ಬೆಂಗಳೂರು: ಯಲಹಂಕ ಜಿಕೆವಿಕೆಯಲ್ಲಿ ನಡೆಯುತ್ತಿದ್ದ ಕೃಷಿಮೇಳದ ಮುಕ್ತಾಯದ ಬಳಿಕ, ಮಳಿಗೆ ತೆರವು ಮಾಡುವ ವಿಚಾರವಾಗಿ ಎರಡು ಗುಂಪಿನ ಯುವಕರ ನಡುವೆ ಘರ್ಷಣೆಯಾಗಿದೆ. ಯುವಕರು ಮಳೆಯಲ್ಲಿ ಬಿದ್ದು ಒಬ್ಬರನ್ನೊಬ್ಬರು ತಳ್ಳಾಡಿಕೊಂಡ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.
ಯಲಹಂಕ ಜಿಕೆವಿಕೆಯಲ್ಲಿ ನಡೆಯುತ್ತಿದ್ದ ಕೃಷಿಮೇಳದ ಆವರಣ ನಿನ್ನೆ ಕೊನೆಗೊಂಡಿತ್ತು. ಈ ವೇಳೆ ಜಿಕೆವಿಕೆ ಕೃಷಿ ಮೇಳದಲ್ಲಿ ಸ್ಟಾಲ್ ತೆಗೆಯುವ ವಿಚಾರಕ್ಕೆ ಶುರುವಾದ ಜಗಳ ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿ, ಪರಸ್ಪರ ಗುಂಪಿನ ನಡುವೆ ವಾಗ್ವಾದ ಹೊಡೆದಾಟದಲ್ಲಿ ಅಂತ್ಯವಾಗಿದೆ. ಇನ್ನು, ಹಲ್ಲೆಗೊಳಗಾದ ಗುಂಪಿನ ಯುವಕರು, ಮತ್ತೊಂದು ಗುಂಪಿನ ಯುವಕರು ಸ್ಟಾಲ್ ಬೀಳಿಸಿ ಹಣ, ತಾವು ಧರಿಸಿದ್ದ ಚಿನ್ನಾಭರಣ ದೋಚಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ಕೂಡಲೇ ಸ್ಥಳಕ್ಕಾಮಿಸಿದ ಯಲಹಂಕ ಪೊಲೀಸರು,ಪರಿಶೀಲನೆ ನಡೆಸಿದ್ದಾರೆ.