ETV Bharat / state

ರಾಜ್ಯದಲ್ಲಿಂದು 115 ಜನರನ್ನು ಬಲಿ ಪಡೆದ ಕೊರೊನಾ ಸೋಂಕು

ರಾಜ್ಯದಲ್ಲಿ ಕೊರೊನಾ ಕಾಳಗ ಮುಂದುವರೆದಿದೆ. ಇಂದು ಕೂಡ 8,324 ಜನರಲ್ಲಿ ಸೋಂಕು ದೃಢಪಟ್ಟರೆ, 115 ಜನರು ಕೋವಿಡ್​ಗೆ ಬಲಿಯಾದ ಬಗ್ಗೆ ವರದಿಯಾಗಿದೆ.

8324 new covid-19 cases in Karnataka, 2993  in Bengaluru
ಕರ್ನಾಟಕದಲ್ಲಿ ಮುಂದುವರೆದ ಕೊರೊನಾ ಕಾಳಗ
author img

By

Published : Aug 29, 2020, 8:07 PM IST

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೊರೊನಾ ಅಬ್ಬರ ಮುಂದುವರೆದಿದ್ದು ಇಂದು ಕೂಡ 8,324 ಜನರಲ್ಲಿ ಸೋಂಕು ದೃಢಪಟ್ಟಿದೆ. ಇತ್ತ 115 ಜನರು ಕೋವಿಡ್​ಗೆ ಬಲಿಯಾಗಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 3,27,076 ಕ್ಕೆ ಏರಿಕೆ ಆಗಿದ್ದರೆ, ಇದರಲ್ಲಿ 5483 ಜನರು ಮೃತಪಟ್ಟಿದ್ದಾರೆ.

ಕೋವಿಡ್ ಸೋಂಕು ಇದ್ದ 19‌ ಮಂದಿ ಅನ್ಯಕಾರಣಕ್ಕೆ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಇನ್ನು 8,110 ಗುಣಮುಖರಾಗಿದ್ದು 2,35,128 ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಒಟ್ಟಾರೆ ರಾಜ್ಯದಲ್ಲಿ 86,446 ಸಕ್ರಿಯ ಪ್ರಕರಣಗಳು ಬಾಕಿ ಇವೆ. ಇದರಲ್ಲಿ 721 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರ ಸಂಪರ್ಕದಲ್ಲಿದ್ದ 3,98,584 ಮಂದಿ ಹೋಂ ಕ್ವಾರಂಟೈನ್​ನಲ್ಲಿ ಇದ್ದಾರೆ. ಇಂದು ಒಂದೇ ದಿನ 72,684 ಜನರು ಕೋವಿಡ್ ಪರೀಕ್ಷೆಗೆ ಒಳಗಾಗಿದ್ದು ಇದರಲ್ಲಿ 8,324 ಸೋಂಕು ದೃಢಪಟ್ಟಿದೆ. 27,85,718 ಮಂದಿ ಕೊರೊನಾ ಪರೀಕ್ಷೆಗೆ ಒಳಗಾಗಿದ್ದಾರೆ.

ಬೆಂಗಳೂರಿನ ಕಥೆ ಹೀಗಿದೆ:

ನಗರದಲ್ಲಿಂದು 2,993 ಮಂದಿ ಕೋವಿಡ್ ಸೋಂಕಿಗೆ ಒಳಗಾಗಿದ್ದು, 25 ಮಂದಿ ಮೃತಪಟ್ಟಿದ್ದಾರೆ. ಸೋಂಕಿತರ ಒಟ್ಟು ಸಂಖ್ಯೆ 1,24,442ಕ್ಕೆ ಏರಿಕೆಯಾಗಿದೆ. 2,174 ಮಂದಿ ಇಂದು ಬಿಡುಗಡೆಯಾಗಿದ್ದು, ಒಟ್ಟು 85,215 ಮಂದಿ ಈವರೆಗೆ ಬಿಡುಗಡೆಯಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 37,315 ಇದೆ. ನಗರದಲ್ಲಿ ಒಟ್ಟು ಮೃತಪಟ್ಟವರ ಸಂಖ್ಯೆ 1,911 ಕ್ಕೆ ಏರಿಕೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.