ETV Bharat / state

ನಿರಂತರ ಅಪರಾಧ ಕೃತ್ಯಗಳಲ್ಲಿ ಭಾಗಿ : ಗೂಂಡಾ ಕಾಯ್ದೆಯಡಿ 9 ಮಂದಿ ಕ್ರಿಮಿನಲ್​ಗಳ ಬಂಧನ

author img

By

Published : Apr 28, 2021, 2:38 PM IST

ನಿರಂತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ 9 ಮಂದಿ ಕ್ರಿಮಿನಲ್‌ಗಳ ಮೇಲೆ ಗೂಂಡಾ ಕಾಯ್ದೆಯಡಿ ಬಂಧನ..

9 Criminals Arrested
ಗೂಂಡಾ ಕಾಯ್ದೆಯಡಿ 9 ಮಂದಿ ಕ್ರಿಮಿನಲ್​ಗಳ ಬಂಧನ

ಬೆಂಗಳೂರು : ಕಾನೂನು ಸುವ್ಯವಸ್ಥೆಗೆ ಸವಾಲೆಸೆದಿದ್ದ 9 ಮಂದಿ ಕ್ರಿಮಿನಲ್​ಗಳ‌ನ್ನು ಸಿಸಿಬಿ ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿದ್ದಾರೆ.

ನಗರ ವ್ಯಾಪ್ತಿಯಲ್ಲಿ ಕೊಲೆ, ಕೊಲೆ ಪ್ರಯತ್ನ, ಹಲ್ಲೆ, ಸುಲಿಗೆ, ಸರಗಳ್ಳತನ ಹಾಗೂ ಕಳೆದ 7-8 ವರ್ಷಗಳಿಂದ ನಗರ ವ್ಯಾಪ್ತಿಯಲ್ಲಿ ಹಲವಾರು ಕಡೆಗಳಲ್ಲಿ ವಿಡಿಯೋಗೇಮ್, ರಿಕ್ರಿಯೇಷನ್ ಸೆಂಟರ್​ಗಳಲ್ಲಿ ಜೂಜಾಟ ನಡೆಸುತ್ತಿದ್ದ 9 ಮಂದಿ ಅಪರಾಧ ಹಿನ್ನೆಲೆಯುಳ್ಳವರನ್ನು ಗೂಂಡಾ ಕಾಯಿದೆ ಅಡಿ ಬಂಧಿಸಲಾಗಿದೆ.

1. ಮುನಿಕೃಷ್ಣ: ಈತ ಅಮೃತಹಳ್ಳಿ ರೌಡಿಶೀಟರ್ ಆಗಿದ್ದು, 2012ರಿಂದ ಕೊಲೆ ಪ್ರಯತ್ನ, ಅಪಹರಣ, ಅತ್ಯಾಚಾರ, ಕರ್ತವ್ಯನಿರತ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ, ಬಾಲಕಿಯ ಮೇಲಿನ ಅತ್ಯಾಚಾರ ಸೇರಿ 9 ಪ್ರಕರಣ ಎದುರಿಸುತ್ತಿದ್ದನು.

2. ಸಾಗರ್ : ಬನಶಂಕರಿ ಪೊಲೀಸ್ ಠಾಣೆ ರೌಡಿಪಟ್ಟಿಯಲ್ಲಿದ್ದು, ಈತನು 2017ರಿಂದ ಕೊಲೆ, ಕೊಲೆ ಪ್ರಯತ್ನ, ದರೋಡೆ, ಸುಲಿಗೆ, ಹಲ್ಲೆ ಸೇರಿ 3 ವರ್ಷಗಳಲ್ಲಿ ಒಟ್ಟು (19) ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿದ್ದನು.

3. ರಾಜು : ಈತನು ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆ ರೌಡಿಪಟ್ಟಿಯಲ್ಲಿದ್ದು, ಕಳೆದ 5 ವರ್ಷಗಳಿಂದ ಕೊಲೆ ಪ್ರಯತ್ನ, ಸುಲಿಗೆ, ದರೋಡೆ, ಹಲ್ಲೆ, ಕರ್ತವ್ಯನಿರತ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ಸೇರಿ 17 ಪ್ರಕರಣಗಳಲ್ಲಿ ಭಾಗಿಯಾಗಿದ್ದನು.

