ಬೆಂಗಳೂರು: ಆಸ್ತಿ ವಿಚಾರವಾಗಿ ತಲಗೆ ಗನ್ ಪಾಯಿಂಟ್ ಇಟ್ಟು ಧಮ್ಕಿ ಹಾಕಿರುವ ಆರೋಪ ವಿಧಾನಪರಿಷತ್ ಸದಸ್ಯ ರಮೇಶ್ ಗೌಡ ಬೆಂಬಲಿರಾದ ಅಶ್ವತ್ಥಗೌಡ, ಮೋಹನ್ ಗೌಡ, ರಾಜೇಶ್ ಗೌಡ, ಜಯಂತ್ ಮತ್ತು ಅರವಿಂದ್ ವಿರುದ್ಧ ಕೇಳಿ ಬಂದಿದೆ.
ಕಳೆದ ಸೆಪ್ಟೆಂಬರ್ .23 ರಂದು ಪ್ರಾಪರ್ಟಿ ವಿಚಾರದ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿ ಎಂದು ಹೇಳಿಕೊಂಡು ಜಯಂತ್ ಕುಮಾರ್ ಎಂಬಾತ ಮನೆಗೆ ಬಂದಿದ್ದನು. ಆತ ನನ್ನನ್ನು ಮನೆಯಿಂದ 200 ಮೀಟರ್ ದೂರ ಕರೆದುಕೊಂಡು ಹೋಗಿದ್ದನು. ಅದೇ ಸ್ಥಳಕ್ಕೆ ರಮೇಶ್ ಗೌಡರು ತಮ್ಮ ಬೆಂಬಲಿಗರಾದ ರಾಜೇಶ್ ಗೌಡ, ಅರವಿಂದ್, ಮೋಹನ್ ಗೌಡ, ಅಶ್ವತ್ಥಗೌಡ ಜೊತೆ ಬಂದಿದ್ದರು.
ಬಂದವರೇ ರಮೇಶ್ ಗೌಡ ಸಹವಾಸಕ್ಕೆ ಬರಬಾರದು. ಕೊಟ್ಟಿರುವ ದೂರು ಹಿಂಪಡೆಯಬೇಕು. ಹೆಣ್ಣೂರಲ್ಲಿರುವ ಜಾಗ ಮತ್ತು ದೇವನಹಳ್ಳಿಯ 4 ಎಕರೆ ಜಾಗ ಕೊಡಬೇಕು ಎಂದು ಹಣೆಗೆ ಗನ್ ಇಟ್ಟು ಬೆದರಿಕೆ ಹಾಕಿದ್ದರು ಎಂದು ಸುನೀಲ್ ಆರೋಪಿಸಿದ್ದಾರೆ. ಈ ಸಂಬಂಧ ರಮೇಶ್ ಬೆಂಬಲಿಗರ ವಿರುದ್ಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಎನ್ಸಿಆರ್ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಇದನ್ನೂ ಓದಿ: ಕರಾವಳಿಯಲ್ಲಿ ಕೇಸರಿ ಕೋಟೆ ಭದ್ರಪಡಿಸಿದ್ದ ‘ಭೀಷ್ಮ’: ಉರಿಮಜಲು ಕೆ. ರಾಮಭಟ್ ಹೆಜ್ಜೆ ಗುರುತು