ETV Bharat / state

600 ವರ್ಷ ಹಳೆಯ ತಿರುಮಲ ವಿಗ್ರಹ ಪತ್ತೆ: ತಮಿಳುನಾಡಿನಲ್ಲಿ ಸಿಕ್ತು ಮಂಡ್ಯ ಮೂಲದ ವಿಗ್ರಹ - Mandya origin idol

ವಕೀಲ ಪಳನಿಸ್ವಾಮಿ ನಟರಾಜನ್ ಎಂಬ ವಕೀಲರ ಬಳಿ ಜೂನಿಯರ್ ಆಗಿ ಕೆಲಸ ಮಾಡುತ್ತಿದ್ದ. ನಟರಾಜನ್​ಗೆ ಕರ್ನಾಟಕದ ಮಂಡ್ಯದಲ್ಲಿರುವ ದೇವಸ್ಥಾನದ ಅರ್ಚಕರೊಬ್ಬರು ಪರಿಚಯವಿದ್ದರು. ಅವರಿಂದಲೇ ನಟರಾಜನ್ ತಿರುಮಲ ಪ್ರತಿಮೆಯನ್ನು 2017 ರಲ್ಲಿ ಖರೀದಿಸಿದ್ದರು. ನಂತರ ವಿಗ್ರಹವನ್ನು ಕಾರಿನಲ್ಲಿ ತರುವಾಗ, ನಟರಾಜನ್​ ​ನನ್ನು ಕರ್ನಾಟಕ ಪೊಲೀಸರು ಬಂಧಿಸಿ ಕಳ್ಳತನದ ಆರೋಪದಲ್ಲಿ ಜೈಲಿಗಟ್ಟಿದ್ದರು.

600 ವರ್ಷ ಹಳೆಯ ತಿರುಮಲ ವಿಗ್ರಹ ಪತ್ತೆ: ತಮಿಳುನಾಡಿನಲ್ಲಿ ಸಿಕ್ತು ಮಂಡ್ಯ ಮೂಲದ ವಿಗ್ರಹ
600 year old Tirumala idol discovered: Mandya origin idol found in Tamil Nadu
author img

By

Published : Nov 11, 2022, 3:09 PM IST

ಈರೋಡ್ (ತಮಿಳು ನಾಡು): ಮಂಡ್ಯದ ದೇವಸ್ಥಾನವೊಂದರಿಂದ ಕಳುವಾದ 600 ವರ್ಷ ಹಳೆಯ ತಿರುಮಲ ಬಾಲಾಜಿ ಮೂರ್ತಿಯೊಂದನ್ನು ತಮಿಳುನಾಡಿನ ಮೂರ್ತಿ ಕಳ್ಳಸಾಗಣೆ ನಿಗ್ರಹ ದಳ ಪೊಲೀಸರು ಪತ್ತೆ ಮಾಡಿದ್ದಾರೆ.

ಕೆಲ ವರ್ಷಗಳ ಹಿಂದೆ ಮಂಡ್ಯದ ದೇವಸ್ಥಾನವೊಂದರ ಪೂಜಾರಿಯೊಬ್ಬರು ತಿರುಮಲ ವಿಗ್ರಹವನ್ನು ಕದ್ದು ಗೋಬಿಚೆಟ್ಟಿಪಾಳ್ಯದ ವಕೀಲರಿಗೆ ಮಾರಾಟ ಮಾಡಿದ್ದರು ಎಂಬ ಮಾಹಿತಿ ಮೂರ್ತಿ ಕಳ್ಳಸಾಗಣೆ ನಿಗ್ರಹ ದಳ ಪೊಲೀಸರಿಗೆ ಲಭಿಸಿತ್ತು.

ಈರೋಡ್​​ನ ಅವಿನಾಶಿ ರಸ್ತೆಯ ಕಾಫಿ ಶಾಪ್‌ನಲ್ಲಿ ದಲ್ಲಾಳಿಯೊಬ್ಬ ಮಾರುವೇಷದಲ್ಲಿ ಪೊಲೀಸರ ಬಳಿಗೆ ಬಂದು 600 ವರ್ಷಗಳಷ್ಟು ಹಳೆಯ ತಿರುಮಲ ಪ್ರತಿಮೆಯೊಂದು ತನ್ನ ಸ್ನೇಹಿತ ವಕೀಲ ಪಳನಿಸ್ವಾಮಿ ಒಡೆತನದಲ್ಲಿದೆ ಮತ್ತು ಅದರ ಮೌಲ್ಯ ಸುಮಾರು 33 ಕೋಟಿ ರೂಪಾಯಿ ಎಂದು ತಿಳಿಸಿದ್ದ. ನಂತರ ಪೊಲೀಸರು ಮೂರ್ತಿ ಖರೀದಿಸುವವರ ಹಾಗೆ ವಕೀಲನ ಮನೆಗೆ ತೆರಳಿ, ಮೂರ್ತಿ ತಮಗೆ ಮಾರುವಂತೆ ಕೇಳಿದ್ದರು.