4. ವಾಸುದೇವ : ಈತನು ಬ್ಯಾಡರಹಳ್ಳಿ ಪೊಲೀಸ್ ರೌಡಿಪಟ್ಟಿಯಲ್ಲಿದ್ದು, 2011ರಿಂದಲೂ ಕೊಲೆ, ಸುಲಿಗೆ, ಕೊಲೆ ಪ್ರಯತ್ನ, ಪೊಲೀಸ್ ಅಧಿಕಾರಿಗಳ ಮೇಲೆ ಸೇರಿದಂತೆ ಭಾಗಿಯಾಗಿದ್ದನು.

5. ಚೇತನ್: ದೊಡ್ಡಕನ್ನಳ್ಳಿ ಈತನು ಹುಳಿಮಾವು ಪೊಲೀಸ್ ಠಾಣಾ ರೌಟಪಟ್ಟಿಯಲ್ಲಿದ್ದು, ಆಗ್ನೇಯ ವಿಭಾಗದಲ್ಲಿ 2011ರಿಂದಲೂ ಕೊಲೆ, ಕೊಲೆ ಪ್ರಯತ್ನ, ದರೋಡೆ, ಸುಲಿಗೆ, ಹಲ್ಲೆ ಸೇರಿದಂತೆ 8 ಪ್ರಕರಣಗಳಲ್ಲಿ ಭಾಗಿಯಾಗಿದ್ದನು.

6.ಕೋಟೇಶ್ವರ : ಇಂದಿರಾನಗರ ಪೊಲೀಸ್ ಠಾಣಾ ರೌಡಿಪಟ್ಟಿಯಲ್ಲಿದ್ದು, ಕಳೆದ 5 ವರ್ಷಗಳಿಂದ ಪೂರ್ವ ವಿಭಾಗ ಮತ್ತು ಆಗ್ನೇಯ ವಿಭಾಗದಲ್ಲಿ ಕೊಲೆ, ಕೊಲೆ ಪ್ರಯತ್ನ, ಹಲ್ಲೆ, ಸುಲಿಗೆ, ಗಾಂಜಾ ಮಾರಾಟ ಪ್ರಕರಣಗಳಲ್ಲಿ ಭಾಗಿಯಾಗಿದ್ದನು.

7. ಸ್ಯಾಮುಯಲ್: ಅಮೃತಹಳ್ಳಿ ಪೊಲೀಸ್ ಠಾಣೆ ರೌಡಿ ಪಟ್ಟಿಯಲ್ಲಿದ್ದು, ಕಳೆದ ಮೂರು ವರ್ಷಗಳಿಂದ ಕೊಲೆ ಪ್ರಯತ್ನ, ಹಲ್ಲೆ, ಸುಲಿಗೆ ಸೇರಿ 5 ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಜಾಮೀನು ಪಡೆದು ಬಿಡುಗಡೆಯಾದ ನಂತರ ವಿಚಾರಣೆಗೆ ಹಾಜರಾಗದೆ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿ ತಲೆ ಮರೆಸಿಕೊಂಡು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದನು.

8. ಮಂಜುನಾಥ್ : ಯಶವಂತಪುರ ಠಾಣೆ ರೌಡಿಪಟ್ಟಿ ಆಸಾಮಿಯಾಗಿದ್ದು, 2005 ರಿಂದ ನಿರಂತರವಾಗಿ ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದು, ಕೊಲೆ, ಕೊಲೆ ಪ್ರಯತ್ನ, ಸುಲಿಗೆ, ಹಲ್ಲೆ, ಗಾಂಜಾ ಮಾರಾಟ ಸೇರಿ 13 ಪ್ರಕರಣಗಳಲ್ಲಿ ಭಾಗಿಯಾಗಿದ್ದನು.

9.ಬಿ. ಹರಿರಾಜಶೆಟ್ಟಿ @ ಹರೀಶ್ ಬಿನ್ ವಸಂತರಾಮ ಶೆಟ್ಟಿ (58): ಈತ ಬೆಂಗಳೂರು ನಗರದ ವೈಯಾಲಿಕಾವಲ್ ಪೊಲೀಸ್ ಠಾಣೆ, ಹೈಗೊಂಡ್ ಅಶೋಕನಗರ, ಬಸವೇಶ್ವರನಗರ ಮತ್ತು ಇಂದಿರಾನಗರ ವ್ಯಾಪ್ತಿಯಲ್ಲಿ ಸೆಂಟರ್ ನಡೆಸುತ್ತ, ರಿಕ್ರಿಯೇಷನ್ ನಡೆಸುವ ಮೂಲಕ ಇತರರಿಗೆ ಕಂಟಕನಾಗಿದ್ದ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.