ಬೆಂಗಳೂರು: ರಾಜ್ಯದಲ್ಲಿ ಇಂದು 958 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 9,12,340ಕ್ಕೆ ಏರಿಕೆ ಆಗಿದೆ.
9 ಮಂದಿ ಕೋವಿಡ್ಗೆ ಮೃತರಾಗಿದ್ದು, ಸಾವಿನ ಸಂಖ್ಯೆ 12,038ಕ್ಕೆ ಏರಿಕೆ ಆಗಿದೆ. 19 ಸೋಂಕಿತರು ಅನ್ಯ ಕಾರಣಕ್ಕೆ ಮೃತರಾಗಿದ್ದಾರೆ. 1206 ಸೋಂಕಿತರು ಇಂದು ಗುಣಮುಖರಾಗಿದ್ದು, ಈವರೆಗೆ 8,86,547 ಡಿಸ್ಚಾರ್ಜ್ ಆಗಿದ್ದಾರೆ.
ಓದಿ: ಚಾರ್ಮಾಡಿ ಘಾಟ್ ಅರಣ್ಯದಲ್ಲಿ ಬೆಂಕಿ; ಹತ್ತಾರು ಎಕರೆ ಸುಟ್ಟು ಕರಕಲು
ತೀವ್ರ ನಿಗಾ ಘಟಕದಲ್ಲಿ 217 ಜನರು ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ರಾಜ್ಯದಲ್ಲಿ 12,038 ಸಕ್ರಿಯ ಪ್ರಕರಣಗಳು ಬಾಕಿ ಇವೆ. ಕಳೆದ 7 ದಿನಗಳಲ್ಲಿ 29,526 ಮಂದಿ ಹೋಂ ಕ್ವಾರಂಟೈನ್ ಇದ್ದು, ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ 78,145, ದ್ವಿತೀಯ ಸಂಪರ್ಕದಲ್ಲಿ 87,924 ಜನರು ಇದ್ದಾರೆ.
ಬೆಂಗಳೂರಿನಲ್ಲಿಂದು 550 ಕೋವಿಡ್ ಪಾಸಿಟಿವ್: ಇಬ್ಬರು ಬಲಿ
ನಗರದಲ್ಲಿಂದು 550 ಮಂದಿಗೆ ಕೋವಿಡ್ ಪಾಸಿಟಿವ್ ಕಂಡುಬಂದಿದ್ದು, ಇಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ. ಪರಿಣಾಮ ಸೋಂಕಿತರ ಒಟ್ಟು ಸಂಖ್ಯೆ 384366ಕ್ಕೆ ಏರಿಕೆಯಾಗಿದೆ. ಇಂದು 694 ಮಂದಿ ಬಿಡುಗಡೆಗೊಂಡಿದ್ದಾರೆ. ಈವರೆಗೆ ಒಟ್ಟು 371081 ಮಂದಿ ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳಲ್ಲಿ 9002 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಇಬ್ಬರು ಮೃತಪಟ್ಟಿದ್ದು, ಈವರೆಗೆ 4282 ಮಂದಿ ಅಸುನೀಗಿದ್ದಾರೆ.