ಬೆಂಗಳೂರು: ರಾಜ್ಯದಲ್ಲಿ ಇಂದು 90 ಮಂದಿಗೆ ಕೋವಿಡ್ ಸೋಂಕು ತಗುಲಿದೆ. 11,142 ಜನರು ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದರು. ಸದ್ಯ ಸೋಂಕಿತರ ಸಂಖ್ಯೆ 39,48,837ಕ್ಕೆ ತಲುಪಿದ್ದು, ಪಾಸಿಟಿವ್ ದರ ಶೇ. 0.80ರಷ್ಟು ಇದೆ.
ಇಂದು 128 ಸೋಂಕಿತರು ಗುಣಮುಖರಾಗಿದ್ದು, ಇದುವರೆಗೆ 39,06,807 ಜನರು ಚೇತರಿಸಿಕೊಂಡಿದ್ದಾರೆ. ಸೋಂಕಿಗೆ ಒಬ್ಬ ಮೃತಪಟ್ಟಿದ್ದು, ಇಲ್ಲಿಯವರೆಗೆ 40,063 ಸೋಂಕಿತರು ಸಾವನ್ನಪ್ಪಿದ್ದಾರೆ. ಸಾವಿನ ದರ ಶೇ. 0.89ರಷ್ಟಿದೆ. ಸದ್ಯ 1,925 ಸಕ್ರಿಯ ಪ್ರಕರಣಗಳಿವೆ. ವಿಮಾನ ನಿಲ್ದಾಣದಲ್ಲಿ 6,854 ಮಂದಿ ತಪಾಸಣೆಗೆ ಒಳಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ 88 ಮಂದಿಗೆ ಸೋಂಕು ತಗುಲಿದೆ. 122 ಮಂದಿ ಚೇತರಿಸಿಕೊಂಡಿದ್ದಾರೆ. ಯಾವುದೇ ಸಾವಿನ ವರದಿಯಾಗಿಲ್ಲ, ಇದುವರೆಗಿನ ಸಾವಿನ ಸಂಖ್ಯೆ 16,962ರಷ್ಟಿದೆ. ನಗರದಲ್ಲಿ 1,805 ಕೋವಿಡ್ ಸಕ್ರಿಯ ಪ್ರಕರಣಗಳಿವೆ.
- ರೂಪಾಂತರಿ ಮಾಹಿತಿ:
- ಅಲ್ಪಾ - 156
- ಬೀಟಾ - 08
- ಡೆಲ್ಟಾ ಸಬ್ ಲೈನೇಜ್ - 4,623
- ಇತರೆ - 331
- ಒಮಿಕ್ರಾನ್ - 5,422
- BAI.1.529 - 1005
- BA1 - 100
- BA2 - 4317
- ಒಟ್ಟು - 10,540
ಇದನ್ನೂ ಓದಿ: ಪೃಥ್ವಿ ಶಾಗೆ ತೀವ್ರ ಜ್ವರ, ಆಸ್ಪತ್ರೆಗೆ ದಾಖಲು: ಕೋವಿಡ್ ವರದಿ ನೆಗೆಟಿವ್