವು ಪ್ರೋತ್ಸಾಹಿಸುವುದಿಲ್ಲ. ಏಕೆಂದರೆ ಅವರ ಆರೋಗ್ಯ ಸ್ಥಿತಿಗಳನ್ನು ಆಧರಿಸಿ ಅವರ ಭವಿಷ್ಯಕ್ಕೆ ಇದು ಅಡ್ಡಿಯಾಗಬಹುದೆಂಬ ಆತಂಕವಿದೆ. ಆದರೆ, ದೃಢ ನಿಶ್ಚಯದ ಯುವತಿಯೊಬ್ಬಳು ಏನಾದರೂ ಮಾಡಿ ತನ್ನ ತಾಯಿಯನ್ನು ಬದುಕಿಸಬೇಕೆಂಬ ನಿರ್ಣಯ ಕೈಗೊಂಡಿದ್ದನ್ನು ಕಂಡು ನಾವು ಅಚ್ಚರಿಗೊಂಡಿದ್ದೆವು. ಮಗಳ ಧೈರ್ಯವನ್ನು ಮತ್ತು ಉದಾತ್ತವಾದ ಈ ಕ್ರಮಕ್ಕೆ ಅವರ ಪೋಷಕರನ್ನು ನಾವು ಅಭಿನಂದಿಸುತ್ತೇವೆ ಎಂದಿದ್ದಾರೆ.

ಒಟ್ಟಿನಲ್ಲಿ ತಮ್ಮ ಜೀವನಕ್ಕಾಗಿ ತಂದೆ-ತಾಯಿಯನ್ನು ಲೆಕ್ಕಿಸದ ಈ ಸಮಾಜದಲ್ಲಿ ತಾಯಿಗಾಗಿ ಮುಂದಿನ ಭವಿಷ್ಯದ ಬಗ್ಗೆ ಯೋಚಿಸದೆ ತನ್ನ ಒಂದು ಕಿಡ್ನಿದಾನ ಮಾಡಿದ್ದಾಳೆ. ಜನ್ಮ ನೀಡಿದ ಅಮ್ಮನನ್ನು ಉಳಿಸಿಕೊಂಡ ಸಂತೋಷ ಆಕೆಯ ಕಣ್ಣಿನಲ್ಲಿ ಕಾಣುತ್ತಿದೆ. ಆದರ್ಶ ಮೆರೆದ ಈ ಯುವತಿಗೆ ನಮ್ಮದೊಂದು ಸಲಾಂ.

Intro:ಹಳೆ ವಿಮಾನ ನಿಲ್ದಾಣ ರಸ್ತೆ.

ತಾಯಿಗಾಗಿ ನಿಶ್ಚಿತಾರ್ಥ ಕ್ಯಾನ್ಸಲ್ ಮಾಡಿ ಕಿಡ್ನಿ ದಾನ ಮಾಡಿ ತಾಯಿಯ ಜೀವ ಉಳಿಸಿದ ಮಗಳು.

ವಯಸ್ಸಿಗೆ ಬಂದರೆ ಸಾಕು ಲವರ್ಗಳನ್ನು ನೋಡಿಕೊಂಡು ಹಾರಿ ಬಿಡುವ ಯುವತಿಯರಿದ್ದಾರೆ ಇಲ್ಲಾಂದ್ರೆ ಒಳ್ಳೆ ಹುಡುಗನನ್ನ ನೋಡಿ ಮದುವೆಯಾಗಿ ತಮ್ಮ ಜೀವನ ರೂಪಿಸಿಕೊಳ್ಳೋ ಕಡೆಗೆ ಮುಖ ಮಾಡ್ತಾರೆ, ಹುಟ್ಟಿಸಿದ ತಂದೆ-ತಾಯಿಯ ಬಗ್ಗೆ ಯೋಚಿಸುವವರು ಬೆರಳಣಿಕೆಯಷ್ಟೇ, ಆದರೆ ಇಲ್ಲೊಬ್ಬ ಯುವತಿ ಮಾತ್ರ ತಾಯಿಗೆ ಕಿಡ್ನಿ ಸಮಸ್ಯೆ ಇದೆ ಎಂದು ತಿಳಿದ ತಕ್ಷಣ ಫಿಕ್ಸ್ ಆಗಿದ್ದ ನಿಶ್ವಿತಾರ್ಥ ಕ್ಯಾನ್ಸಲ್ ಮಾಡಿಕೊಂಡು ತಾಯಿಗೆ ಕಿಡ್ನಿದಾನ ಮಾಡಿ ಅಮ್ಮನನ್ನು ಉಳಿಸಿಕೊಂಡಿದ್ದಾಳೆ.

