ಬೆಂಗಳೂರು: ನಗರದಲ್ಲಿಂದು 7506 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಬೊಮ್ಮನಹಳ್ಳಿ 741, ದಾಸರಹಳ್ಳಿ 308, ಬೆಂಗಳೂರು ಪೂರ್ವ 929, ಮಹಾದೇವಪುರ 1202 , ಆರ್‌ಆರ್ ನಗರ 537, ಬೆಂಗಳೂರು ದಕ್ಷಿಣ 734, ಬೆಂಗಳೂರು ಪಶ್ಚಿಮ 604, ಯಲಹಂಕ 497 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ.
ರಾಜ್ಯದ ಇತ್ತೀಚಿನ ಕೋವಿಡ್ ಅಪ್ಡೇಟ್: ರಾಜ್ಯದಲ್ಲಿ ನಿನ್ನೆ 31,183 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 23,98,925ಕ್ಕೆ ಏರಿಕೆ ಆಗಿತ್ತು. 61,766 ಮಂದಿ ಡಿಸ್ಟಾರ್ಜ್ ಆಗಿದ್ದು, ಈತನಕ 18,91,042 ಜನರು ಗುಣಮುಖರಾಗಿದ್ದರು.
ಸದ್ಯ ಸಕ್ರಿಯ ಪ್ರಕರಣಗಳು 4,83,204 ಇವೆ. ರಾಜ್ಯದಲ್ಲಿ ಸೋಂಕಿತರ ಪ್ರಕರಣಗಳ ಶೇಕಡಾವಾರು 24.21ರಷ್ಟು ಇದ್ದು, ಸಾವಿನ ಶೇಕಡಾವಾರು ಪ್ರಮಾಣ 1.44ರಷ್ಟು ಇದೆ. ಕೋವಿಡ್ಗೆ 451 ಸೋಂಕಿತರು ಮೃತರಾಗಿದ್ದು, ಒಟ್ಟು ಸಾವಿನ ಸಂಖ್ಯೆ 24,658ಕ್ಕೆ ಏರಿದೆ.
ಓದಿ: 'ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಪರೀಕ್ಷೆಗಳನ್ನು ನಡೆಸಬೇಕಾದ್ದು ಅನಿವಾರ್ಯ'