ETV Bharat / state

ಇಂಡಿಗೋ ವಿಮಾನದಲ್ಲಿ ಟಿಶ್ಯೂ ಪೇಪರಿನಲ್ಲಿ ಬಾಂಬ್ ಬೆದರಿಕೆ ಸಂದೇಶ ಪತ್ತೆ - ಟಿಶ್ಯೂ ಪೇಪರ್​ನಲ್ಲಿ ಬಾಂಬ್ ಬೆದರಿಕೆ ಸಂದೇಶ

ಇಂಡಿಗೋ ವಿಮಾನದಲ್ಲಿ ಟಿಶ್ಯೂ ಪೇಪರಿನಲ್ಲಿ ಬಾಂಬ್ ಬೆದರಿಕೆ ಸಂದೇಶ ಪತ್ತೆಯಾಗಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

bomb threat message was found  threat message was found on the tissue paper  Indigo flight at Kempegowda International Airport  Kempegowda International Airport news  ಟಿಶ್ಯೂ ಪೇಪರಿನಲ್ಲಿ ಬಾಂಬ್ ಬೆದರಿಕೆ ಸಂದೇಶ ಪತ್ತೆ  ಇಂಡಿಗೋ ವಿಮಾನದಲ್ಲಿ ಟಿಶ್ಯೂ ಪೇಪರಿನಲ್ಲಿ ಬಾಂಬ್ ಬೆದರಿಕೆ  ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ  ಟಿಶ್ಯೂ ಪೇಪರ್​ನಲ್ಲಿ ಬಾಂಬ್ ಬೆದರಿಕೆ ಸಂದೇಶ  ಹುಸಿ ಬಾಂಬ್ ಬೆದರಿಕೆ ಸಂದೇಶ
ಬಾಂಬ್ ಬೆದರಿಕೆ ಸಂದೇಶ ಪತ್ತೆ
author img

By

Published : Nov 28, 2022, 7:44 AM IST

ದೇವನಹಳ್ಳಿ: ಕೋಲ್ಕತ್ತಾದಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಂಡಿಗೋ ವಿಮಾನ ಸೀಟ್​ವೊಂದರಲ್ಲಿ ಸಿಕ್ಕ ಟಿಶ್ಯೂ ಪೇಪರ್​ನಲ್ಲಿ ಬಾಂಬ್ ಬೆದರಿಕೆ ಸಂದೇಶ ಪತ್ತೆಯಾಗಿದೆ. ತಪಾಸಣೆ ನಡೆಸಿದಾಗ ಇದೊಂದು ಹುಸಿ ಬಾಂಬ್ ಬೆದರಿಕೆ ಸಂದೇಶ ಎಂದು ತಿಳಿದು ಬಂದಿದೆ.

ನಿನ್ನೆ ಬೆಳಗ್ಗೆ 5:29ಕ್ಕೆ ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ವಿಮಾನ ನಿಲ್ದಾಣದಿಂದ 6E 379 ಇಂಡಿಗೋ ಟೆಕ್ ಆಫ್ ಆಗಿ ಬೆಳಗ್ಗೆ 8:10ಕ್ಕೆ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ವಿಮಾನದಲ್ಲಿ ಬಾಂಬ್ ಬೆದರಿಕೆ ಸಂದೇಶ ಇರುವ ಮಾಹಿತಿ ಇಂಡಿಗೋ ಸಿಬ್ಬಂದಿಗೆ ತಿಳಿದು ಬಂದಿದೆ. ತಕ್ಷಣವೇ ಭದ್ರತಾ ಸಿಬ್ಬಂದಿ ಕರೆದು ತಪಾಸಣೆ ನಡೆಸಲಾಯಿತು.

6D ಸೀಟ್ ಬಳಿ ದೊರೆತ ಟಿಶ್ಯೂ ಪೇಪರ್​ನಲ್ಲಿ ಅನಾಮಧೇಯ ವ್ಯಕ್ತಿಯೊಬ್ಬ ನೀಲಿ ಅಕ್ಷರಗಳಲ್ಲಿ ಬರೆಯಲಾಗಿದ್ದ ಬಾಂಬ್ ಬೆದರಿಕೆಯ ಸಂದೇಶ ಇದಾಗಿದೆ. ಬಾಂಬ್ ನಿಷ್ಕ್ರಿಯದವರು ವಿಮಾನವನ್ನ ಸಂಪೂರ್ಣ ತಪಾಸಣೆ ನಡೆಸಿದಾಗ ಇದೊಂದು ಹುಸಿ ಬಾಂಬ್ ಬೆದರಿಕೆ ಸಂದೇಶ ಎಂಬುದು ತಿಳಿದು ಬಂದಿದೆ. ಏರ್​ಪೋರ್ಟ್ ಸಿಬ್ಬಂದಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

ಓದಿ: ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಶಾರೀಕ್​​​ನ​ನ್ನು ನಾವು ವಿಚಾರಣೆ ಮಾಡಿಲ್ಲ.. ಕಮಿಷನರ್ ಶಶಿಕುಮಾರ್

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.