15 ಕೋಟಿ ರೂಪಾಯಿಗಳಿಗೆ ವ್ಯವಹಾರ ಕುದುರಿಸಿದ ನಂತರ ಪಳನಿಸ್ವಾಮಿ ಮರುದಿನ ಮಾರಾಟ ಮಾಡಲು ಮೂರ್ತಿಯನ್ನು ತಂದಿದ್ದ. ಈ ಸಮಯಕ್ಕಾಗಿಯೇ ಕಾಯುತ್ತಿದ್ದ ಮೂರ್ತಿ ಕಳ್ಳಸಾಗಣೆ ನಿಗ್ರಹ ದಳ ಪೊಲೀಸರು ವಕೀಲನನ್ನು ಸುದೀರ್ಘ ವಿಚಾರಣೆಗೊಳಪಡಿಸಿದ್ದರು.

ವಿಚಾರಣೆಯಲ್ಲಿ ಬಹಿರಂಗವಾದ ಮಾಹಿತಿ: ವಕೀಲ ಪಳನಿಸ್ವಾಮಿ ನಟರಾಜನ್ ಎಂಬ ವಕೀಲರ ಬಳಿ ಜೂನಿಯರ್ ಆಗಿ ಕೆಲಸ ಮಾಡುತ್ತಿದ್ದ. ನಟರಾಜನ್​ಗೆ ಕರ್ನಾಟಕದ ಮಂಡ್ಯದಲ್ಲಿರುವ ದೇವಸ್ಥಾನದ ಅರ್ಚಕರೊಬ್ಬರು ಪರಿಚಯವಿದ್ದರು. ಅವರಿಂದಲೇ ನಟರಾಜನ್ ತಿರುಮಲ ಪ್ರತಿಮೆಯನ್ನು 2017 ರಲ್ಲಿ ಖರೀದಿಸಿದ್ದರು. ನಂತರ ವಿಗ್ರಹವನ್ನು ಕಾರಿನಲ್ಲಿ ತರುವಾಗ, ನಟರಾಜನ್​​ನನ್ನು ಕರ್ನಾಟಕ ಪೊಲೀಸರು ಬಂಧಿಸಿ ಕಳ್ಳತನದ ಆರೋಪದಲ್ಲಿ ಜೈಲಿಗಟ್ಟಿದ್ದರು. ಬಳಿಕ ಮೂರ್ತಿಯ ಬಗ್ಗೆ ಸುಳ್ಳು ಪ್ರಮಾಣಪತ್ರ ಸಿದ್ಧಪಡಿಸಿ ಕೊಟ್ಟ ನಟರಾಜನ್ ಪ್ರಕರಣದಿಂದ ಬಿಡುಗಡೆಯಾಗಿದ್ದ.

ಆ ಬಳಿಕ ನಟರಾಜನ್ ಬಾಲಾಜಿ ಮೂರ್ತಿಯನ್ನು 50 ಕೋಟಿ ರೂಪಾಯಿಗೆ ಮಾರಾಟ ಮಾಡಲು ಮುಂದಾಗಿದ್ದ. ಆದರೆ, 50 ಕೋಟಿ ರೂಪಾಯಿ ತುಂಬಾ ಜಾಸ್ತಿಯಾಗಿದ್ದರಿಂದ ಅದನ್ನು ಖರೀದಿಸಲು ಯಾರೂ ಮುಂದೆ ಬರಲಿಲ್ಲ. 2018 ರಲ್ಲಿ ತನ್ನ ಕಿರಿಯ ವಕೀಲ ಪಳನಿಸ್ವಾಮಿಗೆ ವಿಗ್ರಹ ನೀಡಿದ ನಂತರ ನಟರಾಜನ್ ಮೃತಪಟ್ಟಿದ್ದ.

15 ಕೋಟಿ ರೂಪಾಯಿಗೆ ಮಾರಾಟಕ್ಕೆ ಯತ್ನ: ಆ ಬಳಿಕ ಮೂರ್ತಿಯ ಮೌಲ್ಯ ಕಡಿಮೆ ಮಾಡಿದ ವಕೀಲ ಪಳನಿಸ್ವಾಮಿ, ಅದನ್ನು ದಲ್ಲಾಳಿಗಳ ಮೂಲಕ ಮಾರಾಟ ಮಾಡಲು ಮುಂದಾಗಿದ್ದ. ಈ ಹಂತದಲ್ಲಿಯೇ ವಿಗ್ರಹ ಕಳ್ಳ ಸಾಗಣೆ ತಡೆ ದಳದ ಪೊಲೀಸರು ಮಾರುವೇಷದಲ್ಲಿ ಬಂದು ಮಾತುಕತೆ ನಡೆಸಿ, ಪಳನಿಸ್ವಾಮಿಯನ್ನು ವಿಚಾರಣೆಗೊಳಪಡಿಸಿ ಮೂರ್ತಿ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಮತ್ತೊಂದು ಪುರಾತನ ವಿಗ್ರಹ ಅಮೆರಿಕದಲ್ಲಿ ಪತ್ತೆ: ಮರಳಿ ತರಲು ಐಡಲ್ ವಿಂಗ್ ಯತ್ನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.