ಬೆಂಗಳೂರು: ಪ್ರಾಣದ ಹಂಗು ತೊರೆದು ಹೋರಾಡುತ್ತಿರುವ ಸಾವಿರಾರು ಕೊರೊನಾ ವಾರಿಯರ್ಸ್ಗಳಿಗೆ ಟಿಮ್ಕೆನ್ ಫೌಂಡೇಶನ್ ಆಫ್ ಕ್ಯಾಂಟನ್ ಅಸೋಸಿಯೇಷನ್ ಆಫ್ 41 ಇಂಡಿಯಾ ಮತ್ತು ರೌಂಡ್ ಟೇಬಲ್ ಇಂಡಿಯಾ ಲೇಡೀಸ್ ಸರ್ಕಲ್ ಇಂಡಿಯಾ ಸಹಯೋಗದೊಂದಿಗೆ 7,500 ಪಿಪಿಇ ಕಿಟ್ಗಳನ್ನು ವಿತರಿಸಲಾಯಿತು.
ನಿಮ್ಹಾನ್ಸ್ ನಿರ್ದೇಶಕ ಡಾ.ಬಿ.ಎನ್.ಗಂಗಾಧರ್ ಅವರಿಗೆ ಕೊರೊನಾ ಸೋಂಕಿತರನ್ನು ರಕ್ಷಿಸುವವರ ರಕ್ಷಣೆಗಾಗಿ ಹೈರಿಸ್ಕ್ ಪರ್ಸನಲ್ ಪ್ರೊಟೆಕ್ಟಿವ್ ಕಿಟ್‍ಗಳನ್ನು ಹಸ್ತಾಂತರಿಸಲಾಯಿತು.
ಜಯದೇವ ಇನ್‍ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ, ಗಾಂಧಿ ಇನ್‍ಸ್ಟಿಟ್ಯೂಟ್ ಆಫ್ ಟ್ರಾಮಾ ಅಂಡ್ ಆರ್ಥೋಪೆಡಿಕ್ಸ್, ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ, ಕಿದ್ವಾಯಿ ಮೆಮೋರಿಯಲ್ ಇನ್ಸ್‍ಟಿಟ್ಯೂಟ್ ಆಫ್ ಆಂಕೊಲಾಜಿ, ಬೌರಿಂಗ್ ಮತ್ತು ಲೇಡಿ ಕರ್ಜನ್ ವೈದ್ಯಕೀಯ ಕಾಲೇಜು ಆಸ್ಪತ್ರೆ ಅಧಿಕಾರಿಗಳಿಗೂ ಈ ಕಿಟ್‌ಗಳನ್ನು ಹಸ್ತಾಂತರಿಸಲಾಗಿದೆ. ಅಲ್ಲದೇ, 500 ರೇಷನ್ ಕಿಟ್‍ಗಳನ್ನು ಹೊಂಬೆ ಗೌಡ ನಗರ, ಲಕ್ಕಸಂದ್ರ, ವಿಲ್ಸನ್ ಗಾರ್ಡನ್‍ಗಳಲ್ಲಿ ವಿತರಿಸಲಾಯಿತು.
ಕೋವಿಡ್ -19 ವಾರಿಯರ್ಸ್ ಬೆಂಬಲಿಸಲು 1 ಲಕ್ಷ ಪ್ಲೈ ಹನಿಕಾಂಬ್ ಮಾಸ್ಕ್ ಮತ್ತು 2 ಲಕ್ಷ ಪ್ಲೈ ಶುದ್ಧ ಹತ್ತಿ ಮಾಸ್ಕ್‌ಗಳನ್ನು ಬೆಂಗಳೂರು ನಗರದ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಅವರಿಗೆ ಹಸ್ತಾಂತರಿಸಿದರು.