ಬೆಂಗಳೂರು: ರಾಜ್ಯದಲ್ಲಿ ಇಂದು 952 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 9,19,496 ಕ್ಕೆ ಏರಿಕೆ ಆಗಿದೆ. 9 ಮಂದಿ ಕೋವಿಡ್ಗೆ ಮೃತರಾಗಿದ್ದು, ಸಾವಿನ ಸಂಖ್ಯೆ 12,090ಕ್ಕೆ ಏರಿಕೆ ಆಗಿದೆ. 19 ಸೋಂಕಿತರು ಅನ್ಯ ಕಾರಣಕ್ಕೆ ಮೃತರಾಗಿದ್ದಾರೆ.
1,282 ಸೋಂಕಿತರು ಇಂದು ಗುಣಮುಖರಾಗಿದ್ದು, ಈವರೆಗೆ 8,96,116 ಡಿಸ್ಚಾರ್ಜ್ ಆಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 194 ಜನರು ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ರಾಜ್ಯದಲ್ಲಿ 11,271 ಸಕ್ರಿಯ ಪ್ರಕರಣಗಳು ಬಾಕಿ ಇವೆ. ಈವರೆಗೆ ಒಟ್ಟು 8,96,116 ಮಂದಿ ಬಿಡುಗಡೆಯಾಗಿದ್ದಾರೆ. ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 9,19,496 ಕ್ಕೆ ಏರಿಕೆಯಾಗಿದೆ. ಮೃತಪಟ್ಟವರ ಸಂಖ್ಯೆ 12,090 ಕ್ಕೆ ಏರಿಕೆಯಾಗಿದೆ.
ಬೆಂಗಳೂರು ನಗರದ ವರದಿ: ಇನ್ನು ಬೆಂಗಳೂರು ನಗರದಲ್ಲಿಂದು 554 ಜನರಲ್ಲಿ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿದೆ. 6 ಸೋಂಕಿತರು ಬಲಿಯಾಗಿದ್ದಾರೆ. ಮರಣ ಪ್ರಮಾಣದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಸಿಲಿಕಾನ್ ಸಿಟಿಯ ಜನರ ನೆಮ್ಮದಿಗೆ ಭಂಗ ತಂದಿದೆ.
ಇದನ್ನೂ ಓದಿ : ಶಾಲೆ ಆರಂಭ: ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್.. ಶಾಲೆಗಳ ಪರಿಶೀಲನೆ ನಡೆಸಿದ ಸುರೇಶ್ ಕುಮಾರ್
ಇಂದು 849 ಮಂದಿ ಬಿಡುಗಡೆಯಾಗಿದ್ದು, ಈ ವರೆಗೆ ಒಟ್ಟು 376835 ಮಂದಿ ಗುಣಮುಖರಾಗಿದ್ದಾರೆ. ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 388386 ಕ್ಕೆ ಏರಿಕೆಯಾಗಿದೆ. ಸಾವಿನ ಪ್ರಮಾಣ 4317 ಕ್ಕೆ ಏರಿಕೆಯಾಗಿದೆ.
ಇಂದು ವಿಮಾನ ನಿಲ್ದಾಣದಲ್ಲಿ 797 ಮಂದಿಯನ್ನು ಸ್ಕ್ರೀನಿಂಗ್ಗೆ ಒಳಪಡಿಸಲಾಗಿದೆ. ಯುಕೆಯಿಂದ ಮರಳಿರುವ ಪ್ರಯಾಣಿಕರಲ್ಲಿ ಒಟ್ಟು 63 ಜನರ ಟೆಸ್ಟ್ ನಡೆಸಲಾಗಿದ್ದು, ಇಬ್ಬರಲ್ಲಿ ಪಾಸಿಟಿವ್ ಬಂದಿದ್ದು, 61 ಜನರ ರಿಪೋರ್ಟ್ಗೆ ಕಾಯಲಾಗಿದೆ. ಈವರೆಗೆ ಬ್ರಿಟನ್ನಿಂದ ಮರಳಿದ 33 ಮಂದಿಯಲ್ಲಿ ಪಾಸಿಟಿವ್ ದೃಢಪಟ್ಟಿದೆ.
ಇನ್ನು ನಗರದಲ್ಲಿ ಸೋಂಕಿತ ಯುಕೆ ಪ್ರಯಾಣಿಕರ ಸಂಖ್ಯೆ 20 ಕ್ಕೆ ಏರಿಕೆಯಾಗಿದೆ. 1329 ಜನರ ಸ್ಯಾಂಪಲ್ ಪರೀಕ್ಷೆ ಮಾಡಲಾಗಿದ್ದು, 1249 ಜನರ ರಿಸಲ್ಟ್ ಬಂದಿದೆ. ಇನ್ನೂ 80 ಜನರ ರಿಸಲ್ಟ್ ಬರಬೇಕಿದೆ. 51 ಮಂದಿ ಮಂದಿ ಇನ್ನೂ ಸಂಪರ್ಕಕ್ಕೆ ಸಿಕ್ಕಿಲ್ಲ.