ಬಾಂಗ್ಲ ದೇಶ ಮೂಲದ ಶಿಖಾರಾಣಿ ದಂಪತಿ ಪುತ್ರಿ ದೇವ್ ಶಾನ್ಬೋಜಯ ಸಿತ್ತಿ ಅವರಿಗೆ 26 ವರ್ಷ ವಯಸ್ಸಾಗಿತ್ತು. ಇನ್ನೇನು ಮಗಳಿಗೆ ಮದುವೆ ಮಾಡಬೇಕೆಂದು ನಿಶ್ಚಿತಾರ್ಥ ಡೇಟ್ ಸಹ ಫಿಕ್ಸ್ ಆಗಿತ್ತು. ಆಗಲೇ ಅಲ್ಲೊಂದು ದುಖಃಕರ ಸಂಗತಿ ತಿಳಿದು ಬಂತು, ತಾಯಿ ಶಿಖಾರಾಣಿ ಅವರಿಗೆ ಎರಡೂ ಕಿಡ್ನಿ ಹಾಳಾಗಿದ್ದು ಉಳಿಯಲು ಕಷ್ಟದ ಪರಿಸ್ಥಿತಿ ನಿರ್ಮಾಣವಾಗಿತ್ತು. ವೆಬ್ಸೈಟ್ನಲ್ಲಿ ಮಣಿಪಾಲ್ ಆಸ್ಪತ್ರೆ ಬಗ್ಗೆ ತಿಳಿದುಕೊಂಡು ಅಮ್ಮನಿಗೆ ಪರೀಕ್ಷೆ ಮಾಡಿಸಿದ್ದಳು, ವೈದ್ಯರು ಅಮ್ಮನಿಗೆ ಎರಡೂ ಕಿಡ್ನಿ ಹಾಳಾಗಿದ್ದು, ಯಾರಾದರೂ ಕಿಡ್ನಿ ದಾನ ಮಾಡಿದರೆ ಅಮ್ಮನನ್ನು ಉಳಿಸಬಹುದು ಎಂದು ಹೇಳಿದ ತಕ್ಷಣ ಹಿಂದೆ ಮುಂದೆ ಯೋಚಿಸದೆ ಮಗಳು ಅಮ್ಮನಿಗಾಗಿ ತನ್ನ ಕಿಡ್ನಿ ನೀಡಲು ಮುಂದಾದಳು. ನಿಯಮಗಳ ವಿರುದ್ಧವಾಗಿ ತನ್ನ ಮೂತ್ರಪಿಂಡ ನೀಡುವ ನಿರ್ಣಯವನ್ನು ವಿರೋಧಿಸಿದ ಭಾವಿ ಪತಿಯೊಂದಿಗೆ ತನ್ನ ನಿಶ್ಚಿತಾರ್ಥವನ್ನು ಸಹ ರದ್ದು ಮಾಡಿ ತನಗೆ ಜನ್ಮ ನೀಡಿದ ನನ್ನ ಅಮ್ಮನ ಪ್ರಾಣ ಮುಖ್ಯ ನನಗೆ ಮದುವೆ ಆಗದಿದ್ದರೂ ಪರವಾಗಿಲ್ಲ ನನಗೆ ನನ್ನ ಅಮ್ಮ ಬೇಕು ನನಗೆ‌‌ ಅಣ್ಣ ತಮ್ಮ ಯಾರು ಇಲ್ಲ‌ ಜೀವನ ಪೂರ್ತಿ ಅವರ ಸೇವೆಯನ್ನು ಮಾಡಿಕೋಂಡು ಇರುತ್ತೆನೆ
ಎಂದು ಕಿಡ್ನಿ ನೀಡಿ ಅಮ್ಮನ ಪ್ರಾಣವನ್ನು ಉಳಿಸಿದ್ದಾಳೆ.Body:ಮಹಿಳೆಯರು ಮೂತ್ರಪಿಂಡವನ್ನು ಸ್ವೀಕರಿಸುವ ಅಷ್ಟು ಸಾಮಾನ್ಯವಾಗಿರದ ಅತ್ಯಂತ ವಿರಳವಾದ ಪ್ರಕರಣವಾಗಿದೆ. ಇನ್ನೊಂದು ಕಡೆ ಅಂಗದಾನಿಗಳಾಗುವಲ್ಲಿ ಮಹಿಳೆಯರು ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಸಾಮಾನ್ಯವಾಗಿ ವಿವಾಹವಾಗದ ಯುವ ಮಹಿಳೆಯರು ಅಂಗದಾನ ಮಾಡುವುದನ್ನು ನಾವು ಪ್ರೋತ್ಸಾಹಿಸುವುದಿಲ್ಲ. ಏಕೆಂದರೆ ಅವರ ಆರೋಗ್ಯ ಸ್ಥಿತಿಗಳನ್ನು ಆಧರಿಸಿ ಅವರ ಭವಿಷ್ಯಕ್ಕೆ ಇದು ಅಡ್ಡಿಯಾಗಬಹುದೆಂಬ ಆತಂಕವಿದೆ. ಆದರೆ, ದೃಢ ನಿಶ್ಚಯದ ಯುವತಿಯೊಬ್ಬಳು ಏನಾದರೂ ಮಾಡಿ ತನ್ನ ತಾಯಿಯನ್ನು ಬದುಕಿಸಬೇಕೆಂಬ ನಿರ್ಣಯ ಕೈಗೊಂಡಿದ್ದನ್ನು ಕಂಡು ನಾವು ಅಚ್ಚರಿಗೊಂಡಿದ್ದೆವು. ಮಗಳ ಧೈರ್ಯವನ್ನು ಮತ್ತು ಉದಾತ್ತವಾದ ಈ ಕ್ರಮಕ್ಕೆ ಅವರ ಪೋಷಕರನ್ನು ನಾವು ಅಭಿನಂದಿಸುತ್ತೇವೆ. ಈಕೆ ಸಮಾಜದಲ್ಲಿ ಉಳಿದ ಎಲ್ಲರಿಗೂ ನಿದರ್ಶನವಾಗಿರುವುದಲ್ಲದೆ, ನೈಜ ವಿಜೇತಳಾಗಿ ಹೊರಹೊಮ್ಮಿದ್ದಾಳೆ.Conclusion:ಒಟ್ಟಿನಲ್ಲಿ ತಮ್ಮ ಜೀವನಕ್ಕಾಗಿ ತಂದೆ-ತಾಯಿಯನ್ನು ಲೆಕ್ಕಿಸದ ಈ ಸಮಾಜದಲ್ಲಿ ತಾಯಿಗಾಗಿ ಮುಂದಿನ ಭವಿಷ್ಯದ ಬಗ್ಗೆ ಯೋಚಿಸದೆ ತನ್ನ ಒಂದು ಕಿಡ್ನಿದಾನ ಮಾಡಿ ಜನ್ಮ ನೀಡಿದ ಅಮ್ಮನನ್ನು ಉಳಿಸಿಕೊಂಡು ಆಕೆಯ ಕಣ್ಣಿನಲ್ಲಿ ಸಂತೋಷ ಕಾಣುತ್ತಿರುವ ಬಾಂಗ್ಲಾದೇಶದ ಈ ಯುವತಿ ಎಲ್ಲಾ ಯುವತಿಯರಿಗೆ ಆದರ್ಶಳಾಗಿದ್ದಾಳೆ. ಇವರಿಗೆ ನಮ್ಮದೊಂದು ಒಂದು ಸಲಾಂ.

ಧರ್ಮರಾಜು ಎಂ ಕೆಆರ್ ಪುರ.

ಬೈಟ್, ಡಾ. ಸನಕರನ್ ಸುಂದರ್, ಮಣಿಪಾಲ್ ಆಸ್ಪತ್ರೆಯ ಮೂತ್ರಪಿಂಡ ರೋಗತಜ್ಞ.

ಬೈಟ್, ದೇವ್ ಶಾನ್ಬೋಜಯ ಸಿತ್ತಿ , ಮಗಳು

ಶಿಖಾರಾಣಿ,ಮೂತ್ರಪಿಂಡ ರೋಗದಿಂದ ಬಳಲುತ್ತಿದ್ದವರು
ETV Bharat Logo

Copyright © 2025 Ushodaya Enterprises Pvt. Ltd., All Rights Reserved.